ಸೊರಬ: ಅಡಿಕೆ ಕಳುವು ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

ಸುದ್ದಿಲೈವ್/ಸೊರಬ

ವರದಿ: ದತ್ತಾ ಸೊರಬ

ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಅಡಿಕೆ ಕದ್ದು ಪರಾರಿಯಾಗಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಯಿಂದ 4.70 ಲಕ್ಷ ರೂ., ನಗದು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ್ದ 8 ಲಕ್ಷ ರೂ., ಮೌಲ್ಯದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ತಾಲೂಕಿನ ಮೂಡುಗೋಡು ಗ್ರಾಮದ ಜಯಕುಮಾರ್ ಎಂಬುವವರು ತಮ್ಮ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಮತ್ತು ಗೇರು ಬೀಜ ಕಳ್ಳತನವಾಗಿರುವ ಕುರಿತು ಮೇ.10 ರಂದು ದೂರು ದಾಖಲಾಗಿತ್ತು.

ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಮಾವಲಿ ಗ್ರಾಮದ ಸಮೀಪದಲ್ಲಿ ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ನಿವಾಸಿ ನಂದಿಶ್ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ನಾಲ್ವರು ತಲೆಮರೆಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಎಎಸ್ಪಿ ಅನಿಕುಮಾರ್ ಭೂಮರೆಡ್ಡಿ, ಎಎಸ್ಪಿ ಎ.ಜಿ. ಕಾರಿಯಪ್ಪ, ಡಿವೈಎಸ್ಪಿ ಕೆ.ಇ. ಕೇಶವ ಮಾರ್ಗದರ್ಶನಲ್ಲಿ ಸೊರಬ ಸಿಪಿಐ ರಮೇಶ್ ರಾವ್, ಪಿಎಸ್ಐ ಎಚ್.ಎನ್. ನಾಗರಾಜ್, ಎಎಸ್ಐಗಳಾದ ಲಿಂಗರಾಜ, ಪ್ರಭಾಕರ, ಎಚ್ ಪಿಸಿಗಳಾದ ರಾಜುನಾಯ್ಕ್, ನಾಗರಾಜ, ಅಶೋಕ, ನಾಗೇಶ್, ಕಾನ್ಸ್‌ಟೇಬಲ್ ಗಳಾದ ಕೆ.ಎನ್. ಲೋಕೇಶ್, ರಾಘವೇಂದ್ರ, ವಿನಯ, ಮಲ್ಲೇಶ್, ವಿಶ್ವನಾಥ, ಶಶೀಧರ, ಉಮೇಶ ಪರಸಪ್ಪ, ಸುನೀಲ್, ಸಂದೀಪ್, ಲೋಕೇಶ್, ಆನವಟ್ಟಿ ಠಾಣೆಯ ಆರ್.ಸಿ. ಮಂಜುನಾಥ, ಶಿವಮೊಗ್ಗ ಸಿಡಿಆರ್ ಸೆಲ್ ನ ವಿಜಯಕುಮಾರ್, ಇಂದ್ರೇಶ್ ಅವರನ್ನು ಒಳಗೊಂಡ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ‌.

ಇದನ್ನೂ ಓದಿ-https://suddilive.in/archives/16024

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close