ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಸೋಮಯ್ಯ ಲೇ ಔಟ್ ನಲ್ಲಿ ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದ ಯುವ ಕಾರ್ಮಿಕ ದಿಡೀರ್ ಅಂತ ಸಾವು ಕಂಡಿದ್ದು, ಆತನ ಸಾವಿಗೆ ಮೇಸ್ತ್ರಿಯ ಬೇಜವಬ್ದಾರಿ ತನದಿಂದ ಸಾವನ್ಬಪ್ಪಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ.
ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಟ್ಟಡ ನಿರ್ಮಿಸುತ್ತಿದ್ದ ಹರೀಶ್ ಇಂಜಿನಿಯರ್ ಅವರ ಕಟ್ಟಡ ನಿರ್ಮಿಸುತ್ತಿದ್ದನು. ಹರೀಶ್ ನ ಕೆಲಸ ಎಲ್ಲ ಮುಗಿದಿತ್ತು. ಕೆಲಸಕ್ಕೆ ಕರೆದುಜೊಂಡು ಬಂದ ಮೇಸ್ತ್ರಿ ಸಿಮೆಂಟ್ ಮಿಕ್ಸಿಂಗ್ ನ ವೈಬ್ರೇಷನ್ ಮಿಷನ್ ಸ್ವಚ್ಛಗೊಳಿಸಲು ಸೂಚಿಸಿದ್ದರು.
ಸ್ವಚ್ಛಗೊಳಿಸಲು ಮುಂದಾದ ಯುವಕ ದಿಡೀರ್ ಸಾವು ಕಙಡಿದ್ದಾನೆ. ಆದರೆ ಯುವಕನ ಸಾವಿಗೆ ಮೇಸ್ತ್ರಿ ವಿದ್ಯುತ್ ಶಾಕ್ ನಿಂದ ಸಾವು ಕಂಡಿರುವುದಾಗಿ ಮೃತನ ಕುಟುಂಬಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ.
ಮೇಸ್ತ್ರೀಯ ನಿರ್ಲಕ್ಷ್ಯಕ್ಕೆ ಹರೀಶ ಸಾವುಕಂಡಿದ್ದಾಬೆ. ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಕಾರಣ ಮಾನವೀಯತೆಯನ್ಬೂ ಮೇಸ್ತ್ರಿ ಮರೆತು ವರ್ತಿಸುತ್ತಿದ್ದಾನೆ. ಕಟ್ಟಡ ಕಾರ್ಮಿಕನ ಸುರಕ್ಷತೆ ಇಲ್ಲದೆ ಮೇಸ್ತ್ರಿ ಮತ್ತು ಇಂಜಿನಿಯರ್ ನಡೆದುಕೊಂಡಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ.
10 ವರ್ಷದಿಂದ ಗಾರೆ ಕೆಲ ಮಾಡಿಕೊಂಡಿದ್ದ ಹರೀಶ್ ಮೂರು ತಿಂಗಳಲ್ಲಿ ಮದುವೆಯಾಗಬೇಕಿತ್ತು. ಆದರೆ ವಿಧಿ ಚೆಲ್ಲಾಟವಾಡಿದೆ. ತಂದೆ ತಾಯಿಯನ್ನ ಕಳೆದುಕೊಂಡ ಯುವಕನನ್ನ ಆತನ ದೊಡ್ಡಪ್ಪನ ಮಕ್ಕಳು ಲಾಲನೆ ಪಾಲನೆ ಮಾಡಿಕೊಂಡು ಬಂದಿದ್ದರು. ಈಗ ವಿಧಿ ಆತನನ್ನೂ ಬಲಿಪಡೆದುಕೊಂಡಿದೆ.
ಇದನ್ನೂ ಓದಿ-https://suddilive.in/archives/17578