ಪಾಲಿಕೆ ವ್ಯಾಪ್ತಿಯ 68 ಸಮಸ್ಯೆಗಳ ಬಗ್ಗೆ ಶಾಸಕರ ಎದುರು ದೂರು

ಸುದ್ದಿಲೈವ್/ಶಿವಮೊಗ್ಗ:

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಪ್ರಮುಖವಾದ ೬೪ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿದ್ದು, ಅವುಗಳ ಬಗ್ಗೆ ಜು. ೧೫ರಿಂದ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಅವರು ಇಂದು ತಮ್ಮೊಡನೆ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆಯೋಜಿಸಿದ್ದ ಚಿಂತನ –ಮಂಥನ ಕಾರ್ಯಕ್ರಮದಲ್ಲಿ ನಾಗರಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
ಶಿವಮೊಗ್ಗ ನಗರದಲ್ಲಿ ಒಳಚರಂಡಿ ಅವ್ಯವಸ್ಥೆ, ಆಟೋ ಮೀಟರ್ ಕಡ್ಡಾಯ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸೌಲಭ್ಯವಿದ್ದರೂ ಸ್ಥಳಾವಕಾಶದ ಕೊರತೆ, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೋಗಲಾಡಿಸಲು ಕನ್ಸರ್ವೆನ್ಸಿ ಬಳಕೆ,

ಪಬ್ಲಿಕ್ ಟಾಯ್ಲೆಟ್ ಕೊರತೆ ಮೊದಲಾದ ಗಂಭೀರ ಸಮಸ್ಯೆಗಳನ್ನು ನಾಗಕರಿಕರು ತಮ್ಮ ಗಮನಕ್ಕೆ ತಂದಿದ್ದು, ಇವುಗಳ ಪರಿಹಾರಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.

ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಪಾಲಿಕೆಯಿಂದ ವಸೂಲಿ ಮಾಡುವ ಕಂದಾಯಕ್ಕೆ ಜೂನ್-ಜುಲೈನಲ್ಲಿ ಶೇ. ೫ರಷ್ಟು ತೆರಿಗೆ ವಿನಾಯಿತಿ ಘೋಷಣೆಯಾಗಿದ್ದು, ಅದನ್ನು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಳಿಸಬೇಕು ಎಂಬ ಒತ್ತಾಯಕ್ಕೆ ಶಾಸಕರು ಈ ಸಂಬAಧ ಬರುವ ಮುಂಗಾರು ಅಧಿವೇಶನದಲ್ಲಿ ಆದ್ಯತೆ ಮೇರೆಗೆ ವಿಷಯ ಪ್ರಸ್ತಾಪಿಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.

ನಗರದಲ್ಲಿ ಗಾಂಜಾ ಹಾವಳಿ ಜಾಸ್ತಿಯಾಗಿದ್ದು, ವಿಶೇಷವಾಗಿ ಶಾಲಾ, ಕಾಲೇಜುಗಳ ಆವರಣದ ಸಮೀಪ ರಾಜಾರೋಷವಾಗಿ ಈ ದಂಧೆ ನಡೆಯುತ್ತಿರುವುದರ ಬಗ್ಗೆಯೂ ವರದಿಯಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನಗರದ ಅನೇಕ ಬಡಾವಣೆಗಳಲ್ಲಿ ನಿವೇಶನಗಳಲ್ಲಿ ಮನೆಗಳಿಲ್ಲದಿದ್ದರೂ ಪಾಲಿಕೆ ವತಿಯಿಂದ ಆ ಭಾಗದಲ್ಲಿ ಹೋಗಿರುವ ಪೈಪ್ ಲೈನ್ ಗಳಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ನಾಗರಿಕರು ಶಾಸಕರ ಗಮನಸೆಳೆದಾಗ ಈ ಕುರಿತು ಪಾಲಿಕೆ ಅಧಿಕಾರಿಗಳನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.

ಬಿಡಾಡಿ ನಾಯಿ ಮತ್ತು ಹಂದಿಗಳ ಕಾಟ ಜಾಸ್ತಿಯಾಗಿದ್ದು, ಅವುಗಳ ನಿಯಂತ್ರಣಕ್ಕೆ ಸುಪ್ರೀಂ ಕೋರ್ಟ್ ಕೆಲವೊಂದು ಮಾರ್ಗದರ್ಶಿಗಳನ್ನು ನೀಡಿದೆ. ಆ ಪ್ರಕಾರವೇ ಅವುಗಳ ಹತೋಟಿಗೆ ಕ್ರಮ ಕೈಗೊಳ್ಳಲು ತಾಕೀತು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರಾದ ಕೆ.ವಿ. ವಸಂತ್ ಕುಮಾರ್, ಟಿ.ಆರ್.ಅಶ್ವತ್ಥನಾರಾಯಣಶೆಟ್ಟಿ, ಡಾ. ಸತೀಶ್ ಕುಮಾರ್ ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಡಿ.ಮೋಹನ್ ರೆಡ್ಡಿ, ಎಸ್.ಬಿ.ಅಶೋಕ್ ಕುಮಾರ್ ಮೊದಲಾದವರಿದ್ದರು.

ಇದನ್ನೂ ಓದಿ-https://suddilive.in/archives/17645

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close