ಸುದ್ದಿಲೈವ್/ಸಾಗರ
ಸಾಗರದಲ್ಲೂ ನಿನ್ನೆ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವುಕಂಡಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮನೆಗೆ ಹೋಗುವಾಗ ಸಾಗರದ ಕುಗ್ವೆ ಬಳಿ ಅಪಘಾತ ಸಂಭವಿಸಿದೆ.
ಸಾಗರದ ಕಡೆಯಿಂದ ಜೋಗಕ್ಕೆ ಹೋಗುತ್ತಿದ್ದ ಕಾರೊಂದು ವೇಗವಾಗಿ ಚಲಿಸಿದೆ. ಅಲ್ಲೇ ಲಾಲ್ ಬಹದ್ದೂರು ಕಾಲೇಜಿನಲ್ಲಿ ಬಿಸಿಎ ದ್ವೀತೀಯ ವರ್ಷ ಓದುತ್ತಿದ್ದ ಅನುಷಾ(20) ತನ್ನ ಸ್ನೇಹಿತೆಯಳೊಂದಿಗೆ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದಳು.
ಈ ವೇಳೆ ಹಿಂಬದಿಯಿಂದ ಬಂದ ಕಾರು ಅಪಘಾತ ಪಡಿಸಿದೆ. ಯುವತಿಯನ್ನ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಲಾಗಿದೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದೆ. ಯುವತಿ ಸಾವನ್ನಪ್ಪಿದ್ದಾಳೆ.
ಆಕೆಯ ಮೃತದೇಹವನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗೆ ಕರೆತರಲಾಗಿತ್ತು. ಇಂದು ಬೆಳಿಗ್ಗೆ ಆಕೆಯ ಮರಣೋತ್ತರ ಪರೀಕ್ಷೆ ಮುಗಿದಿದ್ದು ವಾಪಾಸ್ ಸಾಗರಕ್ಕೆ ರವಾನಿಸಲಾಗಿದೆ.
ಯುವತಿಯ ತಂದೆ ಕುಂದಾಪುರ ಮೂಲದವರಾಗಿದ್ದು ಸಾಗರದಲ್ಲಿ ಕೆಎಸ್ಆರ್ ಟಿಸಿ ಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಗಳ ಅಗಲಿಕೆ ಕುಟುಂಬಸ್ಥರನ್ನಕಣ್ಣೀರ ಕೋಡಿಯಲ್ಲಿ ಮುಳಗಿಸಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/17558