ಸುದ್ದಿಲೈವ್/ಶಿವಮೊಗ್ಗ
ಕ್ಷುಲ್ಲಕ ಕಾರಣಕ್ಕೆ ಕೊಲೆಯಾಗಿದೆ. ಆಯನೂರು ಗೇಟಿನ ಬಳಿಯ ಸ್ನಶಾನದಲ್ಲಿ ಇಬ್ಬರು ಸ್ನೇಹಿತರು ಕುಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಓರ್ವನ ಕೊಲೆಯೊಂದಿಗೆ ಜಗಳ ಮುಕ್ತಾಯಗೊಂಡರೆ ಮತ್ತೋರ್ವ ಪೊಲೀಸರ ಅತಿಥಿಯಾಗಿದ್ದಾನೆ.
ಕೊಲೆ ಆದ ವ್ಯಕ್ತಿಯನ್ನ ರಾಜೂ ನಾಯ್ಕ್ ಎಂದು ಗುರುತಿಸಲಾಗಿದೆ. ರಾಜೂನಾಯ್ಕ್ 30 ವರ್ಷವಾಗಿದ್ದು ಈತ ಜೆಪಿ ನಗರದ ನಿವಾಸಿಯಾಗಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನ ವಿಕ್ರಮ್ ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿಯನ್ನ ತುಂಗನಗರ ಪೊಲೀಸರು ಬಂಧಿಸಿದ್ದಾರೆ. ರಾಜೂ ನಾಯ್ಕ್ ಯಾನೆ ರಾಜು ಮತ್ತು ವಿಕ್ರಮ್ ಇಬ್ವರೂ ಸ್ನೇಹಿತರಾಗಿದ್ದರು. ಆಯನೂರು ಗೇಟ್ ನ ಬಳಿ ಇಬ್ವರೂ ಕುಡಿಯಲು ಬರುತ್ತಿದ್ದರು.
ಕಳೆದ ಮೂರು ನಾಲ್ಕು ದಿನಗಳಿಂದ ರಾಜೂ ವಿಕ್ರಮ್ ಗೆ ಅವ್ಯಾಚ್ಯಶಬ್ದಗಳಿಂದ ನಿಂದಿಸುತ್ತಿದ್ದನ್ನ ಮನಸ್ಸಿಗೆ ಹಚ್ಚಿಕೊಂಡಿದ್ದನು. ಈ ದಿನ ವಿಕ್ರಮ್ ರಾಜೂನನ್ನ ಸ್ಮಶಾನ ಬಳಿ ಕುಡಿಯಲು ಕರೆದು ಕುಡಿದ ನಶೆಯಲ್ಲಿ ಗಲಾಟೆ ತೆಗೆದಿದ್ದಾನೆ.
ಗಲಾಟೆ ವಿಕೋಪಕ್ಕೆ ಹೋಗಿ ರಾಜೂನನ್ನ ವಿಕ್ರಮ್ ಮಾರಕಾಸ್ತ್ರಗಳಿಂದ ಇರಿದಿದ್ದಾನೆ. ಕೆಳಗೆ ಬಿದ್ದ ರಾಜೂವಿನ ಮೇಲೆ ಕಲ್ಲು ಹೊತ್ತಾಕಿ ಕೊಲೆ ಮಾಡಿದ್ದಾನೆ. ತುಂಗ ನಗರ ಪೊಲೀಸರು ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ. ಇವಿಷ್ಟು ಪ್ರಾಥಮಿಕ ಮಾಹಿತಿಯಾಗಿದೆ.
ಇದನ್ನೂ ಓದಿ-https://suddilive.in/archives/17107