ಸುದ್ದಿಲೈವ್/ಆಗುಂಬೆ
ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಗದ್ದೆ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಿನ್ನೆ ನಡೆದಿದೆ.
ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಗದ್ದೆ ಗ್ರಾಮದಲ್ಲಿ, ನಿನ್ನೆ ಸಂಜೆ 4-00 ಪಿಎಂ ಗಂಟೆಗೆ ಬಿದರಗೋಡು ಗ್ರಾಮ ಪಂಚಾಯಿತಿಯ ಮುತ್ತೋಳ್ಳಿ ವಾಸಿ ನಾಗೇಂದ್ರ (40) ಇವರು ತೀರ್ಥಹಳ್ಳಿ ತಾಲೂಕು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಬಿನ್ ವಿಠಲ್ ಕಿಣಿ ಇವರ ಹೊಸಗದ್ದೆ ಗ್ರಾಮದ ಸರ್ವೆ ನಂಬರ್ 186/2 ಅಡಿಕೆ ತೋಟದಲ್ಲಿ ತೋಟದ ಕಳೆ ತೆಗೆಯುವ ಸಂದರ್ಭದಲ್ಲಿ ಸಿಡಿಲು ಹೊಡೆದು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ.
ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ಮಾಡಿದ್ದಾರೆ.
ಇದನ್ನೂ ಓದಿ-https://suddilive.in/archives/16398
Tags:
ಕ್ರೈಂ ನ್ಯೂಸ್