ಸುದ್ದಿಲೈವ್/ಶಿವಮೊಗ್ಗ
ವಿ ಕೇರ್ ಟ್ರಸ್ಟ್ ಹರಿಹರ, ವಿಫೋಕ್ಸ್ ವೆಂಚರ್ ಆಚಾರ್ಯ ತುಳಸಿ ಕಾಲೇಜು, ಬೃಂದಾವನ ಹೈಡ್ರೋಪವರ್ಲಿಮಿಟೆಡ್ ಸೇರಿದಂತೆ 8 ವಿವಿಧ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಮರುಸ್ಥಾಪನೆಗೆ ಬೃಹತ್ ಶಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಫಾಕ್ಸ್ ವೆಂಚರ್ ನ ಗಾಯಿತ್ರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.22 ರಂದು ಬೆಳಿಗ್ಗೆ 9-30 ಕ್ಕೆ ಗಾಜನೂರಿನ ಅರಣ್ಯ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಣ್ಣಿನ ಮರಗಳನ್ನಏ ನೆಡುವ ಗುರಿ ಹೊಂದಲಾಗಿದೆ ಎಂದರು.
1000 ಮರಗಳನ್ನ ನೆಡುವ ಗುರಿ ಹೊಂದಲಾಗಿದೆ. ಅಶ್ವಿನಿ ವನದಲ್ಲಿ 500 ಸಸಿ, ಶರಣ್ಯದಲ್ಲಿ 100 ಸಸಿ ಹಾಗೂ ಬೃಂದಾವನ ಹೈಡ್ರೋಪವರ್ ನಲ್ಲಿ ಉಳಿದ ಸಸಿ ನೆಡಲಾಗುತ್ತದೆ. ಇದರ ಹಾರೈಕೆಯನ್ನೂ ಮಾಡಲಾಗುತ್ತದೆ. ಪೇರಲೆ, ಏಳರಿಂದ 8 ಸಸಿಗಳನ್ನ ನೆಡಲಾಗುತ್ತದೆ ಎಂದರು.
ದಾವಣಗೆರೆಯಲ್ಲಿ ಈ ಪ್ರಕೃತಿಯನ್ನ ಬೆಳಸಲು ಯತ್ನಿಸಲಾಗುತ್ತದೆ. ಅರಣ್ಯವನ್ನ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾನಿಮಾಡಿರುವುದರಿಂದ ಈ ಬಗ್ಗೆ ಯೋಚಿಸಲಾಗಿದೆ.ಮುಂದಿನ ದಿನಗಳಲ್ಲೂ ಬಯಲು ಸೀಮೆಯಲ್ಲೂ ಗಿಡ ನೆಡುವ ಕೆಲಸ ಮಾಡಲಾಗುತ್ತಿದೆ. ತಿಂಗಳಲ್ಲಿ ಎರಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಎನ್ ಎಸ್ ಎಸ್ ನ ನಾಗರಾಜ್, ಕಾಜಿನ ಪ್ರಾಂಶುಪಾಲರಾದ ಮಮತಾ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.