ಸುದ್ದಿಲೈವ್/ಶಿವಮೊಗ್ಗ
‘ಅಭಿಮಾನಿ ದೇವರುಗಳ ಮುಂದೆ ಯಾರು ಇಲ್ಲಾ…’ ಡಾ . ರಾಜಕುಮಾರ್ ಅವರು ಅಭಿಮಾನಿಗಳನ್ನ ದೇವರು ಎಂದರು , ನಾವು ರಾಜಕುಮಾರರನ್ನೇ ದೇವರು ಎಂದೇವು..
ಡಾ ರಾಜಕುಮಾರ್ ಹೆಸರಿಗೆ ಕಳಂಕ ತರುವವರಾರನ್ನು ಒಬ್ಬ ಅಭಿಮಾನಿಯಾಗಿ ಎಂದು ಬಿಡೋದಿಲ್ಲ ಜೈ ರಾಜಣ್ಣ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಫೇಸ್ ಬುಕ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸೋತಾಯಿತು. ಇನ್ನಾದರೂ ಶಿವಣ್ಣ ಹೆಂಡತಿ ಮತ್ತು ಭಾವಮೈದುನನ ಮಾತಿಗೆ ಬೆಲೆ ಕೊಡದೆ ತಾನಾಯಿತು. ತಮ್ಮ ಸಿನಿಮಾ ಆಯಿತು ಎಂದು ಮಾಡಿಕೊಂಡು ಇದ್ದರೆ ಒಳ್ಳೆಯದು ಎಂದು ಹೀಗೆ ಅನೇಕ ಅಭಿಮಾನಿಗಳ ಪೋಸ್ಟ್ ಗಳನ್ನ ಮಾಜಿ ಸಚಿವರು ಹಾಕಿಕೊಂಡಿದ್ದಾರೆ.
ಇದಕ್ಕೆ ಪ್ರಮುಖವಾದ ಕಾಮೆಂಟ್ಸ್ ಸಹ ದೊರೆತಿದೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಮತ್ತೊಮ್ಮೆ ಸೋತು ಸುಣ್ಣವಾಗಲೆಂದೆ ಕಾಂಗ್ರೇಸ್ನಿಂದ ಈ ಬಾರಿ ಟಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಹಿಂದೊಮ್ಮೆ 2014 ರಲ್ಲಿ ಯೆಡಿಯೂರಪ್ಪ ವಿರುದ್ಧ ಜೆಡಿಎಸ್ ಇಂದ ಕಣಕ್ಕಿಳಿದು ಸೋತರೂ ಶಿವಮೊಗ್ಗ ದಲ್ಲೇ ಮನೆ ಮಾಡಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳಿ ಸೋತು ಸುಣ್ಣವಾದ ಮೇಲೆ ಮತ್ತೆ 10 ವರ್ಷದ ನಂತರ ಅದೇ ಡೈಲಾಗ್ ಹೊಡೆಯಲು ಸಜ್ಜಾಗಿದ್ದಾರೆ. ಯೆಡಿಯೂರಪ್ಪ ನವರು ರಾಜ್ ಕುಮಾರ ಕುಟುಂಬದ ಬಗ್ಗೆ ಒಂದೇ ಒಂದು ಟೀಕೆ ಮಾಡದೇ ನನ್ನ ಅಭಿರುದ್ದಿಯೆ ನನಗೆ ಶ್ರೀರಕ್ಷೆ ಎಂದು ಹೆಚ್ಚು ಪ್ರಚಾರ ಮಾಡದೇ ದೇಶದಲ್ಲೇ ಅತ್ಯಂತ ಹೆಚ್ಚಿನ ಮುನ್ನೆಡೆಯಿಂದ ಗೆದ್ದು ಬೀಗಿದ್ದರು. ಗೀತಕ್ಕ ಅಂದು 3 ನೇ ಸ್ಥಾನಕ್ಕೆ ಖುಷಿದಿದ್ದರು.
ಶಿವಮೊಗ್ಗ ಜನ ದಡ್ಡರಲ್ಲ 2014 ರಲ್ಲಿ ನೆಡೆದ ಚುನಾವಣಾ ಪ್ರಚಾರದಲ್ಲಿ ಶಿವರಾಜ್ ಕುಮಾರ ಕರೆತಂದೆ ಸಿನಿಮಾ ಕಲಾವಿದರನ್ನ ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದರೆ ವಿನಃ ಗೀತಕ್ಕಳನ್ನ ಗೆಲ್ಲಿಸಲು ಅಲ್ಲ.ಈ ಬಾರಿಯೂ 2014 ರ ಫಲಿತಾಂಶ ಮರುಕಳಿಸುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದ್ರೆ ಬಂದು ಒಂದು ಸರಿ ಶಿವಮೊಗ್ಗ ಇಡಿ ಜಿಲ್ಲೆಯನ್ನು ಒಂದು ಸರಿ ಸುತ್ತಾಡಿಕೊಂಡು ಹೋಗಿ.BY ರಾಘವೇಂದ್ರನನ್ನು ಸೋಲಿಸಲು ಒಂದೇ ಒಂದು ಕಾರಣ ನಿಮಗೆ ಸಿಗೋಲ್ಲ. ಕಾರಣ MP ಫಂಡ್ ಬಳಸಿಕೊಂಡು ಅಭಿರುದ್ದಿ ಮಾಡುವ ಸ್ಥಾನದಲ್ಲಿ ರಾಘಣ್ಣ ದೇಶದಲ್ಲೇ ನಂಬರ್ ಒನ್.
ಗೀತಕ್ಕ ಮತ್ತೆ ಸ್ಪರ್ದಿಸುವ ತೀರ್ಮಾನಕ್ಕೆ ಬಂದಿದ್ದು ತಮ್ಮ ಮಧು ಬಂಗಾರಪ್ಪನವರ ಆಶಯದಂತೆ, ಅಕ್ಕಳನ್ನು ಸೋಲಿಸಿ ಅವಮಾನಿಸಲು ತಮ್ಮನೇ ಪಣ ತೊಟ್ಟು ನಿಂತಿರುವನಂತೆ ಕಾಣುತ್ತೆ. ಶಿವರಾಜಕುಮಾರ್ ಹೇಳೋದು ಅವಳು ರಾಜಕೀಯ ಹಿನ್ನೆಲೆಯಲ್ಲಿ ಬಂದಿರೋಳು ಆಗಿದ್ದರಿಂದ ಅವಳ ಆಶಯದಂತೆ ನೆಡೆಯಲು ನಮ್ಮದೇನು ತಕರಾರು ಇಲ್ಲ, ಆದರೆ ನಾನು ಮಾತ್ರ ರಾಜಕೀಯಕ್ಕೆ ಬರೋಲ್ಲ ನಮ್ಮ ತಂದೆಯ ಹಾದಿಯಲ್ಲೇ ನೆಡೆಯುತ್ತೇನೆ ಎಂದು ಹೇಳಿದ್ದು ನೋಡಿದ್ರೆ ನಗು ಬರುತ್ತೆ. ಹಾಗೆ ನೋಡಿದರೆ ತಂದೆಯ ಹಾದಿಯಲ್ಲಿ ನೆಡೆದಿದ್ದು ಪುನೀತ್ ರಾಜಕುಮಾರ್ ಎಂಬ ಅಜಾತಶತ್ರು.
ಹಾಗೆ ನೋಡಿದರೆ ಅಶ್ವಿನಿ ಪುನೀತ್ ರಾಜಕುಮಾರ್ಗೆ ಬಿಜೆಪಿ ರಾಜಕೀಯ ಗಾಳ ಹಾಕಿದ್ರು ಅದರಲ್ಲೇ ಬೀಳದೆ ಗಂಡನ, ಮಾವನ ಹಾದಿಯಲ್ಲಿ ನೆಡೆದು ರಾಜಕುಮಾರ್ ಹೆಸರಿಗೆ ಕೀರ್ತಿ ತಂದರು, ಗೀತಕ್ಕಗೆ ಹೋಲಿಸಿದರೆ ವಯಸ್ಸಿನಲ್ಲಿ ಚಿಕ್ಕವಳಾದರೂ ರಾಜಕೀಯ ನಿರಾಕರಿಸಿದಂತೆ ನಿಜವಾದ ರಾಜಕುಮಾರ್ ಸೊಸೆ ಎನಿಸಿಕೊಂಡರು.ಶಿವರಾಜ್ ಕುಮಾರ್ ಅಪ್ಪನ ಹಾದಿಯಲ್ಲೇ ನೆಡೆಯದೆ ಹೆಂಡತಿಯ ಹಾದಿಯಲ್ಲಿ ನೆಡೆದು ರಾಜಕುಮಾರ್ ಹೆಸರಿಗೆ ಕಳಂಕ ತಂದರು ಎನಿಸುತ್ತವೆ.
ಸದಾ ಜನರ ಕೈಗೆ ಸಿಗುವ, ಜನರ MP ಎಂದೇ ಪ್ರಾಖ್ಯಾತರಾದಾ BY ರಾಘವೇಂದ್ರ ಸೋಲಿಸಲು ಜನರಿಗೆ ಕಾರಣವೇ ಇಲ್ಲ ಅಂತದ್ರಲ್ಲಿ. ಗೀತಕ್ಕಳನ್ನ ಗೆಲ್ಲಿಸುವ ಗೋಜಿಗೆ ಹೋಗುತ್ತಾರೆಯೇ? ಖಂಡಿತ ಇಲ್ಲ ಶಿವಮೊಗ್ಗ ಜನ ಅಭಿರುದ್ದಿಗೆ ಮತ ಹಾಕುವವರೇ ಹೊರತು ಬಣ್ಣ ಹಚ್ಚಿ ನಟಿಸುವ ಮುಖಗಳಿಗೆ ಅಲ್ಲ.
ನಾವು ರಾಜಕುಮಾರ್ ಕುಟುಂಬದ ಅಭಿಮಾನಿಗಳಾಗಿ ಈ ಮಾತುಗಳನ್ನಾಡಿತ್ತಿದ್ದೇವೆ ಹೊರತು ಬಿಜೆಪಿ ಎಜೇಂಟ್ ಗಳಾಗಿ ಅಲ್ಲ. ಗೀತಕ್ಕ ಬಂದು ಅಭಿರುದ್ದಿ ಮಾಡಲು ಇಲ್ಲಿ ಏನು ಇಲ್ಲ. ನಮ್ಮ ಮತ BY ರಾಘವೇಂದ್ರಗೆ ಹೊರತು ರಾಜಕುಮಾರ್ ಸಿದ್ಧಾಂತಕ್ಕೆ ವಿರುದ್ಧವಾಗಿ ನೆಡೆಯುವವರೀಗಲ್ಲ.
ಗೀತಕ್ಕ ನಿಮ್ಮ ಹೆಸರನ್ನು ಗೀತಾ ಶಿವರಾಕುಮಾರ್ ಬದಲಿಗೆ ನಿಮ್ಮ ತಂದೆಯ ಹೆಸರಾದ ಗೀತಾ ಬಂಗಾರಪ್ಪ ಅಂತ ಬದಲಿಸಿ ಚುನಾವಣಾ ಪ್ರಚಾರಕ್ಕೆ ಬನ್ನಿ ಆಗ ನೀವು ರಾಜಕುಮಾರ್ ಕುಟುಂಬದವರಲ್ಲ ಬಂಗಾರಪ್ಪ ಕುಟುಂಬದವರು ಎಂದು ರಾಜಕುಮಾರ್ ಅಭಿಮಾನಿಗಳು ಸೇರಿದಂತೆ ನಾಲ್ಕು ಮತ ಸಿಕ್ಕು ಠೇವಣಿನಾದ್ರು ಉಳಿಬಹುದು.
ಇಂತಿ ಡಾ ರಾಜಕುಮಾರ್ ಅಭಿಮಾನಿ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಹೀಗೆ ಮಾಜಿ ಸಚಿವರ ಜೈ ರಾಜಣ್ಣ ಎಂಬ ಪೋಸ್ಟ್ ಗೆ ಉತ್ತರ ದೊರೆತಿದೆ.
ಇದನ್ನೂ ಓದಿ-https://suddilive.in/archives/16319