ಸುದ್ದಿಲೈವ್/ಶಿವಮೊಗ್ಗ
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿಯ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ ಟೆಂಪಲ್ ರನ್ ನಡೆಸಿದ್ದಾರೆ.
ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದ ಅಭ್ಯರ್ಥಿ, ಕೋಟೆ ಮಾರಿಕಾಂಬ ದೇವಸ್ಥಾನಕ್ಕೆ ತೆರಳಿ ತಾಯಿಯ ಆಶೀರ್ವಚನ ಪಡೆದರು.
ಈ ವೇಳೆ ಡಾ.ಸರ್ಜಿ ಅವರ ಪತ್ನಿ ನಮಿತಾ ಸರ್ಜಿ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ, ನಗರ ಅಧ್ಯಕ್ಷ ಮೋಹನ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಸರ್ಜಿ ಪರ ಮತಯಾಚನೆ
ಡಾ.ಧನಂಜಯ ಸರ್ಜಿ ಪರ ಮತ್ತು ಜೆಡಿಎಸ್ ನ ಭೋಜೇಗೌಡ ಪರ ಬಿಜೆಪಿಯ ಯಸ್ಪಾಲ್ ಎ ಸುವರ್ಣ, ಅರುಣ್ ಕುಮಾರ್ ಪುತ್ತಿಲ ಉಡುಪುಯ ವಿವಿಧ ಶಾಲಾ ಕಾಲೇಜು, ಸಹಕಾರ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ಮತಯಾಚಿಸಿದ್ದಾರೆ.
ಡಾ.ಸರ್ಜಿಯಿಂದ ಮನವಿ
ನಾಳೆಯ ನಡೆಯುವ ಪರಿಷತ್ ಚುನಾವಣೆಯಲ್ಲಿ ಹೇಗೆ ಮತಹಾಕಬೇಕು ಎಂಬುದನ್ನ ಡಾ.ಸರ್ಜಿ ವಿಡಿಯೋ ಮೂಲಕ ತಿಳಿಸಿದ್ದಾರೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು ಕ್ರಮ ಸಂಖ್ಯೆ 2 ಕ್ಕೆ ಮತದಾನ ಮಾಡುವಂತೆ ಕೋರಿದ್ದಾರೆ.
ಇದನ್ನೂ ಓದಿ-https://suddilive.in/archives/16094