ಸುದ್ದಿಲೈವ್
ವಿಶ್ವಕಪ್ T20 ಫೈನಲ್ ಪಂದ್ಯಾವಳಿಯಲ್ಲಿ ಭಾರತ ಗೆದ್ದು ಬೀಗಿದೆ. ಇಂಗ್ಲೇಂಡ್ ನ ಕೆಂಗ್ಸಿಂಗ್ ಟನ್ ನ ಓವಲ್ ಬಾರ್ಬಡಾಸ್ ನಲ್ಲಿ ನಡೆದ ಅಂತಿಮ ಹಣಾಹಣಿಯ ಸೌತ್‌ಆಫ್ರಿಕ ಮತ್ತು ಇಂಡಿಯಾ ನಡುವಿನ ಪಂದ್ಯಾವಳಿಯಲ್ಲಿ ಭಾರತ ರೋಚಕ ಗೆಲವು ಸಾಧಿಸಿದೆ.
T20 ವಿಶ್ವಕಪ್ ಫೈನಲ್ ಪಂದ್ಯಾವಳಿಯಲ್ಲಿ ಭಾರತ ಟಾಸ್ ವಿನ್ ಆಗಿ ಮೊದಲು ಬ್ಯಾಟಿಂಗ್ ಆಡಿತ್ತು. ಆರಂಭಿಕ ಬ್ಯಾಟ್ಸ್ ಮನ್ ಆಗಿ ಬಂದಲ ರೋಹಿತ್ ಶರ್ಮ ಬೇಗ ಔಟ್ ಆದರು. ಆಗ ಭಾರತದ ಸ್ಕೋರ್ 23 ರನ್ ಆಗಿತ್ತು. ಅದರ ಬೆನ್ಬಲ್ಲೇ ರಿಷಬ್ ಪಂತ್ ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.
ವಿರಾಟ್ ಮತ್ತು ಅರ್ಷದ್ ಪಟೇಲ್ ಅವರ ಅಮೋಘ ಬ್ಯಾಂಟಿಂಗ್ ಪ್ರದರ್ಶನದಿಂದ 20 ಓವರ್ ನಲ್ಲಿ ಭಾರತ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಭಾರತದ ಬೌಲಿಂಗನ್ನ ಆರಂಭದಲ್ಲಿ ಅಟ್ಟಾಡಿಸಿದ ಸೌತ್ ಆಫ್ರಿಕಾದ ಬ್ಯಾಟ್ಸ್ ಮನ್ 169 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು.
ಸೌತ್ ಆಫ್ರಿಕಾ 169/8 ವಿಕೆಟ್ ಕಳೆದುಕೊಂಡು ಸೋಲನ್ನ ಒಪ್ಪಿಕೊಂಡಿತು. 15 ನೇ ಓವರ್ ರನ್ನಿಂಗ್ ನಲ್ಲಿ ಬಾಲ್ ಗೆ ರನ್ ಸಮನಾಗಿದ್ದಿತ್ತು. ಆದರೆ ಬುಮ್ರಾ ಬೌಲಿಂಗ್ ಆಫ್ರಿಕಾದವರನ್ನ ಕಂಗೆಡಿಸಿತು. ನಂತರ ಎ.ಸಿಂಗ್ ಮತ್ತು ಪಾಂಡ್ಯ ಬೌಲಿಂಗ್ ನಲ್ಲಿ ದ.ಆಫ್ರಿಕಾ ಒತ್ತಡಕ್ಕೆ ಮಣಿದು ಸೋಲುಂಡಿತು. ಭಾರತಕ್ಕೆ ರೋಚಕ 7 ರನ್ ಗೆಲುವು ಸಾಧಿಸಿತು.
ಇದನ್ನೂ ಓದಿ-https://suddilive.in/archives/18093