ಮನೆಯ ಮುಂದೆ ನಿಲ್ಲಿಸಿದ್ದ ವಾಹನ ಜಖಂ, 7 ಜನರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಹಳೇದ್ವೇಷದ ಹಿನ್ನಲೆಯಲ್ಲಿ ಕಡ್ಡಿಮಧು ಮತ್ತು 6 ಜನರ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೊಸಮನೆ ಬಡಾವಣೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಆಟೋ ದ್ವಿಚಕ್ರ ವಾಹನಗಳನ್ನ ಹಾನಿ ಮಾಡಿರುವ ದಿನದಂದೆ ಈ ಘಟನೆ ನಡೆದಿದೆ. ವಿನೋಬನಗರದ ನರಸಿಂಹ ಬಡಾವಣೆಯಲ್ಲಿರುವ ಕಾರ್ಪೆಂಟರ್ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನ ಜಖಂಗೊಳಿಸಿದ ಘಟನೆಯಲ್ಲಿ 7ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಾರ್ಪೆಂಟರ್ ಮನೆಯ ಮುಂದೆ ಮೇ.29ರಂದು ಮಧ್ಯರಾತ್ರಿ ಮೇ30 ರಂದು‌ಬೆಳಗ್ಗಿನ ಜಾವ ಬಂದಿದ್ದ 7 ಜನ ಯುವಕರು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಕಾರ್ಪೆಂಟರ್ ಗೆ ಎಚ್ಚರವಾಗಿ ಪತ್ನಿಗೆ ಹೊರಗಡೆ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮನೆಯ ದೀಪಹಾಕಿ ಮನೆಯ ಒಳಭಾಗದಿಂದಲೇ ನೋಡುವಾಗ ಯುವಕರು ನಿಮ್ಮ‌ ಮಗ ಎಲ್ಲಿ ನಿಮ್ಮನ್ನ ನಿಮ್ಮ ಮಗನನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಕೂಗಾಡಿದ್ದಾರೆ.‌ ಕೈಯಲಗಲಿ ಆಯುಧ ಹಿಡಿದು ಕೂಗಾಡಿದ್ದಾರೆ. ಮಗ ಇಲ್ಲ ಇಷ್ಟು ಹೊತ್ತಿಗೆ ಯಾಕೆ ಬಂದಿದ್ದೀರ. ಇಲ್ಲೇ ಇದ್ದರೆ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದ್ದಾರೆ.

ಯುವಕರು ಅಲ್ಲಿಂದ ಹೋದ ಮೇಲೆ ಪರಿಶೀಲಿಸಿದಾಗ ಮನೆಯ ಎರಡು ಕಿಟಕಿ ಗ್ಲಾಜುಗಳು, ಹೊಂಡಾ ಆಕ್ಟಿವಾ ಬೈಕ್ ಗೆ ಕಲ್ಲಿನಿಂದ ಒಡೆದು ಹಾನಿಉಂಟುಮಾಡಿದ್ದಾರೆ. 6 ತಿಂಗಳ ಹಿಂದೆ ಕಾರ್ಪೆಂಟರ್ ಮಗನೊಂದಿಗೆ ಜಗಳವಾಗಿತ್ತು. ದ್ವೇಷದಿಂದ ಬಂದು ಯುವಕರು ಗಲಾಟೆ ನಡೆಸಿರುವುದಾಗಿ ದೂರಿನಲ್ಲಿ ದಾಖಲಾಗಿದೆ.

ಕಡ್ಡಿ ಮಧು, ಸೀನಾ, ಕಪಾಲಿ, ಬಾಬು, ಸುಕೇಶ್, ಯಶವಂತ ಕಾರ್ತಿಕ್ ಮತ್ತು ಇತರರ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/16037

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close