ಸುದ್ದಿಲೈವ್/ನಗರ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಯಡೂರು ಅಬ್ಬಿಫಾಲ್ಸ್ ನಲ್ಲಿ ಪ್ರವಾಸಿಗರೊಬ್ವರು ನೀರುಪಾಲಾಗಿರುವ ಘಟನೆ ಇಂದು ಮಧ್ಯಾಹ್ನ ತಿಳಿದು ಬಂದಿದೆ.
ಬೆಂಗಳೂರಿನಿಂದ ಪ್ರವಾಸಕ್ಜೆ ಬಂದ 12 ಜನ ಯುವಕರು ಅಭ್ಬಿಫಾಲ್ಸ್ ಗೆ ಬಂದಿದ್ದಾರೆ. ಅಭ್ಬಿಫಾಲ್ಸ್ ನಲ್ಲಿ ಅಧಿಕ ಮಳೆಯ ಸಂಬಂಧ ಯಾರೂ ಹೋಗದಂತೆ ಕಂದಕ ಹೊಡೆಯಲಾಗಿದೆ. ಇದನ್ನೂ ಲೆಕ್ಕಿಸದೆ ಯುವಕರು ನೀರಿಗೆ ಇಳಿದಿದ್ದಾರೆ.
ಮಳೆಯಿರುವುದರಿಂದ ನೀರಿಗೆ ಇಳಿದ ಯುವಕರಲ್ಲಿ ಬಳ್ಳಾರಿ ಮೂಲದ ವಿನೋದ್ (26) ನೀರುಪಾಲಗಿದ್ದಾರೆ. ಅಧಿಕ ಮಳೆಯಿಂದಾಗಿ ಪಾಚಿ ಕಚ್ಚಿದಂತಾಗಿದ್ದು ಕಾಲು ಜಾರಿ ನೀರಪಾಲಾಗಿರುವುದು ತಿಳಿದು ಬಂದಿದೆ. ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ.. ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಎಚ್ಚರಿಕೆ ಇದ್ದರೂ ಯುವಕರು ನೀರಿಗೆ ಇಳಿದಿರುವುದು ತಿಳಿದು ಬಂದಿದೆ.
ಮಲೆನಾಡಿನಲ್ಲಿ ಮಳೆಗಾಲವಿರುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ-https://suddilive.in/archives/17592