ನಟನಂ ಬಾಲ್ಯ ನಾಟ್ಯಂ ಕೇಶವ ಕುಮರ್ ಗೆ ಡಾಕ್ಟರೇಟ್ ಪದವಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನಟನಂ ಬಾಲ್ಯನಾಟ್ಯ ಕೇಂದ್ರದ ಕೇಶವ ಕುಮಾರ್ ಅವರಿಗೆ ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇದರಿಂದ ಇನ್ನುಮುಂದೆ ಡಾ.ಕೇಶವ ಕುಮಾರ್ ಎಂಬ ಬಿರುದಿನಿಂದ ಗುರುತಿಸಲ್ಪಡುತ್ತಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕುಮಾರ್, ಕೊಲ್ಕತ್ತದ ವೆಸ್ಟ್ ಬೆಂಗಾಲ್ ನ ಹಿಂದೂಸ್ತಾನ್ ಆರ್ಟ್ಸ್ & ಮ್ಯೂಸಿಕ್ ಸೊಸೈಟಿ ಅವರ 35 ವರ್ಷದ ಕಲಾ ಸೇವೆಯನ್ನ. ಗುರುತಿಸಿ ನೀಡಿದೆ ಎಂದರು

ಡಾ.ಕೇಶವ ಕುಮಾರ್ ಭರತ ನಾಟ್ಯವನ್ನ 1989 ರಿಂದ ಆರಙಭಿಸಿದ್ದರು. ಮಕ್ಕಳ ಪ್ರತಿಭೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆ ಗೆ ನಟನಂ ಬಾಲ್ಯನಾಟ್ಯ ಕೇಂದ್ರ ಎಂಬ ಹೆಸರನ್ನ ಇಡಲಾಗಿತ್ತು. ಭರತ ನಾಟ್ಯದಲ್ಲಿ ವಿದ್ವತ್, ಕರ್ನಾಟಕ ಸಂಗೀತದಲ್ಲಿ ಸೀನಿಯರ್,

ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಡ್ಯಾನ್ಸ್, ಕುವೆಂಪು ವಿವಿಯಲ್ಲಿ ಕನ್ನಡ ಎಂ.ಎ.ಸಹ ಮುಗಿಸಿದ್ದಾರೆ. ಭರತ ನಾಟ್ಯದ ಮೂಲ ಉದ್ದೇಶವನ್ನ ಇಟ್ಟುಕೊಂಡು ಕರಗನಾಟಕದ ಜಾನಪದ ಕಲೆಗಳಾದ ಸುಗ್ಗಿ ಕುಣಿತ, ಲಂಬಾಣಿ ಕುಣಿತ, ಕೊರವಂಜಿ ನೃತ್ಯ, ಕೋಲಾಟವನ್ನ ಹೇಳಿಕೊಡುವ ಮೂಲಕ ದೇಶದ ಸಂಸ್ಕೃತಿಯನ್ನ ಎತ್ತಿ ಹಿಡಿದಿದ್ದಾರೆ.

ಶಿವಮೊಗ್ಗ, ಭದ್ರಾವತಿ, ಕಡೂರು ಒಟ್ಟು 8 ಶಾಖೆಗಳನ್ನ ತೆರೆದಿದ್ದಾರೆ. 400 ವಿದ್ಯಾರ್ಥಿಗಳು ತರಬೇತಿ ಪಡೆದು ರಾಜ್ಯ, ಹೊರರಾಜ್ಯ, ತೈಲ್ಯಾಂಡ್, ಮಲೇಷಿಯಾ, ದುಬೈಗಳಲ್ಲಿ ಕಾರ್ಯಕ್ರಮವನ್ನ ನೀಡಿ ಉತ್ತಮ ಹೆಸರು ಮಾಡಿದೆ.

ಇದನ್ನೂ ಓರಿ-https://suddilive.in/archives/16589

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close