ಭರವಸೆ ಮೂಡಿಸದ ಹೆಚ್ ಡಿಕೆ ಮಾತುಗಳು

ಸುದ್ದಿಲೈವ್/ಶಿವಮೊಗ್ಗ

ಹೆಚ್ ಡಿ ಕುಮಾರ ಸ್ವಾಮಿ, ಕೇಂದ್ರ ಸಚಿವರಾಗಿ ಮೊದಲಬಾರಿಗೆ ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಿರುವುದು ಸಂತಸ ತಂದರೂ ಆರಂಭಿಕವಾಗಿ ಕೊಂಚ ಗೊಂದಲವನ್ನೇ ಮೂಡಿಸಿದೆ.

ಕೇಂದ್ರ ಸಚಿವ ಹೆಚ್ ಡಿ ಕೆ ಈ ಮೊದಲು ಮಾಜಿ ಸಿಎಂ ಎನಿಸಿಕೊಂಡಾಗ ಹಲವಾರು ಭಾರಿ ಭದ್ರಾವತಿಗೆ ಬಂದಿದ್ದು, ಕಾರ್ಖಾನೆಯ ಉಳಿವಿನ ಬಗ್ಗೆ ಬಂಡವಾಳ ಹೂಡಿಕೆ ಬಗ್ಗೆ ಹಲವು ನಿರೀಕ್ಷೆ ಮೂಡಿಸುವ ಮಾತನಾಡಿದ ಹುರುಪು, ಆವೇಶ ಕೇಂದ್ರ ಸಚಿವರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಬಂದ ಅವರಿಂದ ನಿರೀಕ್ಷಿತ ಮಟ್ಟದ ಭರವಸೆ ಮೂಡಿಲ್ಲ ಎಂದೇ ಹೇಳಬಹುದು.

ಬಂಡವಾಳ ಹಿಂತೆಗೆತದ ಪಟ್ಟಿಯಲ್ಲಿರುವ ಮತ್ತು ಕ್ಲೋಸಿಂಗ್ ನಲ್ಲಿರುವ ಈ ಕಾರ್ಖಾನೆಯನ್ನ ಮುಕ್ತಿಗೊಳಿಸಿ ಇನ್ನೇನು ಬಂಡವಾಳವನ್ನ ಹರಿಸಲಿದ್ದಾರೆ ಎಂಬ ಪ್ರಶ್ನೆಗಳಿಗೆ ಸಚಿವರ ಉತ್ತರ ಸ್ಪಷ್ಟತೆಯಿರಲಿಲ್ಲ. ಮಾಹಿತಿ ಪಡೆಯಲು ಬಂದಿದ್ದೇನೆ ಎಂಬ ಉತ್ತರ ಆರಂಭಿಕದಲ್ಲಿಯೇ ಗೊಂದಲ ಮೂಡಿಸುದ್ರು. ಭರವಸೆಗಳನ್ನ ಮೂಡಿಸುವ ಮಾತುಗಳು ಬೇರೆ ಇರ್ತಾವೆ. ಇದು ಸಹ ಸಧ್ಯಕ್ಕೆ ಸಾಂಪ್ರದಾಯಿಕ ವಿಸಿಟ್ ಆಗಿದೆ.

ಹೆಚ್ ಡಿಕೆಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಸ್ಥಾನ ಸಿಗುತ್ತಿದ್ದಂತೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಉಳಿವಿಗೆ ಸಚಿವರು ನೆರವಾಗ್ತಾರೆ ಎಂಬ ನಂಬಿಕೆ ಹರಡಿದೆ. ಈ ನಂಬಿಕೆ ಉಳಿದರೆ ರಾಜಕೀಯವಾಗಿಯೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷಕ್ಕೆ ಭದ್ರಾವತಿಯಲ್ಲಿ ಹೊಸ‌ಅಧ್ಯಾಯನವೇ ಆರಂಭವಾಗಲಿದೆ.

ಆದರೆ ಆ ನಂಬಿಕೆಯನ್ನ ರಾಜಕೀಯ ಪಕ್ಷವಾಗಿ ಎರಡೂ ಪಕ್ಷಗಳು ಹೇಗೆ ತೆಗೆದುಕೊಳ್ಳಲಿವೆ ಎಂಬುದರ ಜೊತೆಗೆ ಭದ್ರಾವತಿಯ ಚಿತ್ರಣವೇ ಬದಲಾಗಲಿದೆ. ಜಿಂದಾಲ್, ಟಾಟಾ ಸ್ಟೀಲ್ ಮೊದಲಾದ ಖಾಸಗಿ ಕಂಪನಿಗಳು ಲಾಭದಲ್ಲಿ ನಡೆಯುವುದಾದರೆ ವಿಐಎಸ್ಎಲ್ ಯಾಕೆ ಲಾಭಕ್ಕೆ ಬರೊಲ್ಲ ಎಂದು ಯೋಚನೆ ಮಾಡಿ ಹೆಜ್ಜೆ ಇಡಬೇಕಿದೆ.

ಇದನ್ನೂ ಓದಿ-https://suddilive.in/archives/18189

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close