ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ, ಎರಡು ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ!

ಸುದ್ದಿಲೈವ್/ಶಿವಮೊಗ್ಗ

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆದಿದ್ದ ಚುನಾವಣೆಯ ಮತಗಳ ಎಣಿಕೆ ಆರಂಭವಾಗುತ್ತಿದೆ.

ಜೂನ್ 3ರಂದು ನಡೆದಿದ್ದ ಮತದಾನಕ್ಕೆ ಇಂದು ಮೈಸೂರಿನ   ಜೆ ಎಲ್ ಬಿ ರಸ್ತೆಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ  ಮತಗಳ ಎಣಿಕೆ ಆರಂಭವಾಗಿದೆ.  ಬೆಳಿಗ್ಗೆ 7:45ಕ್ಕೆ ಮತ ಪೆಟ್ಟಿಗೆಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಮ್ ತೆರವುಗೊಳಿಸಲಾಗಿದೆ.

ಪ್ರಾದೇಶಿಕ ಆಯುಕ್ತ ಜೆ ಸಿ ಪ್ರಕಾಶ್ ರಿಂದ ಸ್ಟ್ರಾಂಗ್ ರೂಮ್ ನ ಬೀಗ ತೆರವುಗೊಞಲಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮತಗಳ ಎಣಿಕೆ‌ ಪ್ರಕ್ರಿಯೆ ಶುರುವಾಗಿದೆ. ಪ್ರತಿ ಕ್ಷೇತ್ರಕ್ಕೂ 14 ಟೇಬಲ್ ಗಳು ಮತ್ತು ಒಂದು ಚುನಾವಣಾಧಿಕಾರಿ ಟೇಬಲ್ ಅಳವಡಿಕೆ ಮಾಡಲಾಗಿದೆ. ಪ್ರತಿ ಟೇಬಲ್ ಗೂ ಒಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರು ನಿಯೋಜನೆ ಮಾಡಲಾಗಿದೆ.

ಪ್ರತಿ ಟೇಬಲ್ ಗೂ ಒಬ್ಬರಂತೆ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು,
ಮತ ಎಣಿಕೆ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 2 ಎಸಿಪಿ, 5 ಪಿಐ, 9 ಪಿಎಸ್ಐ, 13 ಎಎಸ್ಐ, 60 ಪೇದೆಗಳು ಭದ್ರತೆಗೆ ನಿಯೋಜಿಸಲಾಗಿದೆ.

ಪದವೀಧರ ಮತ ಕ್ಷೇತ್ರದ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೊದಲ ಪ್ರಾಶಸ್ತ್ಯ, ಎರಡನೇ ಪ್ರಾಶಸ್ತ್ಯ ನಂತರ ಮತ ಎಣಿಕೆ ಆರಂಭವಾಗಲಿದೆ. ಆದರೆ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ
ಜೆಡಿಎಸ್ ಅಭ್ಯರ್ಥಿ ವಿವೇಕಾನಂದ 1554 ಮತಗಳ ಮುನ್ನಡೆ ಸಾಧಿಸಿದರೆ, ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ ಹಿನ್ನಡೆಯಾಗಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಬೋಜೇಗೌಡರಿಗೆ 4200 ಮತಗಳ ಮುನ್ನಡೆಯಾದರೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಹಿನ್ನಡೆಯಾಗಿದೆ.  ಇನ್ನು ಎರಡು ಸುತ್ತು ಮತ ಎಣಿಕೆ ಮಾತ್ರ ಬಾಕಿ ಉಳಿದಿದೆ. ಭೋಜೇಗೌಡ ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ-https://suddilive.in/archives/16347

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close