ಸುದ್ದಿಲೈವ್/ಶಿವಮೊಗ್ಗ
ದೆಹಲಿಯಲ್ಲಿ ನಡೆದಿದ್ದ ರೈತ ಹೋರಾಟವನ್ನ ದಕ್ಷಿಣ ಭಾರತದಲ್ಲಿ ಬಲಪಡಿಸಲು ಚಿಂತಿಸಲಾಗಿದೆ. ಅದರ ಹಿನ್ನಲೆಯಲ್ಲಿ ಜೂ.24 ರಂದು ಶಿವಮೊಗ್ಗದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ರೈತ ಮುಖಂಡರ ಸಮಾವೇಶ ಆಯೋಜನೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಂ.ಪಿ. ಕರಿಬಸಪ್ಪ ಗೌಡ ಸರ್ಕಾರಿ ನೌಕರರ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರ ೨೪ ಬೆಳೆಗಳಿಗೆ ನೀಡಿದ ಕನಿಷ್ಟ ಬೆಂಬಲ ಬೆಲೆ ಕೂಡ ಅವೈಜ್ಞಾನಿಕವಾಗಿದೆ. ಬೆಳೆ ವಿಮೆ ನೀತಿ ಅಪರ ತಪರವಾಗಿದೆ ಎಂದು ದೂಷಿಸಿದರು.
ಇದನ್ನೂ ಓದಿ-https://suddilive.in/archives/17388
Tags:
ಸ್ಥಳೀಯ ಸುದ್ದಿಗಳು