ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಕಾಗೆ ಕೋಡಮಗ್ಗೆಯ ಬ್ರಿಡ್ಜ್ ಕೆಳಗೆ ರಾಶಿ ರಾಶಿ ಗೋತ್ಯಾಜ್ಯಗಳು ಪತ್ತೆಯಾಗಿದ್ದು ಈ ಕುರಿತು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಗೆ ಕೋಡ್ ಮಗ್ಗೆ ದಾರಿಯಲ್ಲಿ ಇರುವ ಕಾಗೆಹಳ್ಳ ಬ್ರಿಡ್ಜ್ ನ ಬಳಿಯಲ್ಲಿ ಕೆಟ್ಟ ದುರ್ವಾಸನೆ ಬರುತ್ತಿದ್ದ ಪರಿಣಾಮ ಹಿಂದೂ ಸಂಘಟನೆ ಯುವಕರು ಹೋಗಿ ನೋಡಿದಾಗ ಗೋವಿನ ತಲೆಯ ಕೊಂಬು, ಮೂಳೆ ಮತ್ತು ಗೋವಿನ ಬೋಟಿ ಖಲಿಜಗಳು ಪತ್ತೆಯಾಗಿವೆ.
ಸುಮಾರು10 ರಿಂದ 15ಕ್ಕಿಂತ ಹೆಚ್ಚು ಗೋವುಗಳನ್ನು ಹತ್ಯೆ ಮಾಡಿ ತಂದು ಹಾಕಿರುವ ಬಗ್ಗೆ ಅನುಮಾನ ವ್ಯಕ್ತಾಗಿದೆ. ಹತ್ತರಿಂದ ಹದಿನೈದು ಚೀಲಗಳು ಗೋವುಗಳ ಖಲಿಜಗಳು ತಂದು ನೀರಿನಲ್ಲಿ ಎಸೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ .
ಗೋವಿನ ಖನಿಜಗಳನ್ನು ತಂದು ವ್ಯವಸಾಯಕ್ಕೆ ಉಪಯೋಗಿಸುವ ನೀರಿನಲ್ಲಿ ಹಾಕಿರುವುದರಿಂದ ಪರಿಸರ ಮಾಲಿನ್ಯವಾಗಿರುವುದಾಗಿ ಹಿಂದೂ ಸಂಘಟನೆಗಳು ದೂರಿವೆ. ಈ ಮುಂಚೆ ಇದೇ ವಿಚಾರವಾಗಿ ಠಾಣೆಗೆ ದೂರು ನೀಡಿದರು ಗೋ ಹತ್ಯೆ ಮಾಡಿ ಗೋವುಗಳ ಖನಿಜವನ್ನು ತಂದು ನೀರಿಗೆ ಬಿಸಾಕುವ ಕೆಲಸ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.
ಹಾಗಾಗಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ದಯವಿಟ್ಟು ಈ ಒಂದು ಕೃತ್ಯವನ್ನು ಮಾಡಿರುವರ ವಿರುದ್ಧ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು. ಗೋ ಹತ್ಯೆ ಮಾಡಿದವರನ್ನು ಗೋ ಹತ್ಯೆ ಮಾಡಲು ಉಪಯೋಗಿಸಿದ ಸ್ಥಳವನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ-https://suddilive.in/archives/17394