ಸುದ್ದಿಲೈವ್/ಶಿವಮೊಗ್ಗ
ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಬುಗಿಲೆದ್ದಿದೆ.
ಸಚಿವ ಮಧು ಬಂಗಾರಪ್ಪನವರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತ ಮತ್ತು ಪತಿ ಡಾ.ಶಿವರಾಜ್ ಕುಮಾರ್ ಅವರ ಎದುರೇ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.
ಹೆಚ್ ಸಿ ಯೋಗೀಶ್ ಮಾತನಾಡುವಾಗ ಕಾರ್ಯಕರ್ತರಾದ ಸಿದ್ದಪ್ಪ ಎಂಬುವರು ಇಷ್ಟು ದೊಡ್ಡ ದೊಡ್ಡ ಭಾಷಣ ಮಾಡುತ್ತೀರಿ, ಬೈಂದೂರಿನಲ್ಪಿ 56 ಸಾವಿರ ಮತ ಲೀಡ್ ಬರುತ್ತದೆ. ಸಾಗರದಲ್ಲಿ 26 ಸಾವಿರ ಲೀಡ್ ಬರುತ್ತದೆ. ನಗರದಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳು ಬರುತ್ತದೆ. ಹಾಗಾದರೆ ಮತಗಳು ಯಾಕೆ ಬೀಳಲಿಲ್ಲ ಎಂದು ಆಕ್ಷೇಪಿಸಿದರು.
ಅವರನ್ನ ಇತರೆ ಕಾರ್ಯಕರ್ತರು ಸಮಾಧಾನಗೊಳಿಸಿದ್ದು ಬಿಟ್ಟರೆ ಸಭೆಯಲ್ಲಿ 5.35 ಲಕ್ಷ ಬಂದಿದೆ ಎಂಬುದೇ ದೊಡ್ಡ ಭಾಷಣವಾಗಿತ್ತು. 2019 ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ ಮಧು ಬಂಗಾರಪ್ಪನವರಿಗೆ ಮೈತ್ರಿ ಸರ್ಕಾರವಿದ್ದಾಗಲೇ 5,06,212 ಮತಗಳನ್ನ ಪಡೆದಿದ್ದರು. ಈ ಬಾರಿ 5,35,006 ಮತಗಳು ಲಭಿಸಿದೆ. ಕಳೆದ ಬಾರಿಗಿಂತ 30 ಸಾವಿರ ಮತಗಳು ಹೆಚ್ಚು ಬಿದ್ದಿದೆ.
ಬಿಜೆಪಿ ಅಭ್ಯರ್ಥಿಗೆ 2019 ರಲ್ಲಿ 7,28,909 ಮತಗಳು ಈ ಬಾರಿ 7,78,721 ಮತಗಳು. ಅಲ್ಲಿಗೆ 50 ಸಾವಿರ ಮತಗಳು ಹೆಚ್ಚಾಗಿದೆ. 2019 ರಲ್ಲಿ ಶೇ.76.24 ರಷ್ಟು ಮತಗಳು ಚಲಾವಣೆಯಾದರೆ 2024 ರಲ್ಲಿ 78.33% ಮತದಾನವಾಗಿದೆ. ಶೇ.2 ರಷ್ಟು ಮತದಾನವೂ ಹೆಚ್ಚಾಗಿದೆ. ಈ ಬಗ್ಗೆ ಸಭೆಯಲ್ಲಿ ಮಾತನಾಡದೆ ಇರುವುದು ವಿಪರ್ಯಾಸವಾಗಿದೆ.
ಕೃತಜ್ಞತಾ ಸಭೆಯಲ್ಲಿ ಸಚಿವಮಧು ಬಂಗಾರಪ್ಪನವರು ಎಕ್ಸಿಟ್ ಪೋಲ್ ಗಳಲ್ಲಿ ಮಧ್ಯಮ ಸೋಲುಂಡಿದೆ ಎಂದಿದ್ದಾರೆ. ಏಜೆನ್ಸಿಗಳು ನಡೆಸಿದ ಸಮೀಕ್ಷೆಯನ್ನ ಮಾಧ್ಯಮಗಳು ಎಕ್ಸಿಟ್ ಪೋಲ್ ನಲ್ಲಿ ತೋರಿಸಿದ್ದಾರೆಯೇ ಹೊರತು ಮಾಧ್ಯಮಗಳೇ ನಡೆಸಿದ ಸಮೀಕ್ಷೆ ಅದು ಆಗಿರಲಿಲ್ಲ ಎಂಬುದು ಅರಿಯದೆ ಹೋಗಿರುವುದು ದುರಂತವೇ.
ಇದನ್ನೂ ಓದಿ-https://suddilive.in/archives/16620