ಸುದ್ದಿಲೈವ್/ಶಿವಮೊಗ್ಗ
ರೇಣುಕಾಸ್ವಾಮಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಇಂದು ಶ್ರೀ ಬಸವೇಶ್ವರ ಸಮಾಜ ಸೇವಾಸಂಘ, ಜಂಗಮ ಸಮಾಜ ಹಾಗೂ ಇತರೆ ವೀರಶೈವ ಸಂಘಟನೆಗಳು ಸೇರಿ ಶಿವಮೊಗ್ಗದಲ್ಲಿ ಭರ್ಜರಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಗೋಪಿ ವೃತ್ತದಿಂದ ಬಿಳಕಿ ಮಠದ ರಾಜೋಟಿ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಬಂದು ಮನವಿ ಸಲ್ಲಿಸಲಾಯಿತು.
ರೇಣುಕಾಸ್ವಾಮಿಯನ್ನ ದರ್ಶನ್ ತನ್ನ 19 ಅಭಿಮಾನಿಗಳ ತಂಡದ ಮೂಲಕ ಕಿಡ್ನ್ಯಾಪ್ ಮಾಡಿ ಚಿತ್ರ ಹಿಂಸೆ ನೀಡಿ ರಾಕ್ಷಸಿ ಪ್ರವೃತ್ತಿ ಮೆರೆದಿದ್ದಾರೆ. ತಪ್ಪಿತಸ್ಥರಿಗೆ ಎಷ್ಟೇ ಪ್ರಭಾವಿತರಾದರೂ ಕೊಲೆ ಆರೋಪಿಗೆ ಶಿಕ್ಷೆ ನೀಡಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಆಯನೂರು ಮಂಜುನಾಥ್ ಇವರ ತಂದೆ ತೂಗುದೀಪ್ ಶ್ರೀನಿವಾಸ್ ಸಿನಿಮಾದಲ್ಲಿ ಖಳನಾಯಕರಾಗಿದ್ದು ನಿಜ ಜೀವನದಲ್ಲಿ ಮಾದರಿಯಾಗಿ ಬದುಕಿದವರು. ಅವರ ಮಗನಾದ ದರ್ಶನ್ ಸಿನಿಮಾದಲ್ಲಿ ಹೀರೋ ಆದರೂ ನಿಜ ಜೀವನದಲ್ಲಿ ಖಳನಾಯಕನಾಗಿದ್ದಾನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ರೇಣುಕಾಸ್ವಾಮಿ ಹತ್ಯೆಯಲ್ಲಿ ನ್ಯಾಯಯುತ ತನಿಖೆ ಆಗಬೇಕು. ಸರ್ಕಾರ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗ್ತಾ ಇದೆ. ಸರ್ಕಾರ ಯಾರ ಶಿಫಾರಸ್ಸಿಗೆ ಒಳಗಾಗದೆ ತನಿಖೆ ಆಗಬೇಕು. ಜಂಗಮನ ಬಾಯಿಯಲ್ಲಿ ಮೂಳೆಯನ್ನ ತುರಕಿ ಕರೆಂಟ್ ಶಾಕ್ ನೀಡಿ ಸಾಯಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಎಸ್ಪಿ ದಿನೇಶ್, ಹೆಚ್ ಎಂ ಚಂದ್ರಶೇಖರಪ್ಪ, ಹೆಚ್ ಸಿ ಯೋಗೀಶ್, ರುದ್ರೇಗೌಡರು, ಸುಭಾಷ್, ಎಸ್ ಎಸ್ ಜ್ಯೋತಿಪ್ರಕಾಶ್, ಕಾಯಕಯೋಗಿ ಚೆನ್ನಬಸಪ್ಪ, ಸೋಮನಾಥ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ-https://suddilive.in/archives/17233