ಜೂ.28 ಕ್ಕೆ ಡಿಸಿ ಕಚೇರಿ ಎದುರು, ಜೂ.29 ರಿಂದ ಶಿಮೂಲ್ ಎದುರು ಬಿಜೆಪಿ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಠಾಚಾರವನ್ನ ವಿರೋಧಿಸಿ ಮತ್ತು ಚಂದ್ರಶೇಖರ್ ಆತ್ಮಹತ್ಯೆಗೆ ನ್ಯಾಯಕೊಡಿಸುವ ಸಲುವಾಗಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಎಸ್ಟಿ ಮೋರ್ಚಾದ ಅಧ್ಯಕ್ಷ‌ ಹರೀಶ್ ಆರ್ ಜೂ.28 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಅವರ ಅನುಮತಿ ಮೇರೆಗೆ ರಾಜ್ಯಾದ್ಯಂತ ಜಿ

ವಾಲ್ಮೀಕಿ ಅಭಿವೃದ್ಧಿಯ ನಿಗಮದ 187 ಕೋಟಿ ಹಣ 18 ಖಾತೆಗಳಿಗೆ ವರ್ಗಾವಣೆಯಾಗಿ ಬಾರ್, ಅಕ್ಕಸಾಗಲಿಗರ ಹಗಞು ಇತರರ ಅಕೌಂಟ್ ಗೆ ವರ್ಗವಾಗಿದೆ. ಸಿಎಂ ಗಮನಕ್ಕೆ ಬಾರದೆ ಈ ಹಣ ವರ್ಗವಾಗಲು ಸಾಧ್ಯವಿಲ್ಲ. ಹಾಗಾಗಿ ಸಿಎಂ ರಾಜೀನಾಮೆಯ ಬೇಡಿಕೆ ಮಾಡುವುದಾಗಿ ಹೇಳಿದರು.

ತನಿಖೆ ಆರಂಭವಾಗಿದೆ. ಇಬ್ವರು ಅಧಿಕಾರಿಗಳ ವಜಾವಾಗಿದೆ. ಸಚಿವರು ರಾಜೀನಾಮೆ ನೀಡಿದ್ದಾರೆ. ನಮಗೆ ಅನುಮಾನವಿರುವುದು ಸಿಎಂ ಗಮನಕ್ಕೆ ಬಾರದೆ ವರ್ಗವಾಗಲು ಸಾಧ್ಯವಿಲ್ಲ ಎಂಬುದು ನಮ್ಮ ಆಗ್ರಹ ಎಂದರು.

ಶಾಸಕರಾದ ಚೆನ್ನಬಸಪ್ಪ, ಡಿ‌ಎಸ್ ಅರುಣ, ಡಾ.ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ಮೊದಲಾದವರು ಜೂ.28 ರಂದು ಡಿಸಿ ಕಚೇರಿ ಮುತ್ತಿಗೆ ಹಾಕಲಾಗುವುದು. ಪ್ರಕರಣವನ್ನ ಉತ್ತನ ತನಿಝೆ ಸಂಸ್ಥೆಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಎಂದರು.

ಶಿಮೂಲ್ ಎದುರು ಧರಣಿ

ನಂತರ ಮಾತನಾಡಿದ ಮೇಘರಾಜ್ ದರ ಏರಿಸಿ ಸರ್ಕಾರ ಕಂಗೆಟ್ಟ ಸರ್ಕಾರವಾಗಿದೆ. ವಿದ್ಯುತ್, ಪೆ್ರೋಲ್ ಡಿಸೇಲ್ ದರ ಏರಿಕೆ ಮಾಡಿ ಈಗ ಹಾಲಿನ ದರ ಏರಿಸಲಾಗಿದೆ. ಜನರಿಗೆ ಚುನಾವಣೆಯ ಪ್ರತಿಕಾರವಾಗಿ ನೀಡುತ್ತಿದ್ದಾರೆ ಎಂದರು.

ರೈತರಿಗೆ ಉತ್ಪಾದನ ದರ ಕೊಡುವುದಾಗಿ ಹೇಳಿದ್ದ ಸರ್ಕಾರ ಹಣ ಬಿಡುಗಡೆಯಾಗಲಿಲ್ಲ. ಸರ್ಕಾರದ ಬೊಕ್ಕಸ ತುಂಬಿಸಲು ಜನ ಸಾಮಾನ್ಯರ ಮೇಲೆ ಬರೆಹಾಕಲು ಮುಂದಾಗಿದೆ. ಜೂ.29 ರಿಂದ ಹಾಲಿನ ದರ ಇಳಿಕೆ ಮಾಡಲಿಲ್ಲ ಎಂದರೆ ಶಿಮೂಲ್ ಎದುರು ಬಿಜೆಪಿ ರೈತ ಮೋರ್ಚದವತಿಯಿಂದ ಅಹೋರಾತ್ರಿ ಧರಣಿ ಮಾಡುವುದಾಗಿ ಎಚ್ಚರಿಸಿದರು.

ಅಣ್ಣಪ್ಪ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/17803

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close