ಸುದ್ದಿಲೈವ್/ಶಿವಮೊಗ್ಗ
ಆಲ್ಕೊಳ ವೃತ್ತದಲ್ಲಿದರುವ ಬಾಲಕಿಯರ ಬಾಲಮಂದಿರದ ಸ್ವಾಗತ ಘಟಕದಲ್ಲಿರುವ 6 ಜನ ಮಕ್ಕಳು ತಪ್ಪಿಸಿಕೊಂಡು ಹೋಗಿರುವ ಬಗ್ಗೆ ಅಲ್ಲಿ ಅಧೀಕ್ಷರು ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲಮಂದಿರದಲ್ಲಿ ಸ್ವಾಗತ ಘಟಕದಲ್ಲಿದ್ದ 6 ಜನ ಬಾಲಕಿಯರು ರಕ್ಷಕರು ಮಲಗಿದ್ದ ವೇಳೆ ತಲೆ ದಿಂಬಿನಬಳಿ ಇಟ್ಟಿದ್ದ ಬಾಲಮಂದಿರದ ಬಾಗಿಲ ಬೀಗ ಎತ್ತಿಕೊಂಡು ಹೋಗಿದ್ದಾರೆ. ಜೊತೆಗೆ ರಕ್ಷಕರ ಮೊಬೈಲ್ ಎತ್ತಿಕೊಂಡು ಲಾಕ್ ಮಾಡಿಕೊಂಡು ಹೋಗಿದ್ದಾರೆ.
ಇವರೆಲ್ಲರೂ 15 ರಿಂದ 17 ವರ್ಷದ ಅಪ್ರಾಪ್ತರಾಗಿದ್ದಾರೆ. ಇದರಲ್ಲಿ ಕೆಲವರು ಹೊರ ಜಿಲ್ಲೆಯವರಾದರೆ ಕೆಲವರು ಶಿವಮೊಗ್ಗ ಜಿಲ್ಲೆಯವರೆ ಆಗಿದ್ದಾರೆ.
ಇದನ್ನೂ ಓದಿ-https://suddilive.in/archives/16725
Tags:
ಕ್ರೈಂ ನ್ಯೂಸ್