ಕಾಯಿನ್ ಬೀಳಿಸಿ ಹುಡುಕಿಕೊಡುವಂತೆ ನಟಿಸಿ 3,06,500 ರೂ. ವಸ್ತುಗಳು ಮಂಗಮಾಯ ಮಾಡಿದ ಮಹಿಳೆಯರು

ಸುದ್ದಿಲೈವ್/ಶಿವಮೊಗ್ಗ

ಕೆಎಸ್ಆರ್ ಟಿಸಿ ಬಸ್ ನಲ್ಲಿ ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸಿದ್ದ ಮಹಿಳೆಯನ್ನ  ಸಹ ಪ್ರಯಾಣಿಕರಾಗಿ ಬಂದ ಅಪರಿಚಿತ ಇಬ್ಬರು ಮಹಿಳೆಯರು ಕಾಯಿನ್ ನನ್ನ ಉದ್ದೇಶ ಪೂರಕವಾಗಿ ಬೀಳಿಸಿಗಮನ ಬೇರೆಡೆ ಸೆಳೆದು  ಪರ್ಸ್ ನಲ್ಲಿದ್ದ ಹಣ, ಬೆಲೆಬಾಳುವ ಚಿನ್ನಾಭರಣಗಳು ಸೇರಿದಂತೆ 3.06,500 ರೂ. ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಗಾಡಿಕೊಪ್ಪದ ಮಹಿಳೆ, ತನ್ನ ತವರು ಮನೆ ಚಿತ್ರದುರ್ಗಕ್ಕೆ ಹೋಗಿ ಅಲ್ಲಿಂದ ತಂದೆಯ ಜೊತೆ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಭಾಗಿಯಾಗಲು ಜೂ.23 ರಂದು ಶಿವಮೊಗ್ಗದ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಸೀಟು ಹಿಡಿದು ದುರ್ಗದಕಡೆ ಪ್ರಯಾಣ ಬೆಳೆಸಿದ್ದರು.

ಹಳೆಯ ವಿನಾಯಕ ಚಲನಚಿತ್ರದ ಮಂದಿರದ  ಹತ್ತಿರ ಬಸ್ ಬಂದ ವೇಳೆ ಹಿಂದಿನ ಸೀಟಿನಲ್ಲಿ ಬಂದು ಕುಳಿತ ಇಬ್ಬರು ಅಪರಿಚಿತ ಮಹಿಳೆಯರು ಉದ್ದೇಶ ಪೂರಕವಾಗಿ ನಾಣ್ಯಗಳನ್ನ ಬೀಳಿಸಿದಂತೆ ನಟಿಸಿದ್ದಾರೆ. ನಾಣ್ಯ ಒಮ್ಮೆ ಗಾಡಿಕೊಪ್ಪದ ಮಹಿಳೆ ಕುಳಿತ ಜಾಗದಲ್ಲೇ ಬಿದ್ದಿದೆ. ಅದನ್ನ ಎತ್ತಿಕೊಟ್ಟಿದ್ದಾರೆ. ಮತ್ತೊಮ್ಮೆ ಸೀಟಿನ‌ ಮುಂಭಾಗದಲ್ಲಿ ಬಿದ್ದಿದೆ ಎಂದು ಹೇಳಿದ್ದರಿಂದ ಮುಂದಿನ ಸೀಟ್ ಗೆ ಹೋಗಿ ಹುಡುಕಿ ಎತ್ತಿಕೊಟ್ಟಿದ್ದಾರೆ.

ಚಿತ್ರದುರ್ಗ ತಲುಪಿದ ಮಹಿಳೆ ತಂದೆ ಜೊತೆ ಮೈಸೂರಿಗೆ ತಲುಪಿ ಫ್ರೆಶ ಅಪ್ ಆದ ನಂತರ ಚೆಕ್ ಮಾಡಿಕೊಂಡಾಗ ಬ್ಯಾಗ್ ನಲ್ಲಿದ್ದ ಚಿನ್ಬಾಭರಣ, ಎಟಿಎಂ ನಗದು ಕಳುವಾಗಿರುವ ಬಗ್ಗೆ ಗಮನಕ್ಕೆ ಬಂದಿದೆ.‌ ಆಗ ಮತ್ತೆ ಪತಿಗೆ ಕರೆ ಮಾಡಿ ಮನೆಯಲ್ಲಿಯೇ ಚಿನ್ನಾಭರಣ ಬಿಟ್ಟು ಬಂದಿದ್ದೀನಾ ಹುಡುಕಿ ಎಂದು ಹೇಳಿದಾಗ ಪತಿ ಕೆಲಸದಲ್ಲಿದ್ದೇನೆ ಮನೆಗೆ‌ಹೋಗಿ‌ ಹುಡುಕುವುದಾಗಿ ಹೇಳಿದ್ದಾರೆ.

ಅಷ್ಟುಹೊತ್ತಿಗೆ ಕಾರ್ಯಕ್ರಮ ಮುಗಿದಿದ್ದು ನಂತರ ಪತಿ ಕರೆ ಮಾಡಿ ಪತ್ನಿ ಹೇಳಿದ ವಸ್ತುಗಳು ಇಲ್ಲವೆಂದಿದ್ದಾರೆ. ಆಗ ಅವರು ಬಸ್ ನ ನೆನಪಾಗಿ ಇಲ್ಲಿ ಕಳೆದಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/18016

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close