ನನಗಿನ್ನೂ 76, ಏನಿದು ಈಶ್ವರಪ್ಪನವರ ಲೆಕ್ಕಾಚಾರ?

ಸುದ್ದಿಲೈವ್/ಶಿವಮೊಗ್ಗ

ನನಗಿನ್ನೂ ವಯಸ್ಸು 76 ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದ್ದಾರೆ. ಈ ಹೇಳಿಕೆಯ ಹಿಂದೆ ರಾಜಕೀಯದ ಹಲವು ಲೆಕ್ಕಾಚಾರಗಳಿವೆ.

ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ರಾಯಣ್ಣ ಬ್ರಿಗೇಡ್, ವಿಧಾನ ಸಭೆ ಚುನಾವಣೆಗೆ ಬ್ರೇಕ್, ಹಾವೇರಿಯಲ್ಲಿ ಪುತ್ರನಿಗೆ ಟಿಕೇಟ್ ಕೈತಪ್ಪಿದ ವಿಷಯ, ನಿರ್ದೋಷಿಯಾಗಿದ್ದರೂ ಸಚಿವ ಸ್ಥಾನದಿಂದ ವಂಚನೆ,

ಬಿಜೆಪಿಯಲ್ಲಿ ದಲಿತ, ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಅನ್ಯಾಯದ ಕುರಿತು ಮಾತನಾಡಿ, ಚುನಾವಣೆ ಸೋತ ನಂತರ ತಮ್ಮ ಮುಂದಿನ ನಡೆ ಏನು ಎಂಬುದಕ್ಕೆ ಅವರ ಬಾಯಿಯಿಙದ ಹೊರ ಬಿದ್ದಿದ್ದು ನನಗೆ ಇನ್ಬೂ 76 ವಯಸ್ಸು ಎಂಬುದು ಹಲವು ಲೆಕ್ಕಾಚಾರಗಳು ಉಳಿದುಕೊಂಡಿವೆ.

76 ರ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರಿಕೊಂಡು ಮುಂದಿನ ಚುನಾವಣೆ ಸ್ಪರ್ಧೆ, ಹಿಂದುಳಿದವರಿಗೆ ಅನ್ಯಾಯವಾಗುತ್ತಿದೆ ಎಂದು ಕುರುಬರನ್ನ ನಿರ್ಲಕ್ಷಿಸದಂತೆ, ಪಕ್ಷದ ಶುದ್ದೀಕರಣದ ಮಾತನಾಡಿ, ಒಂದೇ ಜಾತಿಗೆ ಪಕ್ಷ ಸೀಮಿತವಾಗದಂತೆ ಬಿಜೆಪಿ ನಾಯಕರನ್ನ ಕಟ್ಟಿಹಾಕುವ ತಂತ್ರಗಾರಿಕೆ ಉಳಿದಿದೆಯ ಎಂಬ ಚರ್ಚಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಶುದ್ದೀಕರಣಕ್ಕಾಗಿ ಸ್ಪರ್ಧೆ

ಮೊದಲಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆಗೆ ಸಹಕರಿಸಿದವರಿಗೆ ಧನ್ಯವಾದಗಳು. ಅದರ ಜೊತೆಗೆ ನನ್ನ ಸ್ಪರ್ಧೆ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಪಕ್ಷದ ಶುದ್ಧೀಕರಣದ ಬಗ್ಗೆ ಮಾತಾಗುತ್ತಿದೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು.

ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಇರಬಾರದು ಎಂಬುದು ಕೇಂದ್ರ ನಾಯಕರ ಅಪೇಕ್ಷೆಯಂತೆ, ಚುನಾವಣೆಯಲ್ಲಿ ನಡೆದುಕೊಂಡಿರುವೆ. ಇದು ರಾಜ್ಯದಲ್ಲಿಯೂ ಚರ್ಚೆ ನಡೆಯಿತು. ರಾಜ್ಯದಲ್ಲಿ ಪಕ್ಷ ಸಾಮೂಹಿಕ ನಾಯಕ್ವದಲ್ಲಿ ನಡೆಯುತ್ತಿಲ್ಲ ಎಂದು ಈಶ್ವರಪ್ಪ ಆರೋಪಿಸಿದರು.

ಪರಿಷತ್ ಚುನಾವಣೆಯಲ್ಲೂ ಅನ್ಯಾಯ

ಹಿಂದೆ ಅನಂತ ಕುಮಾರ್, ರಾಮಚಂದ್ರೇ ಗೌಡ, ನಾನು, ಬಿಎಸ್ ಯಡಿಯೂರಪ್ಪನವರು ಸೇರಿ ಕುಳಿತು ಯಾವುದೇ ಸಮಸ್ಯೆ ಹಾಗೂ ನಿರ್ಧಾರಗಳನ್ನ ತೆಗೆದುಕೊಳ್ಳವ ಬಗ್ಗೆ ಸಭೆ ನಡೆಸುತ್ತಿದ್ದವಿ. ಈಗ ಅದೆನೆಲ್ಲಾ ಅಪ್ಪ ಮಗ ಇಬ್ವರೇ ನಿರ್ಧರಿಸುವಂತೆ ಕಾಣುತ್ತಿದೆ. ಪರಿಷತ್ ಚುನಾವಣೆಯಲ್ಲೂ ಈ ಪಾರ್ದರ್ಶಕತೆ ಕಾಣಲಿಲ್ಲ ಎಂದು ದೂರಿದರು.

ಬಿಎಸ್ ವೈ ಹಿಂದೆ ಪ್ರಬಲ ಸಮಾಜ ಲಿಂಗಾಯಿತ ಸಮಾಜ ಇದೆ ನಿಜ. ಹಾಗಾದರೆ ಬಿಜೆಪಿಗೆ ಅದು ಒಂದೇ ಸಮಾಜ ಸಾಕಾ, ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ಹಳೇ ಮೈಸೂರಿನಲ್ಲಿ ಮೈತ್ರಿ ಗೆದ್ದಿದೆ. ಹಾಗಾದರೆ ಉಳಿದ ಹಿಂದುಳಿದ ಜನಾಂಗ ಬೇಡವಾ ಎಂದು ಪ್ರಶ್ನಿಸಿದರು.

ದಲಿತ ಮತ್ತು ಹಿಂದುಳಿದ ಜನಾಂಗಕ್ಕೆ ಅನ್ಯಾಯವಾದರೆ ನಿಮಗೆ ಸರಿ ಅನಿಸುತ್ತಾ?

ಈ ಬಾರಿ ಒಬ್ಬ ಕುರುಬರಿಗೂ ಪಕ್ಷದಿಂದ ಟಿಕೇಟ್ ಸಿಗಲಿಲ್ಲ. ಈ ಬಗ್ಗೆ ಚರ್ಚೆ ಆಗಲಿ ಎಂದು ನಾನು ಸ್ಪರ್ಧಿಸಿದ್ದೆ. ಆದರೆ ರಾಜ್ಯದಲ್ಲಿ ಬಿಜೆಪಿ ಗೆದ್ದಿದೆ. ಕಳೆದ ಬಾರಿ ಬಿಜೆಪಿ 25 ಸ್ಥಾನ ಗೆದ್ದಿತ್ತು. ಈ ಬಾರಿ 17 ಕ್ಕೆ ಕುಸಿದಿದೆ. ಇದಕ್ಕೆ ಯಾರು ಕಾರಣ? ವಿಧಾನ ಸಭೆ ಚುನಾವಣೆಯಲ್ಲಿ ದಲಿತ ಮತ್ತು ಹಿಂದುಳಿದ ಸಮಾಜ ಪಕ್ಷವನ್ನ ತಿರಸ್ಕರಿಸಿದ್ದಕ್ಕೆ 66ಕ್ಕೆ ಕುಸಿದೆವು ಎಂದು ಆರೋಪಿಸಿದರು.

ಹಿಂದುಳಿದ ಮತ್ತು ದಲಿತರಿಗೆ ಬಿಜೆಪಿಯಲ್ಲಿ ಶಕ್ತಿ ತುಂಬಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಡೆಸಿದೆವು. ದೊಡ್ಡ ಶಕ್ತಿ ರಾಜ್ಯದಲ್ಲಿ ನಡೆದಾಗ ಸ್ವಾಭಾವಿಕವಾಗಿ ಸಂತೋಷ ಪಡಬೇಕಿತ್ತು. ಆದರೆ ಅಮಿತ್ ಶಾ ಬಳಿ ದೂರು ನೀಡಿ ಸ್ಥಗಿತಗೊಳಿಸಲಾಯಿತು. ಆದರೆ ಬ್ರಿಗೇಡ್ ಮಾಡಿದ್ದರೆ ಬಿಜೆಪಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದರು.

ನಿರ್ದೋಶಿ ಆಗಿ ಹೊರಬಂದರೂ ಸಚಿವ ಸ್ಥಾನ ಕೈತಪ್ಪಿದ್ದೇಕೆ?

ಸಂತೋಷ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಾಗ ನನ್ನ‌ಮೇಲೆ ಆರೋಪ ಬಂತು. ಆದರೆ ರಾಜೀನಾಮೆ ನೀಡಿದೆ. ಸರ್ಕಾರದ ಅವಧಿ ಮುಗಿಯುವ ಮುಂಚೆ 8 ತಿಂಗಳು ಉಳಿದಾಗ ನನ್ನ ಆರೋಪದ ಬಗ್ಗೆ ನಿರ್ದೋಷಿ ಎಂದು ಬಂದರೂ ಮತ್ತೆ ಸ್ಥಾನ ಸಿಗಲಿಲ್ಲ. ಯಾಕೆ ಎಂದು ಪ್ರಶ್ನಿಸಿದರು.

ವಿಧಾನ ಸಭಾ ಚುನಾವಣೆಯ ವೇಳೆ ಟಿಕೇಟ್ ಕೈತಪ್ಪಿಹೋಯಿತು. ಜಗದೀಶ್ ಶೆಟ್ಟರ್ ಮತ್ತು ನನಗೆ ಕರೆ ಮಾಡಿ ಚುನಾವಣೆ ರಾಜಕಾರಣದಿಂದ ಹಿಂದೆ ಸರಿದೆವು. ಪಕ್ಷ ನಿಷ್ಠ ಬಗ್ಗೆ ಅಭಿನಂದಿಸಿದರು. ಮನೆಗೆ ಬಂದ ನಾಯಕರು ನಿಮಗೆ ಮತ್ತು ಪುತ್ರನಿಗೆ ಏನಾದರೂ ಮಾಡಲಾಗುತ್ತದೆ ಎಂಬ ಭರವಸೆ ನೀಡಿದರು.

ನನಗೆ ಸಂಘಟನೆಯಲ್ಲಿ ಜವಬ್ದಾರಿ ಕೇಳಿದಾಗ ಕೊಡುವುದಾಗಿ ಹೇಳಿ ಪುತ್ರ ಕಾಂತೇಶ್ ಗೆ ಹಾವೇರಿಯ ಲೋಕಸಭಾ ಟಿಕೇಟ್ ಕೊಡುವುದಾಗಿ ಭರವಸೆ ನೀಡಿದ್ದರು. ಬ್ರಿಗೇಡ್ ಬೇಡ ಎಂದ್ರು, ನಿರ್ದೋಷಿ ಎಂದು ಬಂದರೂ ಸಚಿವ ಸ್ಥಾನ ನೀಡಲಿಲ್ಲ. ಪುತ್ರನಿಗೆ ಟಿಕೇಟ್ ಕೊಡುವುದಾಗಿ ಹೇಳಿ ಯಾಕೆ ಕೊಡಲಿಲ್ಲ ಎಂದು ಕೇಳಿದ ಈಶ್ವರಪ್ಪ, ಈ ಬಾರಿ ಜನಾದೇಶದಲ್ಲಿ ಬಿಜೆಪಿಗೆ ಪೂರ್ಣ ಬಹುಮತಬರಲಿಲ್ಲ. ಹಿಂದಿನ ವಿಧಾನ ಸಭೆ ಚುನಾವಣೆಯಲ್ಲೂ ಪಕ್ಷ ಪೂರ್ಣ ಶ್ರಮ ಹಾಕಿದ್ದರೆ 66 ಸ್ಥಾನಕ್ಕೆ ಇಳಿಯುತ್ತಿರಲಿಲ್ಲ ಎಂದು ಆರೋಪಿಸಿದರು.

ಲಿಂಗಾಯಿತರು ವೆಂಬಲಿಸಿದರೆ ಸಾಕಾ?

ಬಿಎಸ್ ವೈ ಗೆ ಪ್ರಾರ್ಥಿಸುವೆ. ನೀವು ಕೇಂದ್ರದಲ್ಲೇ ಇರಿ, ಮಗರಿಬ್ಬರು ಕೇಂದ್ರ ಸಚಿವರು ಮತ್ತು ಸಿಎಂ ಆಗಲಿ ಅಭ್ಯಂತರವಿಲ್ಲ. ಆದರೆ ಒಂದೇ ಕುಟುಂಬಕ್ಕೆ ಎಲ್ಲವೂ ಸಿಗುವುದು ಎಷ್ಟು ಸರಿ? ಉಳಿದವರ ಗತಿ ಏನು? ಬಿಜೆಪಿಯಲ್ಲಿ ಶುದ್ದೀಕರಣವಾಗಬೇಕೆಂಬ ಅಭಿಲಾಷೆ ಇದೆಯಲ್ಲ ಅದಕ್ಕೆ ಉತ್ತರವೇನು? ಲಿಂಗಾಯಿತ ಸಮಾಜದ ಪ್ರಭಾವಿ ಆದ ನೀವು ಹಿಂದುಳಿದ ನಾಯಕರನ್ನ ಯಾಕೆ ಬೆಳೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ದೇಶಕ್ಕೆ ಬಿಜೆಪಿ ಒಂದೇ ಆಶಾಕಿರಣ, ಬಿಎಸ್ ವೈ ವಿರುದ್ಧ ದ್ವೇಷವಿಲ್ಲ. ಆದರೆ ನನ್ನ‌ ಪಕ್ಷ ಹಾಳಾಗುತ್ತಿರುವುದು ನೋಡಲಾಗುತ್ತಿಲ್ಲ. ಮೋದಿ ಅಲೆ ಸಂಘಟನೆ ಇರುವ ಕಡೆ ಇದೆ. ಬೇರೆಡೆ ಇಲ್ಲ. ಅಲೆ ಇಲ್ಲವೆಂದಿದ್ದರೆ ಏನಾಗುತ್ತಿತ್ತು ಗೊತ್ತಿಲ್ಲ. ಯಡಿಯೂರಪ್ಪನವರಿಗೆ ನೇರವಾಗಿ ಎಂಎಲ್ ಎ ಎಂಪಿ ಟಿಕೇಟ್ ಕೊಡಲು ಅವಕಾಶ ಇರುವ ಕಡೆ ಕೊಡಿ. ಆದರೆ ಹಿಂದುಳಿದ ನಾಯಕರಿಗೆ ಎಂಎಲ್ ಸಿ ಸ್ಥಾನವನ್ನಾದರೂ ಕೊಡಿ ತುಳಿಯೋದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕೇಂದ್ರ ನಾಯಕರ ಬಳಿ ನಾತನಾಡಿರುವೆ

ಈ ಪ್ರಸ್ತಾಪವನ್ನ ಅಮಿತ್ ಶಾ, ಮೋದಿ ಬಳಿ ಸುಮಾರು ಒಂದು ಗಂಟೆ ಹೇಳಿರುವೆ ಏನೂ ಆಗಲಿಲ್ಲ ಎಂಬ ಕಾರಣಕ್ಕೆ ನಾನು ಲೋಕಸಭೆ ಚುನಾವಣೆ ಸ್ಪರ್ಧಿಸಿದೆ. ಗೆಲ್ಲಲಿಲ್ಲ ಆದರೆ ಚರ್ಚೆ ಆಗಿದೆ. ಇದಕ್ಕೆ ಸರಿಯಾದ ದಿಕ್ಕು ಸಿಗಲಿದೆ. 35 ವರ್ಷ ಈ ಪಕ್ಷಕ್ಕಾಗಿ ದುಡಿದಿರುವೆ. ಹಲವಾರು ಜನ ಚುನಾವಣೆ ಸೋತ ಮೇಲೂ ಜನ ಬೆಂಬಲಿಸುತ್ತಿದ್ದಾರೆ.

ಸಿಎಂ ಮತ್ತು ಡಿಸಿಎಂಗೆ ಮಾನ ಮರ್ಯಾದೆ ಇಲ್ಲ

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ನೀಡಲಿಲ್ಲ ಎಂದರೆ ಸಿಎಂ ಮತ್ತು ಡಿಸಿಎಂಗೆ ಮಾನ ಮರ್ಯಾದೆ ಇಲ್ಲ.ಡೆತ್ ನೋಟ್ ನಲ್ಲಿ ಸಚಿವರ ಮೌಕಿಕ ಆದೇಶ ಎಂದು ಉಲ್ಲೇಖಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಸಚಿವರ ಹೆಸರು ಇಲ್ಲವಲ್ಲಾ ಎಂದರು. ಸಚಿವ ಎಂದರೆ ವಿದೇಶದಿಂದ ಹಾರಿ ಬರಲು ಸಾಧ್ಯನಾ? ಇವರೇ ತಾನೇ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ-https://suddilive.in/archives/16325

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close