ಗದ್ದೆಯಲ್ಲಿ ಪತ್ತೆಯಾದ ಗುತ್ತಿಗೆದಾರನ ಶವ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗುತ್ತಿಗೆದಾರನೋರ್ವನ ಮೃತ ದೇಹವೊಂದು ಗದ್ದೆಯಲ್ಲಿ ದೊರೆತಿದೆ.  ಘಟನೆ ತುಂಗ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಾಯೋಟ ಶೋ ರೂಂ ಹಿಂಭಾಗದ ಗರುಡ ಲೇಔಟ್ ನ ಗದ್ದೆಯ ಬಳಿ ಮೃತ ದೇಹವೊಂದು ಪತ್ತೆಯಾಗಿದ್ದು ಇದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.‌

ಪತ್ತೆಯಾದ ಮೃತ ದೇಹದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.‌ ಮೃತದೇಹವನ್ನ ಮಹಾನಗರ ಪಾಲಿಕೆಯ ಗುತ್ತಿಗೆದಾರ  ವಾಸು ಎಂದು ಗುರುತಿಸಲಾಗಿದೆ. ವಾಸು ವಿಷ ಸೇವಿಸಿ ಮೃತನಾಗಿರುವುದಾಗಿ ಹೇಳಲಾಗುತ್ತಿದೆ.

ಆತನ ಸಾವಿಗೆ ಕಾರಣ ತಿಳಿದು ಬರಬೇಕಿದೆ. ವಾಸು ಅವರು ಹರಿಗೆ ನಿವಾಸಿ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ-https://suddilive.in/archives/16784

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close