ಶಿವಮೊಗ್ಗದಲ್ಲಿ ನಿದ್ದೆಗೆಡೆಸಿದ್ದ ಪ್ರಕರಣ-6 ಜನ ಅರೆಸ್ಟ್

ಸುದ್ದಿಲೈವ್/ಶಿವಮೊಗ್ಗ

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಅಲ್ಲಿದ್ದ ವಾಹನಗಳ ಗ್ಲಾಸ್ ಗಳನ್ನು ಜಖಂ ಗೊಳಿಸಿ ತಲೆಮರೆಸಿಕೊಂಡಿದ್ದ 06 ಜನ ಆರೋಪಿತರನ್ನ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ: 30-05-2024 ರಂದು ರಾತ್ರಿ ದುಷ್ಕರ್ಮಿಗಳು ಶಿವಮೊಗ್ಗ, ನಗರದ ಹೊಸಮನೆ 3ನೇ ಕ್ರಾಸ್‌ನಲ್ಲಿ ಸಾರ್ವಜನಿಕರು ಮನೆಯ ಮುಂಭಾಗ ನಿಲ್ಲಿಸಿದ್ಧ ವಾಹನಗಳ ಗ್ಲಾಸ್ ಗಳನ್ನು ಒಡೆದು ಜಖಂ ಗೊಳಿಸಿದ ಪ್ರಕರಣ ದೂರು ದಾಖಲಾಗಿತ್ತು.

ನೀಡಿದ ದೂರಿನ ಮೇರೆಗೆ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ, ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರಡ್ಡಿ, ಕಾರಿಯಪ್ಪ ಎ.ಜಿ, ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪ, ಮತ್ತೋರ್ವ ಡಿವೈಎಸ್ಪಿ ಸುರೇಶ್ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ರವಿ ಪಾಟೀಲ್ ನೇತೃತ್ವದ ಸಿಬ್ಬಂದಿಗಳನ್ನ ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

Darshan, dasa,

ಜೂ.09 ರಂದು ಆರೋಪಿತರನ್ನ ತನಿಖಾ ತಂಡ 6 ಜನರನ್ನ ಬಂಧಿಸಿದ್ದಾರೆ. 1. ನೀರಜ್ ಬಿ @ ಬಿಕಾ, 21 ವರ್ಷ, ಹೊಸಮನೆ ಸುಬ್ಬಯ್ಯ ಆಸ್ಪತ್ರೆ ಪಕ್ಕ,
2. ಮಣಿಕಂಠ ಎಸ್ @ ಮಾರ್ವಾಡಿ ಮಣಿ, 20 ವರ್ಷ, ಕಾಮಾಕ್ಷಿ ಬೀದಿ, 3. ದರ್ಶನ್ ಎಸ್ @ ದಾಸ, 20 ವರ್ಷ, ಕಾಮಾಕ್ಷಿ ಬೀದಿ
4. ಗಗನ್ ಇ @ ಕಪಾಲಿ ಬಿನ್ ಈಶ್ವರ 19 ವರ್ಷ, ಹೊಸಮನೆ, 5. ರಾಕೇಶ್ @ ಅಪ್ಪು, 20 ವರ್ಷ, ಜಟ್ ಪಟ್ ನಗರ ವಿನೋಬನಗರ, 6. ಶ್ರೀನಿವಾಸ @ ಅಪ್ರಿಲಾ ಸೀನಾ, 24 ವರ್ಷ, ಮೇದಾರ ಕೇರಿ ವಿನೋಬಗರ ಇವರನ್ನ ಬಂಧಿಸಿದ್ದಾರೆ.‌

ಮೇ.29 ರಂದು ಹೊಸಮನೆಯ 3 ನೇ ತಿರುವಿನ ಸುತ್ತಮುತ್ತ, ಮೂರು ಕಾರು, ಎರಡು ಆಟೋ, ದ್ವಿಚಕ್ರಗಳನ್ನ ಪುಡಿಮಾಡಿ ಕಿಡಿಗೇಡಿಗಳು ಎಸ್ಕೇಪ್ ಆಗಿದ್ದರು. ಈ ಘಟನೆ ಎಲ್ಲರ ನಿದ್ದೆಗೆಡೆಸಿತ್ತು. ಆದರೆ ಪೊಲೀಸರ ಖಡಕ್ ಕಾರ್ಯಾಚರಣೆಯಿಂದಾಗಿ ನಿನ್ನೆ ಬಂಧಿಸಲಾಗಿದೆ. ಬಂಧಿತ ಆರೋಪಿತರನ್ನು ವಿಚಾರಣೆ ಮಾಡಿದಾಗ, ಹಳೆಯ ವೈಶಮ್ಯದ ಹಿನ್ನೆಲೆಯಲ್ಲಿ ವಾಹನಗಳ ಗ್ಲಾಸ್ ಗಳನ್ನು ಜಖಂ ಗೊಳಿಸಿರುವುದು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16585

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close