ಮಹಿಳೆಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದೀರಿ ಠಾಣೆಗೆ ಬರುವಂತೆ ಹೆದರಿಸಿ ವಂಚಿಸಿದ ಪ್ರಕರಣ-ಮೂವರು ಅಂದರ್

ಸುದ್ದಿಲೈವ್/ಶಿವಮೊಗ್ಗ

ನಾವು ಪೊಲೀಸರು,  ಮಹಿಳೆಯೊರ್ವರಿಗೆ ನೀವು ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದ ಮಹಿಳೆ ದೂರು ನೀಡಿದ್ದಾರೆ ಎಂದು ಹೆದರಿಸಿ ಆತನಿಂದ ಫೊನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ.

ಜೂ.23 ರಂದು ಶಿವಮೊಗ್ಗದ ಕೋಟೆ ಗಂಗೂರಿನ ಪ್ರದೀಪ್ ಎಂಬ  23 ವರ್ಷದ ಯುವಕನಿಗೆ ಮೂವರು ಅಪರಿಚಿತರು ಕರೆಮಾಡಿ ‘ನಾವು ಚಿಕ್ಕಮಗಳೂರು ಪೊಲೀಸರು ನೀವು ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು, ಅವರು ದೂರು ನೀಡಿದ್ದಾರೆ ನೀವು ಠಾಣೆಗೆ ಬರುವಂತೆ ಹೇಳಿ ಹೆದರಿಸಿ, ಪ್ರದೀಪ್ ನಿಂದ ಪೋನ್ ಪೇ ಮುಖಾಂತರ ಒಟ್ಟು 23,000/-ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು  ವಂಚಿಸಿದ ಪ್ರಕರಣ  ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ,  ಕಾರಿಯಪ್ಪ ಎ.ಜಿ ಮಾರ್ಗದರ್ಶನದಲ್ಲಿ, ಸೆನ್ ಪ್ರಭಾರ ಪಿಐ ಸಿದ್ದೇಗೌಡ ಹೆಚ್.ಎಂ ಮತ್ತು ಠಾಣೆಯ ಪಿಎಸ್ಐ ಬಸವರಾಜ ಬಿರಾದಾರ  ನೇತೃತ್ವದ,  ವಿರೂಪಕ್ಷಪ್ಪ ವೈ. ಎಸ್,* ಎಎಸ್ಐ, ಹೆಚ್.ಸಿ – ಅವಿನಾಶ್ ಜಿ.ಜಿ, ಧರ್ಮಾನಾಯ್ಕ ಬಿ, ಸಿಪಿಸಿ – ಸಚಿನ್ ಎಸ್.ಆರ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ.

ತನಿಖಾ ತಂಡವು ಜೂ.26 ರಂದು ಪ್ರಕರಣದ ಆರೋಪಿತರಾದ 1) ಇಬ್ರಾಹಿಂ ಬಾದಷಾ @ ರಿಷಿಕ್ ಸ್ಯಾಮ್ @ ರಿಷಿಕ್, 26 ವರ್ಷ ಬನಶಂಕರಿ ಬೆಂಗಳೂರು, 2) ಜನಾರ್ದನ, 21 ವರ್ಷ, ಕುಮಾರ ಸ್ವಾಮಿ ಲೇ ಔಟ್.ಬೆಂಗಳೂರು. ಮತ್ತು 3). ಹನುಮಂತ, 38 ವರ್ಷ, ಕುಮಾರ ಸ್ವಾಮಿ ಲೇ ಔಟ್ ಬೆಂಗಳೂರು ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ರೂ 1500/- ನಗದು ಹಣ ಹಾಗೂ ಮೊಬೈಲ್ ಪೊನ್ ನ್ನು ವಶಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಜಿಲ್ಲಾ  ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ಇದನ್ನೂ ಓದಿ-https://suddilive.in/archives/17870

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close