ಕಲ್ಲಾಪುರದಲ್ಲಿ ಅಕ್ರಮ ಮದ್ಯಮಾರಟ-ದೂರು ಪ್ರತಿದೂರು ದಾಖಲು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪುರ ಗ್ರಾಮದಲ್ಲಿ ಅಂಗಡಿಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ವಿಚಾರದಲ್ಲಿ ದೂರು ಪ್ರತಿದೂರು ದಾಖಲಾಗಿದೆ. ದೂರಿನಲ್ಲಿ ಪಿಡಿಒ ವಿರುದ್ಧವೇ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಮಧ್ಯೆ ಪಿಡಿಒರವರ ವಿರುದ್ಧ ಡಿಎಸ್ ಎಸ್ ನ ಮುಖಂಡರು ದೂರಿದ್ದಾರೆ. ಪಿಡಿಒ ಕುಮ್ಮಕ್ಕಿನಿಂದ ಅಂಗಡಿಯಲ್ಲಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು ಇದರಿಂದ ಡಿಎಸ್ ಎಸ್ ಮುಖಂಡರು ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಮತ್ತು ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಪಿಡಿಒ ವಿರುದ್ಧ ದೂರು ದಾಖಲಿಸಿದ್ದಾರೆ.

ಪಿಡಿಒ ಶಿವಶಂಕರ್, ಮುನಿಯಪ್ಪ, ರಂಜಿತ ಸೇರಿದಂತೆ 7 ಜನರ ವಿರುದ್ಧ ದೂರು ದಾಖಲಾದರೆ, ಇದಕ್ಕೆ ಪ್ರತಿಯಾಗಿ ಮುನಿಯಪ್ಪನವರ ಪತ್ನಿಯಿಂದ ರಂಗನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ.

ಮುನಿಯಪ್ಪನವರ ಪತ್ನಿ ಅಂಗಡಿಯೊಂದನ್ನ ಕಲ್ಲಾಪುರದಲ್ಲಿ ನಡೆಸುತ್ತಿದ್ದು ಈ ಅಂಗಡಿಯಲ್ಲಿ ಮದ್ಯಮಾರಾಟ ಮಾಡುತ್ತಿದ್ದಕಾರಾಣ ಇದನ್ನ ಡಿಎಸ್ ಎಸ್ ಮುಖಂಡರೊಬ್ಬರು ಗಮನಿಸಿ ಇದುಸರಿಯಲ್ಲ. ಹಣಕೊಟ್ಟರೆ ಮದ್ಯ ಮಾರಾಟಕ್ಕೆ ಅವಕಾಶಕೊಡುವುದಾಗಿ ತಿಳಿಸಿ ಮುನಿಯಪ್ಪ ಮತ್ತು ಪತ್ನಿಯವರಿಂದ ಹಣಪಡೆದು ಮದ್ಯ ಮಾರಾಟ ಮಾಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಯವರು ದಾಖಲಿಸಿದ್ದರಿಂದ ನಂತರದ ದಿನಗಳಲ್ಲಿ ಅಂಗಡಿಯಲ್ಲಿ ಮದ್ಯ ಮಾರಾಟ ಬಂದ್ ಆಗಿರುತ್ತದೆ. ಆದರೂ ಡಿಎಸ್ ಎಸ್ ಮುಖಂಡರು ಎಂದು ಹೇಳಿಕೊಂಡವರು ನಂತರವೂ ಹಣಕೊಡಲು ಬೇಡಿಕೆ ಇಟ್ಟಿದ್ದು ಇದನ್ನ ಕೊಡಲು ತಿರಸ್ಕರಿಸಿದ ಮುನಿಯಪ್ಪನವರ ಪತ್ನಿಗೆ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿರುತ್ತಾರೆ.

ಆಗ ಅಂಗಡಿ ಸುತ್ತಮುತ್ತ ಮದ್ಯದ ಬಾಟಲುಗಳನ್ನ ಬಿಸಾಕಿ ವಿಡಿಯೋ ಮಾಡಿಕೊಂಡು ಮದ್ಯ ಮಾರಾಟದ ಬಗ್ಗೆ ಬೆದರಿಕೆಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದನ್ನ ಕೇಳಲು ಹೋದ ಮುನಿಯಪ್ಪ,ಅವರ ಮಗಳು ಮತ್ತು ತಂಗಿಯ ಮೇಲೆ ಡಿಎಸ್ ಎಸ್ ಮುಖಂಡರು, ಅವರ ಪತ್ನಿ ಮತ್ತು ತಾಯಿ ಅವ್ಯಚ್ಯ ಶಬ್ದಗಳಿಂದ ಬೈದು ಅವರ ಅಳಿಯ ಮತ್ತು ಮಗನು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/17866

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close