ಸುದ್ದಿಲೈವ್/ಶಿವಮೊಗ್ಗ
ಇದು 2020 ರ ಪ್ರಕರಣ, ರಸ್ತೆಯ ಮೇಲೆ ತಿರುಗಾಡುವವರನ್ನ ಮಾರಕಾಸ್ತ್ರಗಳನ್ನ ತೋರಿಸಿ ಭಯ ಹುಟ್ಟಿಸಿ ಸುಲಿಗೆಗೆ ಸ್ಕೆಚ್ ಹಾಕಿದ್ದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿನಾಂಕ: 16-09-2020 ರಂದು ರಾತ್ರಿ ಶಿವಮೊಗ್ಗ ನಗರದ ವಿದ್ಯಾನಗರ ಮುಖ್ಯ ರಸ್ತೆಯ ಕಡೆಯಿಂದ ಮತ್ತೂರು ಕಡೆಗೆ ಹೋಗುವ ರಸ್ತೆಯ ಬಳಿ ಅಪರಿಚಿತ ವ್ಯಕ್ತಿಗಳು ಅಪಾಯಕರವಾದ ಆಯುಧಗಳನ್ನು ಹೊಂದಿ ರಸ್ತೆಯಲ್ಲಿ ಓಡಾಡುವ ಜನರಿಗೆ ಅಡ್ಡಗಟ್ಟಿ ರಾಬರಿ ನಡೆಸಲು ಸಂಚು ಹಾಕುತ್ತಿರುವ ಬಗ್ಗೆ ಕೋಟೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ಹಣ ಮತ್ತು ಒಡವೆ ಸುಲಿಗೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇರೆಗೆ ಆಗಿನ ಕೋಟೆ ಪಿಐ ಚಂದ್ರಶೇಖರ್ ಟಿ ಪಿ, ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಧಾವಿಸಿ ಓರ್ವನನ್ನಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದರು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಪಿಎಸ್ಐ ಶಿವಾನಂದ ಕೋಳಿ ರವರು ಪ್ರಕರಣದ ತನಿಖೆ ಪೂರೈಸಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಪಿ. ಒ. ಪುಷ್ಪ, ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು.
ಘನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ದಿನಾಂಕ: 13-06-2024 ರಂದು ಮಾನ್ಯ ನ್ಯಾಯಾಧಿಶರಾದ ಶ್ರೀಮತಿ ಪಲ್ಲವಿ ಬಿ. ಆರ್ ರವರು ಆರೋಪಿ ಎ-2 ಸಲ್ಮಾನ್ @ ಲಲ್ಲಾ, 24 ವರ್ಷ, ಮೀರತ್, ಉತ್ತರ ಪ್ರದೇಶ ರಾಜ್ಯ ಈತನಿಗೆ 5 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 8,000/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 10 ದಿನ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/16959