ಸುದ್ದಿಲೈವ್/ಶಿವಮೊಗ್ಗ
ಹೃದಯಾಘಾತದಿಂದ ನಿಧನರಾಗಿದ್ದ ಮಾಜಿ ಎಂಎಲ್ ಸಿ ಭಾನುಪ್ರಕಾಶ್ ಅವರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಗೆ ಮತ್ತೂರಿನ ತುಂಗನದಿಯ ದಡದಲ್ಲಿ ನಡೆಯಲಿದೆ. ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಈಗಾಗಲೇ ಮ್ಯಾಕ್ಸ್ ಆಸ್ಪತ್ರೆಯಿಂದ ಕರೆತಂದು ಮತ್ತೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಾಂಗ್ರಶ್ ನ ಶ್ರೀಕಾಂತ್ ಅಂತಿಮ ದರ್ಶನ ಪಡೆದಿದ್ದಾರೆ. ಬಿಹೆಪಿ ನಾಯಕರು ಅಂತಿಮ ದರ್ಶನ ಪಡೆಯುವ ನಿರೀಕ್ಷೆ ಇದೆ.
ಸ್ಥಳದಲ್ಲಿ ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ್ಯದ ಮುಖಂಡ ಪಟ್ಟಾಭಿರಾಮ್, ಶಾಸಕ ಚೆನ್ನಬಸಪ್ಲ ಸ್ಥಳದಲ್ಲೇ ಇದ್ದು ಮುಂದಿನ ಕಾರ್ಯಕ್ಕೆ ಅಣಿಯಾಗಿದ್ದಾರೆ. 4 ಗಂಟೆಗೆ ಮತ್ತೂರಿನಲ್ಲಿ ಶ್ರದ್ಧಾಂಜಲಿ ಸಭೆ ನಡೆಯಲಿದೆ.
62 ವರ್ಷದ ಭಾನುಪ್ರಾಶ್ ಬಿಕಾಂ ಪದವೀಧರರಾಗಿದ್ದರು. ಯಾದವ್ ಕೃಷ್ಣ, ಹರಿಕೃಷ್ಣ ಇಬ್ಬರೂ ಇಂಜಿನಿಯರ್ ಮುಗಿಸಿದ್ದರೆ ಮೂರನೇ ಮಗ ಚಿನ್ಮಯ್ ಪ್ರಸನ್ನ ಕೃಷ್ಣ ಬಿಇ ವಿದ್ಯಾರ್ಥಿ ಆಗಿದ್ದಾರೆ. ಮಗ ಚಿನ್ಮಯ್ ಚೆನ್ನೈನಲ್ಲಿದ್ದು, ಅವರ ಆಗಮನಕ್ಕೆ ಕಾಯಲಾಗುತ್ತಿದೆ. ಅವರು ಬರುತ್ತಿದ್ದಂತೆ ಅಂತ್ಯಕ್ರಿಯೆ ನಡೆಯಲಿದೆ.
ಭಾನುಪ್ರಕಾಶ್, 1969 ರಲ್ಲಿ ಆರ್ ಎಸ್ ಎಸ್ ನ ಕಾರ್ಯಕರ್ತರಾಗಿ ಸೇವಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು.
1975 ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸನೂ ಮುಗಿಸಿದ್ದರು. 1977-83 ರ ವರೆಗೆ ಆರ್ ಎಸ್ ಎಸ್ ನ ವಿವಿಧ ಜವಬ್ದಾರಿ ನಿರ್ವಹಿಸಿದ್ದಾರೆ. 1983 ರಿಂದ ರಾಜ್ಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ, 1987-93 ರ ವರೆಗೆ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ, 1994-2000 ರವರೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು.
2000-2005 ರಿಂದ ಜಿಪಂ ಸದಸ್ಯ, 2003 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧೆ, 2003 ರಿಂದ 2008 ರ ವರೆಗೆ ಜಿಲ್ಲಾ ಅಧ್ಯಕ್ಷರಾಗಿ ಪುನರ್ ಆಯ್ಕೆ, 2007-2010 ರವರೆಗೆ ಬಿಜೆಪಿಯರಾಜ್ಯ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ವುಧಾನ ಪರಿಷತ್ ಸದಸ್ಯ, ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕ, ಮಲೆನಾಡು ಕ್ಲಸ್ಟರ್ ನ ಪ್ರಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ-https://suddilive.in/archives/17077