6 ಜನರ ವಿರುದ್ಧ ಎಫ್ಐಆರ್

ಸುದ್ದಿಲೈವ್/ಶಿವಮೊಗ್ಗ

ಜೂ.22 ರಂದು ಸಹ್ಯಾದ್ರಿ ಕಾಲೇಜಿನ ಎದುರುಗಡೆ ಕಾರ್ತಿಕ್ ಯಾನೆ ಕಟ್ಟೆ ಕಾರ್ತಿಕ್ ನಿಗೆ ಡ್ರಾಗನ್, ಮಚ್ಚಿನಿಂದ ಹಲ್ಲೆ ಮಾಡಿದ ಜೆರಾಲ್ಡ್, ಜೈಶಾನ್, ದರ್ಶನ್ ಮತ್ತು ಇತರೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಈ ಪ್ರಕರಣ ವೆಂಕಟೇಶ ನಗರದ ವೈನ್ ಸ್ಟೋರ್ ಬಳಿ ಕೊಲೆಯಾದ ಪ್ರಕರಣದಲ್ಲಿ ಕಾರ್ತಿಕ್ ನನ್ನ ಸೇರಿಸಿದಕ್ಕೆ ಸಂಬಂಧಿಸಿದಂತೆ ಗೋಪಾಳಗೌಡ ಬಡಾವಣೆಯ ನಿವಾಸಿ ದರ್ಶನ್ ಮತ್ತು ಕಾರ್ತಿಕ್ ಗೆ ವೈಶಮ್ಯ ಬೆಳೆದಿತ್ತು.

ಜೂ.22 ರಂದು ರಾತ್ರಿ ಸುಮಾರು 8 ಗಂಟೆಗೆ ಎಂಆರ್ ಎಸ್ ವೃತ್ತದಿಂದ ಡಿಯೋ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಎ-1 ಜೆರಾಲ್ಡ್, ಎ-2 ಜೈಶಾನ್, ದರ್ಶನ್ ಇತರೆ ಮೂವರು ವಾಹನಕ್ಕೆ ಅಡ್ಡಕಟ್ಟಿ ಮಚ್ಚು ಮತ್ತು ಡ್ರಾಗನ್ ನಿಂದ ತಲೆಗೆ ಬೀಸಿದ್ದಾರೆ.

ಈ ವೇಳೆ ಕಾರ್ತಿಕ್ ವಾಹನವನ್ನ ಬಿಟ್ಟು ತಪ್ಪಿಸಿಕೊಳ್ಳಲು ಓಡಲು ಆರಂಭಿಸಿದ್ದಾರೆ. ಸಹ್ಯಾದ್ರಿ ಕಾಲೇಜಿನ ಎದುರಿನ ರಸ್ತೆಯಲ್ಲಿ ಮತ್ತೆ ಡ್ರ್ಯಾಗನ್ ನಿಂದ ದಾಳಿ ನಡೆಸಲು ಬಂದಾಗ ಕೈಗೆ ಅಡ್ಡವೊಡ್ಡಿ ತಪ್ಪಿಸಿಕೊಂಡು ಮನೆಕಡೆ ಓಡಿದ್ದಾರೆ. ಈ ವೇಳೆ ಆರೋಪಿತರು ಇವತ್ತು ಬಜಾವಾಗಿದ್ದೀಯ ಇನ್ನೊಮ್ಮೆ ಸಿಗು ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸಿ ಹೋಗಿದ್ದಾರೆ.

ದರ್ಶನ್ ನ ಕುಮ್ಮಕ್ಕಿನಿಂದ ಜೆರಾಲ್ಡ್, ಜೈಶಾನ್ ಮತ್ತು ಇತರರು ಕೊಲೆ ಮಾಡಲು ಯತ್ನಿಸಿದ್ದು ಈ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಎಫ್ಐಆರ್ ನಲ್ಲೂ ಕಾರ್ತಿಕ್ ಯಾಕೆ ಹೊಸಮನೆಯಿಂದ ಸಹ್ಯಾದ್ರಿ ಕಾಲೇಜಿನ ಕಡೆ ಎಂಬುದರ ಬಗ್ಗೆ ದಾಖಲಾಗಿಲ್ಲ.

ನಿನ್ನೆ ಎಸ್ಪಿ ಮಿಥಿನ್ ಕುಮಾರ್ ಸಹ ಆರೋಪಿತರ ವಿರುದ್ಧ ಮೂರು ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಮೊನ್ನೆ ರಾತ್ರಿ ಮೆಗ್ಗಾನ್ ಆಸ್ಪತ್ರೆಯಲ್ಲಿದ್ದ ಕಾರ್ತಿಕ್ ನನ್ನ ಮಣಿಪಾಲ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಇದನ್ನೂ ಓದಿ-https://suddilive.in/archives/17627

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close