ಸುದ್ದಿಲೈವ್/ಶಿವಮೊಗ್ಗ
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಒಟ್ಟು 35 ಅಭ್ಯರ್ಥಿಗಳು ಸಲ್ಲಿಸಿದ್ದು 13 ಕ್ಷೇತ್ರದಿಂದ 35 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ನಾಡಿದ್ದು ಜೂ.22 ರಂದು ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕವಾಗಿದೆ. ಇದರಲ್ಲಿ ಹೊಸನಗರ ಕ್ಷೇತ್ರದಿಂದ ಪರಮೇಶ್ವರ್ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಈ ಕ್ಷೇತ್ರ ಅವಿರೋಧ ಆಯ್ಕೆಯಾಗುವ ನಿರೀಕ್ಷೆ ಇದೆ.
ಉಳಿದ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಇಂದು 35 ಜನ ಅಭ್ಯರ್ಥಿಗಳಿಂದ 193 ನಾಮಪತ್ರ ಸಲ್ಲಿಕೆಯಾಗಿದೆ. ಇಂದು ಒಂದೇ ದಿನ 25 ಜನ ನಾಮಪತ್ರ ಸಲ್ಲಿಸಿದ್ದು ಮೂವರು ಹೊಸಬರಿದ್ದಾರೆ.
ದಿನೇಶ್, ಶಿವಕುಮಾರ್ ಪರಮೇಶ್ ಈ 25 ಜನ ಸಲ್ಲಿಸಿದವರಲ್ಲಿ ಹೊಸಬರಿದ್ದಾರೆ. 13 ಜನ ನಿರ್ದೇಶಕರು ಆಯ್ಕೆಯಾಗಲಿದ್ದು ಯಾರು ಅಧ್ಯಕ್ಷರಿಗೆ 8 ಜನ ಬೆಂಬಲಿಸುತ್ತಾರೋ ಅವರ ಕಡೆಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಸ್ಥಾನ ಸಿಗಲಿದೆ. ಒಟ್ಟಿನಲ್ಲಿ ಎಂಎಲ್ ಎ ಚುನಾವಣೆಗಿಂತ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸ್ಥಾನಕ್ಕೆ ನಡೆಯುವ ಚುನಾವಣೆ ಜೋರಾಗಿದೆ.
ಇದನ್ನೂ ಓದಿ-https://suddilive.in/archives/17362