ಸುದ್ದಿಲೈವ್/ಶಿವಮೊಗ್ಗ
ಕೆ.ಎಸ್.ಆರ್ ಟಿ ಸಿ ಬಸ್ ನಿಲ್ದಾಣದ ಎದುರಿನ ಹೋಟೆಲ್ ವೊಂದರಲ್ಲಿ ಬಿಟ್ಟು ಹೋಗಿದ್ದು ಲಕ್ಷಗಟ್ಟಲೆ ಹಣವಿರುವ ಬ್ಯಾಗ್ ನಲ್ಲಿ ಹಣವಿದ್ದುದ್ದನ್ನ ಗಮನಿಸಿ ಲಫ್ಡಾಯಿಸಿದ ಪ್ರಕರಣವನ್ನ ದೊಡ್ಡಪೇಟೆ ಪೊಲೀಸರು ಬೇಧಿಸಿದ್ದಾರೆ.
ದಿನಾಂಕ: 04-06-2024 ರಂದು ರಾತ್ರಿ ಲೋಕೇಶ್, 26 ವರ್ಷ, ಜಂಬಾನಿ ಗ್ರಾಮ, ಸಾಗರ ತಾಲ್ಲೂಕು ಇವರು ತನ್ನ ಸ್ನೇಹಿತನೊಂದಿಗೆ ಶಿವಮೊಗ್ಗ ಬ್ರೈಟ್ ಹೋಟೇಲ್ ನಲ್ಲಿ ಊಟ ಮಾಡುತ್ತಿದ್ದಾಗ 7,00,000/- ರೂ ನಗದು ಹಣವಿದ್ದ ಬ್ಯಾಗ್ ನ್ನ ಹೋಟೇಲ್ನ ಟೇಬಲ್ ಮೇಲೆ ಬಿಟ್ಟು ಹೋಗಿದ್ದುರು.
ನಂತರ ನೋಡಿಕೊಂಡಾಗ ಕಾರಿನಲ್ಲಿ ಬ್ಯಾಗ್ ಇಲ್ಲದೇ ಇರುವುದು ಕಂಡುಬಂದಿದ್ದು, ವಾಪಾಸ್ ಹೋಟೇಲ್ ಗೆ ಬಂದು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಹೋಟೇಲ್ ನಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್* ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಪತ್ತೆಯಾಗಿವೆ.
ಪೋನ್ ಮಾಡಿ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದಾಗ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಪೋನ್ ಕಟ್ ಮಾಡಿರುತ್ತಾನೆ, ಬೆಳಿಗ್ಗೆ ಹೋಟೇಲ್ ನ ಕೆಲಸಕ್ಕೂ ಕೂಡ ಹೇಮಂತ್ ಬಂದಿರುವುದಿಲ್ಲ,
ಆದ್ದರಿಂದ ನಗದು ಹಣ ಕಳ್ಳತನ ಮಾಡಿಕೊಂಡು ಹೋದ ಹೇಮಂತ್ ಕುಮಾರ್ ಈತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ಕಳುವಾದ ಹಣ ಮತ್ತು ಆರೋಪಿತನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಮತ್ತು ಕಾರಿಯಪ್ಪ ಎ.ಜಿ, ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ, ಬಾಬು ಆಂಜಿನಪ್ಪ, ಮೇಲ್ವಿಚಾರಣೆಯಲ್ಲಿ ಪಿಐ ರವಿ ಪಾಟೀಲ್, ರವರ ನೇತೃತ್ವದಲ್ಲಿ, ಪಿಎಸ್ಐ ಸುರೇಶ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ತಿಮ್ಮಾಭೋವಿ, ಅಣ್ಣಪ್ಪ, ಸುರೇಶ್, ಪಾಲಾಕ್ಷ ನಾಯ್ಕ್, ಸಿಪಿಸಿ – ಚಂದ್ರಾನಾಯ್ಕ್, ಮನೋಹರ್, ನಿತಿನ್, ಪುನಿತ್ ರಾವ್, ಬಸವರಾಜ್ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿತನಾದ ಹೇಮಂತ್ ಕುಮಾರ್ @ ಹೇಮಂತ್, 40 ವರ್ಷ, ಅಶೋಕನಗರ ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ, ಆತನಿಂದ 7,00,000/- ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ. ಪ್ರಕರಣವನ್ನ ಪಿಐ ರವಿ ಸಂಗನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳು 24 ಗಂಟೆಯ ಒಳಗೆ ಪತ್ತೆಹಚ್ಚಿ ಬಂಧಿಸಿದ್ದಾರೆ.