ಸುದ್ದಿಲೈವ್/ಶಿವಮೊಗ್ಗ
ವಿನೋಬ ನಗರ ಪೊಲೀಸ್ ಠಾಣೆಯಿಂದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಒಬ್ಬ ಆಫ್ರೀಕಾದಿಂದ ಭಾರತಕ್ಕೆ ಬಂದವನು ಮನೆಗೆ ಬಂದಿಲ್ಲ ಎಂದು ದೂರು ದಾಖಲಾದರೆ ಮತ್ತೋರ್ವ ಕೆಲಕ್ಕೆ ಹೋದವನು ವಾಪಸ್ ಬಂದಿಲ್ಲ ಎಂದು ಮಿಸ್ಸಿಂಗ್ ಕಂಪ್ಲೇಂಟ್ ದೂರು ದಾಖಲಾಗಿದೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂ ಖಲೀಲ್ ವುಲ್ಲಾ ಬಿನ್ ಅಬ್ದುಲ್ ಸಮ್ಮದ್ 39 ವರ್ಷ ಎಂಬುವವರು ಪಶ್ಚಿಮ ಆಪ್ರಿಕಾದ ಸಿರಾ ಲಿಯೋನ್ ಎಂಬ ಪ್ರದೇಶಕ್ಕೆ ಕೆಲಸ ಮಾಡಲು ಹೋಗಿದ್ದರು. 2016 ರಲ್ಲಿ ಭಾರತಕ್ಕೆ ವಾಪಸ್ ಭಾರತಕ್ಕೆ ಬಂದಿದ್ದರು. ಆದರೆ ಮನೆಗೆ ಬರದೆ 7 ವರ್ಷದಿಂದ ಕಾಣೆಯಾಗಿರುತ್ತಾರೆ.
ಈ ವ್ಯಕ್ತಿಯೂ ಸುಮಾರು 5.8 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಹೊಂದಿರುತ್ತಾರೆ. ಮತ್ತೊಂದು ಪ್ರಕರಣದಲ್ಲಿ ನಗರದ ಕಿರಣ್ ಜಿ ಬಿನ್ ಗಣೇಶ್ ಎಂಬ 30 ವರ್ಷ ಯುವಕ ಏಪ್ರಿಲ್ 2023 ರಲ್ಲಿ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಈವರೆಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ.
ಈ ವ್ಯಕ್ತಿಯೂ ಸುಮಾರು 5.5 ಅಡಿ ಎತ್ತರ ದುಂಡುಮುಖ ಕಪ್ಪಕೂದಲು ಗೋಧಿ ಮೈ ಬಣ್ಣ ಮನೆಯಿಂದ ಹೋಗುವಾಗ ಲೈಟ್ ಬ್ಲೂ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ಧರಸಿರುತ್ತಾರೆ.
ಈ ಚಹರೆಯ ವ್ಯಕ್ತಿಗಳು ಕಂಡ ಬಂದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ, ದೂ.ಸಂ.: 9480803308 ಅಥವಾ ಕಂಟ್ರೋಲ್ ರೂಂ.ನಂ.: 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿರಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/17818