ಸುದ್ದಿಲೈವ್/ಶಿವಮೊಗ್ಗ
ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳದ ವಿರುದ್ಧ
ಶಿವಮೊಗ್ಗ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಧ್ವನಿ ಎತ್ತಿದೆ. ಯಾವ ದರ ಏರಿಕೆ ವಿರುದ್ಧ ಮಾತನಾಡದ ಜನ ಸಾಮಾನ್ಯರ ಮಧ್ಯ ಒಕ್ಕೂಟ ಧ್ವನಿ ಎತ್ತಿರುವುದು ಗಮನ ಸೆಳೆದಿದೆ.
ಸುದ್ದಿಗೋಷ್ಠಿ ನಡೆಸಿದ ಒಕ್ಜೂಟದ ಅಧ್ಯಕ್ಷ ತಲ್ಕೀನ ಅಹ್ಮದ್ ಯಾವ ಸಂಘಟನೆಯನ್ನ ವಿಶ್ವಾಸಕ್ಜೆ ತೆಗೆದುಕೊಳ್ಳದೆ ಏಕಾಏಕಿ ದರ ಹೆಚ್ಚಿಸಿದೆ. ಕೊರೋನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂದನದ ವೆಲೆ ಏರಿಸಿತ್ತು.ಆ ದಾರಿಯನ್ನ ರಾಜ್ಯ ಸರ್ಕಾರ ತುಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
.
ಟೋಲ್ ದರ, ವಾಹನಗಳ ಟಯರ್, ಮತ್ತು ಬಿಡಿಭಾಗಳ ದರವನ್ನ ಏರಿಸಲಾಗಿದೆ. ಬರಗಾಲದಿಂದ ಉದ್ದಿಮೆ ತತ್ತರಿಸಿದೆ. ವಿಎಲ್ ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯು ಲಾರಿ ಮಾಲೀಕರ ಮೇಲೆ ಬಿದ್ದಿದೆ. ಈ ಹೆಚ್ಚುವರಿಗಳಿಂದಾಗಿ ಸಾಗಾಣಿಕೆ ವೆಚ್ಚವೂ ಅಧಿಕವಾಗಿದೆ.
2024-25 ರ ಆಯವ್ಯಯದಲ್ಲಿ ಈಗಾಗಲೇ ರಸ್ತೆ ತೆರಿಗೆಯ ಮೇಲೆ 3.5% ಸೆಸ್ ಹೆಚ್ಚಿಸಲಾಗಿದೆ. ಈ ಎಲ್ಲಾ ಹೆಚ್ಚುವರಿಯಿಂದಾಗಿ ಡಿಮ್ಯಾಂಡ್ ಅಂಡ್ ಸಪ್ಲೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಎಲ್ಲಾ ಮನವಿಯನ್ನ ಸರ್ಕಾರ ಪರಿಗಣಿಸಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗ್ಯಾರೆಂಟಿಯಿಂದಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಸಲಾಗಿದೆ. ಗ್ಯಾರೆಂಟಿಯನ್ನ ರಾಜ್ಯ ಸರ್ಕಾರ ಭರಿಸಲು ಇತರರ ಮೇಲೆ ಬರೆಹಾಕಬಾರದು ಎಂದು ಆಗ್ರಹಿಸಲಾಯಿತು.
ಕರ್ನಾಟಕದ 15 ಕಡೆಯಲ್ಲಿ ಟರ್ಕ್ ಟರ್ಮಿನಲ್ ಆಗಿದೆ. 2009 ರಿಂದ ಟ್ರಕ್ ಟರ್ಮಿನಲ್ ನಿರ್ಮಿಸಿ ಎಂದು ಮನವಿ ನೀಡಿದರೂ ಟರ್ಕ್ ಟರ್ಮಿನಲ್ ನಿರ್ಮಿಸಿಲ್ಲ. ಡಿಎಸ್ ಅರುಣ್ ಎಂಎಲ್ ಸಿ ಆದಾಗ ಒಕ್ಕೂಟ ಟ್ರಕ್ ಟರ್ಮಿನಲ್ ನಿರ್ಮಿಸಲುಮನವಿ ನೀಡಿದರೂ ಯಾವುದೇ ಕೆಕಸ ಆಗಿಲ್ಲ ಎಂದರು.
ಭೋಜರಾಜ್, ಗಜರಾಜ್, ಬಾಬು, ಇಜಾಜ್ ಅಹ್ಮದ್, ಅಸ್ಗರ್ ಪಾಶ, ನಾಶೀರ್ ಅಹ್ಮದ್, ಮೊಹ್ಮದ್ ಝಕಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17617