ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಾಮಾಣಿಕತೆಯಲ್ಲಿ ನಡೆಯುವಂತೆ ಸಹಕಾರ ಭಾರತಿ ಮನವಿ

ಸುದ್ದಿಲೈವ್/ಶಿವಮೊಗ್ಗ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಡೆಲಿಗೇಷನ್ ಫಾರಂನ್ನ ಮತದಾರರಿಗೆ ಪ್ರಮಾಣಿಕತೆಯಲ್ಲಿ ಹಂಚುವಂತೆ ಒತ್ತಾಯಿಸಿ ಸಹಕಾರ ಭಾರತಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಚುನಾವಣಾ ಕೇಂದ್ರದಲ್ಲಿ ಮೊಬೈಲ್ ಫೋನ್ ಮತ್ತು ಪೆನ್‌ ಗಳನ್ನು ನಿಷೇಧಿಸುವಂತೆ, ಮತದಾನ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ನೀಡಿದ ಸೀಲ್‌ಅನ್ನು ಒಂದೇ ಬಾರಿ ಬಳಸುವಂತೆ ಹಾಗೂ ಮಾನ್ಯ ಡೆಲಿಗೇಟ್ಸ್‌ಗಳ ಡೆಲಿಗೇಷನ್ ಫಾರಂಅನ್ನು ಕೆಲವು ಸಹಕಾರ ಸಂಘಗಳ ಕಾರ್ಯದರ್ಶಿಗಳು ಡೆಲಿಗೇಟ್ಸ್‌ಗೆ ಕೊಡದೆ ತಮ್ಮ ಬಳಿಯೇ ಇಟ್ಟುಕೊಂಡಿರುವ ಬಗ್ಗೆ ಸಹಕಾರ ಭಾರತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ರೀತಿ ಕ್ರಮಗಳು ಚುನಾವಣೆಯಲ್ಲಿ ನಡೆಯದಂತೆ ಕ್ರಮವಹಿಸಿ, ಅಕ್ರಮಗಳಿಗೆ ಕಡಿವಾಣ ಹಾಕಿ, ನ್ಯಾಯಬದ್ಧವಾದ ಚುನಾವಣೆಯನ್ನು ನಡೆಸಲು ಅನುವು ಮಾಡಿ ಕೊಡಬೇಕಾಗಿ ತಮ್ಮಲ್ಲಿ ಕೋರಲಾಗಿದೆ.

ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಎಸ್.ಎಂ ಸದಸ್ಯರಾದ ಭೂಕಾಂತ್
ಎಸ್.ರಮೇಶ್ ಜಿ.ಈ ವಿರೂಪಾಕ್ಷಪ್ಪ ರತ್ನಾಕರ್ ಶೆಣೈ, ಧೀನ್ ದಯಾಳು ಮೊದಲಾದವರು ಮನವಿ ನೀಡುವ ವೇಳೆ ಉಪಸ್ಥಿರಿದ್ದರು

ಇದನ್ನೂ ಓದಿ-https://suddilive.in/archives/17745

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close