ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ಉತ್ತಮ ಫಲಿತಾಂಶ ಬಂದಿದ್ದಕ್ಕೆ ಶ್ಲಾಘಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜೊತೆ ಜೊತೆಗೆ ದಾಖಲಾತಿ, ಶಾಲೆಯ ಶಿಕ್ಷಕರ ಚಲನವಲನದ ಬಗ್ಗೆ ಡಿಡಿಪಿಐ ಮತ್ತು ಬೀಒಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಿದರು.
ಇಂದು ಜಿಪಂನ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿರವರ ನೇತೃತ್ವ ಸಾಮಾನ್ಯ ಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಮತ್ತು ಪ್ರಗತಿ ಪರಿಶೀಲನ ಸಭೆ ನಡೆದಿದೆ. ಶಿಕ್ಷಣ ಆರೋಗ್ಯ, ಕೃಷಿ, ಪಶು ವೈದ್ಯಕೀಯ ಮೊದಲಾದ ಇಲಾಖೆಯ ಬಗ್ಗೆ ಚರ್ಚಿಸಲಾಗಿದೆ.
ಸಭೆಯಲ್ಲಿ ಮಾತನಾಡಿದ ಶಿಜ್ಷಣ ಇಲಾಖೆಯ ಶಿಕ್ಷಣ ಅಧಿಕಾರಿ ಲೋಕೇಶ್ ಮಾತನಾಡಿ, ಶಾಲಾ ಮಕ್ಕಳಿಗೆ 99% ಸಮವಸ್ತ್ರ, ಟೆಕ್ಸ್ಟ್ ಬುಕ್ ನೀಡಲಾಗಿದೆ. ಶಾಲಾ ದುರಸ್ತಿಗೆ ಕ್ರಿಯಾ ಯೋಜನೆ ರಚಿಸಿ ನೀಡಲಾಗುವುದು. ಶಾಲಾ ದಾಖಲಾತಿ ಬಗ್ಗೆ ಮಾತನಾಡಿದ ಅವರು 53% ಇದೆ. ಹೆಚ್ಚಾಗಬೇಕು. ಎಂದರು.
ಇದಕ್ಕೆ ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಶಿವಮೊಗ್ಗದಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ ಎಂದು ಆಕ್ಷೇಪಿಸಿದ ಅವರು ಶಿವಮೊಗ್ಗ ಜಿಲ್ಲೆಯನ್ನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ಶ್ಲಾಘಿಸಿದರು. ಕೆಲವೊಂದರ ಬಗ್ಗೆ ಖಡಕ್ ಸೂಚನೆ ನೀಡಿದರು.
ನಂತರ ಮಾತನಾಡಿದ ಲೋಕೇಶ್, ಮಕ್ಕಳನ್ನ ಶಾಲೆಗೆ ದಾಖಲಿಸುವ ಅಂದೋಲನ ಮಾಡಲಾಗುತ್ತಿದೆ. ಮನೆ ಮನೆಗೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ ಎಂದರು.
ನಂತರ ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿಗಳು, ಶಾಲೆಯ ಶಿಕ್ಷಕರ ಹಾಜರಾತಿಯನ್ನ ಸರಿಯಾಗಿ ನಿರ್ವಹಿಸಬೇಕು. ಮಿಂಚಿನ ಸಂಚಾರಕ್ಕೆ ಎಸ್ ಟಿಪಿ ಅಕಾಡೆಮಿಕ್ ಕಾಲ್ ನೇಮಿಸಬೇಕು. ತಪಾಸಣೆ ನಡೆಸುವಂತೆ ಸೂಚಿಸಿದರು.
ಡಿಡಿಪಿಐ ಮತ್ತು ಬಿಇಒರವರು ಖಾಸಗಿ ಶಾಲೆ ಭೇಟಿ ಮಾಡದೆ ಸರ್ಕಾರಿ ಶಾಲೆ ಭೇಟಿಗೆ ಒತ್ತು ನೀಡಬೇಕು. ಶಿಷ್ಠಾಚಾರ ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡದೆ, ಗುಣಮಟ್ಟದ ಶಿಕ್ಷಣದ ಬಗ್ಗೆ ಒತ್ತು ನೀಡಿ. ವಿದ್ಯಾರ್ಥಿಗಳು ಶಾಕೆಗೆ ಹಾಜರಾತಿ ಬಗ್ಗೆ ಹೆಚ್ಚಿನಗಮನ ಹರಿಸಲು ಸೂಚನೆ ನೀಡಿದರು.
ಕೆಎಫ್ ಡಿ ಮತ್ತು ಡೇಂಗ್ಯೂ ಖಾಯಿಲೆ ಬಗ್ಗೆ ಸಭೆಗೆ ಮಾಹಿತಿ ನೀಡಿದ ಡಿಹೆಚ್ ಒ ಡಾ.ನಟರಾಜ್, ಜಿಲ್ಲೆಯಲ್ಲಿ ಇದುವರೆಗೂ 63 ಕೇಫ್ ಡಿ ಪಾಸಿಟಿವ್ ಇದೆ. ಕಾಯಿಲೆಯಿಂದ ಒಂದು ಸಾವಾಗಿದೆ. ಇದುವರೆಗೂ 10 ಸಾವಿರ ಸ್ಯಾಂಪಲ್ಸ್ ಪಡೆಯಲಾಗಿದೆ ಎಙದರು.
ತಾಳಗುಪ್ಪದ ಹಿರೇಮನೆ ಎಂಬಲ್ಲಿ ವಾರಕ್ಕೊಮ್ಮೆ ಕೇಫ್ ಡಿ ಪಾಸಿಟಿವ್ ಕಾಣಿಸುತ್ತಿಧ. ಕಾಯಿಲೆ ಸೀವಿಯರ್ ಇಲ್ಲ ಎಂದರೂ ವಾರಕ್ಕೊಮ್ಮೆ ಪಾಸಿಟಿವ್ ಕಾಣಿಸುತ್ತಿದೆ. ಮಳೆ ಬಿದ್ದ ಕಾರಣ ಕಡಿಮೆಯಾಗಿದೆ ಎಂದು ತಿಳಿಸಿದರು.
ಜನವರಿಯಿಂದ ಇಲ್ಲಿಯವರೆಗೆ 221 ಡೇಂಗ್ಯೂ ಪ್ರಕರಣ ಕಂಡು ಬರುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಟೆಸ್ಟಿಂಗ್ ಹೆಚ್ಚಾಗುತ್ತಿರುವರಿಂದ ಡೇಂಗ್ಯೂ ಹೆಚ್ಚು ಕಂಡುಬರುತ್ತಿದೆ. ಲಾರ್ವ ಪತ್ತೆಹಚ್ಚಲಾಗುತ್ತಿದೆ. ಲಾರ್ವಕಂಡರೆ ನಾಶಪಡಿಸಲಾಗುತ್ತಿದೆ. ನಿರಂತರ ಮಳೆಯಾದರೆ ಕಡಿನೆಯಾಗಲಿದೆ ಎಂದರು.
ನಾಯಿ ಕಡಿತ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗೆ ಎರಡಕ್ಕೂ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ದೂರದ ಪಿಹೆಚ್ ಸಿಯಲ್ಲೂ ಸ್ನೇಕ್ ಬೈಟ್ ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ-https://suddilive.in/archives/16904