ಶಿಕಾರಿಪುರದ ಸಾರ್ವಜನಿಕ‌ ಆಸ್ಪತ್ರೆಗೆ ಶಾಸಕ ಬಿ ವೈ ವಿಜಯೇಂದ್ರ ದಿಡೀರ್ ಭೇಟಿ-ಸಭೆ

ಸುದ್ದಿಲೈವ್/ಶಿಕಾರಿಪುರ

ಶಿಕಾರಿಪುರ ತಾಲೂಕಿನಲ್ಲಿ ಡೆಂಗೋ ಜ್ವರದ ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕಬಿವೈ ವಿಜೇಂದ್ರ ರವರು ದಿಢೀರನೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿದರು.

ತಾಲೂಕ್ ಆರೋಗ್ಯ ಅಧಿಕಾರಿ ನವೀದ್ ಖಾನ್ ತಾಲೂಕಾಧ್ಯಂತ ಹಳ್ಳಿಗಳಲ್ಲಿ ಕಂಡುಬರುವ ಕೇಸುಗಳ ಸಂಖ್ಯೆ ನಿನ್ನೆಯಿಂದ ಇಳಿಮುಖವಾಗುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ಮುನ್ನ ಎಚ್ಚರಿಕೆ ಕ್ರಮವಾಗಿ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ಶಾಸಕರು ಕೇಳಿ ಅದಕ್ಕೆ ಪ್ರತ್ಯುತ್ತರ ನೀಡಿದರು.

ನಂತರ ಆಡಳಿತ ವೈದ್ಯಾಧಿಕಾರಿ ಅರುಣ್ ಕುಮಾರ್ ರವರನ್ನು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಿದರು ನೆರೆದ ಕೆಲವರು ಮಾಹಿತಿಗಳನ್ನು ದೂರು ಸಮೇತ ನೀಡಲು ಮುಂದಾದರು ನಿಮ್ಮ ಆಸ್ಪತ್ರೆಯಲ್ಲಿ ಡೆಂಗು ಪ್ರಕರಣದ ಸಮಸ್ಯೆ ಬಗ್ಗೆ ಈಗ ಇರುವ ಕೇಸ್ ಗಳ ಬಗ್ಗೆ ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಶಿಕಾರಿಪುರ ಆಸ್ಪತ್ರೆಯಲ್ಲಿ ವೈದ್ಯರುಗಳಿದ್ದರೂ ಹಾಗೂ ಎಲ್ಲಾ ವ್ಯವಸ್ಥೆಗಳಿದ್ದರೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕೇಸುಗಳನ್ನು ರೆಫರ್ ಮಾಡುವ ಬಗ್ಗೆ ಶಾಸಕರು ಮತ್ತು ಎಂಪಿ ಅವರು ಆಕ್ಷೇಪ ವ್ಯಕ್ತಪಡಿಸಿದರು  ಮಾಜಿ ಸಿಎಂ ಯಡಿಯೂರಪ್ಪನವರು ಎಲ್ಲಾ ರೀತಿಯ ಅನುಕಾಲಗಳನ್ನು ವೈದ್ಯರನ್ನು ಈ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಿದರೂ ಸಹ ಈ ರೀತಿ ರೆಫರ್ ಮಾಡುವ ಬಗ್ಗೆ ಆಕ್ಷಪಣೆ ವ್ಯಕ್ತಪಡಿಸಿದರು

ಮಲೆನಾಡು ಆಸ್ಪತ್ರೆಗೆ ಸ್ಕ್ಯಾನಿಂಗ್ಗೆ ಕಳಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಕೇಳಬರುತ್ತಿದೆ.‌ ಕೆಲವು ಔಷಧಿಗಳಿಗೆ ಹೊರ ಮೆಡಿಕಲ್ ಬಗ್ಗೆ ಚೀಟಿ ಕೊಡುತ್ತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ವೈದ್ಯರುಗಳನ್ನು ಪ್ರಶ್ನಿಸಲಾಯಿತು.  ವೈದ್ಯರುಗಳು ಸಂಬಂಧಿಸಿದ ಮಾಹಿತಿಗಳನ್ನು ನೀಡುವಲ್ಲಿ ಯಶಸ್ವಿಯಾದರು.

ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷ ನಿಂಬೇಗುಂದಿ ಸಿದ್ದಲಿಂಗಪ್ಪ ಈ ಸಂದರ್ಭದಲ್ಲಿ ಮಾತನಾಡಿ ಶಿಕಾರಿಪುರದಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳಿಸಿದ ಪೇಷಂಟ್ ಬಗ್ಗೆ ಮಾತನಾಡಿ ಅವರಿಗೆ ಅಲ್ಲಿ ಆದ ಅವ್ಯವಸ್ಥೆಯ ವಿಚಾರವನ್ನು ಶಾಸಕರು ಮತ್ತು ವೈದ್ಯಾಧಿಕಾರಿಗಳ ಮುಂದೆ ಬಿಚ್ಚಿಟ್ಟರು.

ಡೆಂಗೋ ಜ್ವರ ಜಿಲ್ಲೆಯಲ್ಲಿ ಶಿಕಾರಿಪುರ ಎರಡನೇ ಸ್ಥಾನದಲ್ಲಿ ಇರುವುದನ್ನು  ಟಿ ಹೆಚ್ಓ ತಿಳಿಸಿದರು. ಎಲ್ಲಾ ವಿಚಾರಗಳನ್ನು ಆಲಿಸಿದ ಮಾನ್ಯ ಶಾಸಕರು ಅನಿವಾರ್ಯ ಕಾರಣಗಳಿಂದ ಪೇಷಂಟ್ಗಳನ್ನು ಶಿಮೊಗ್ಗದ ಮೆಗನ್ ಆಸ್ಪತ್ರೆಗೆ ಕಳಿಸಿದಾಗ ಅಲ್ಲಿಯವರಿಗೆ ಅನುಕೂಲವಾದ ರೀತಿಯಲ್ಲಿ ಇಲ್ಲಿಂದ ಸಂಪರ್ಕವನ್ನು ಬೆಳೆಸಲು ಸೂಚಿಸಿದರು.‌

ಅಲ್ಲಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವ ವ್ಯವಸ್ಥೆ ಇಲ್ಲಿಯೇ ವೈದ್ಯರುಗಳುಮಾಡಬೇಕೆಂದು ಆದೇಶಿಸಿದರು. ಖಾಸಗಿ ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್ ಅನ್ನು ಬರೆದುಕೊಡುವುದನ್ನ ನಿಲ್ಲಿಸಿ ನಮ್ಮದೇ ಆದ ಮಕ್ಕಳು ಮತ್ತು ಮಹಿಳೆಯರ ಆಸ್ಪತ್ರೆಗೆ ಕಳಿಸುವುದು ಸೂಕ್ತ  ಎಂದು ತಿಳಿಸಿದರು.

ಸಣ್ಣ ಸಣ್ಣ ಸಮಸ್ಯೆಗೂ ಸಾರ್ವಜನಿಕರನ್ನು ಶಿವಮೊಗ್ಗದ ಮೆಗನ್ ಆಸ್ಪತ್ತಿಗೆ ಕಳಿಸುವುದನ್ನು ಆದಷ್ಟು ಕಡಿಮೆ ಮಾಡಿ ಅವರಿಗೆ ಇಲ್ಲೇ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುವಂತೆ ಸಲಹೆ ನೀಡಿದರು. ಆಸ್ಪತ್ರ ಬಗ್ಗೆ ಯಾವುದಾದರೂ ದೂರುಗಳು ಅಥವಾ ಮಾಧ್ಯಮಗಳಲ್ಲಿ ವರದಿಯಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಶಾಸಕರು ಎಚ್ಚರಿಕೆ ನೀಡಿದರು.

ಸ್ವಚ್ಛತಗಳಿಗೆ ಹೆಚ್ಚಿನ ಗಮನವನ್ನು ನೀಡುವುದಲ್ಲದೆ ಬರುವ ರೋಗಿಗಳ ಜೊತೆಗೆ ತಾಳ್ಮೆಯಿಂದ ವರ್ತಿಸಿ ಎಂದು ಸೂಚಿಸಿದರು ಮಲೆನಾಡು ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಗುರುಮೂರ್ತಿಯವರು ವೈದ್ಯರುಗಳಿಗೆ ಉತ್ತಮವಾದ ಸಲಹೆಗಳನ್ನು ನೀಡಿದರು .

ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾಕ್ಟರ್ ಶ್ರೀನಿವಾಸ್. ಡಾಕ್ಟರ್ ಅನಿಲ್ ಕುಮಾರ್. ಡಾಕ್ಟರ್ ಮಾರುತಿ. ಡಾಕ್ಟರ್ ಬಸವ ಕುಲಾಲ್ ಡಾ. ನವೀನ್ ಕುಮಾರ್ ಹಾಗೂ ಇತರ ಸಿಬ್ಬಂದಿಗಳು ವೈದ್ಯರು ಪುರಸಭಾ ಸದಸ್ಯ ಮಹೇಶ್ ಮಹೇಶ್. ಪಾಲಾಕ್ಶಪ್ಪ. ರಾಘವೇಂದ್ರ ಯಾನೆ. ಈರಣ್ಣ. ರುದ್ರಪ್ಪಯ್ಯ ಕೆಲ ಮುಖಂಡರು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/17267

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close