ಕಡಿಮೆ ಬಡ್ಡಿಗೆ ಸಾಲ ಕೊಡಿಸುವುದಾಗಿ ನಂಬಿಸಿ 17 ಲಕ್ಷ ರೂ ವಂಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ವಿನೋಬ ನಗರದ ನಿವಾಸಿಗೆ ಸಾಲ ಕೊಡುವುದಾಗಿ ನಂಬಿಸಿ 50% ಹಣ ಡಿಪಾಸಿಟ್ ಮಾಡಿದರೆ ಉಳಿದ ಹಣಕ್ಕೆ ಬಡ್ಡಿಯಿಲ್ಲ ಎಂದು ನಂಬಿಸಿ 17,80,000 ರೂ. ಹಣ ವಂಚನೆ ಮಾಡಿರುವ ಘಟನೆ ನಡೆದಿದೆ.

ಕಳೆದ ವರ್ಷ ನಡೆದ ಘಟನೆ ಮೊನ್ನೆ ಜೂನ್ 9 ರಂದು ವಿನಭ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋಬ ನಗರದ ವಾಸಿ ಪದ್ಮನಾಭ್ ಎಂಬುವರ ಮೊಬೈಲ್ ಗೆ ಸಾಲ ತೆಗೆದುಕೊಳ್ಳಿ ಎಂದು ಅಪರಿಚಿತರಿಂದ ಕರೆ ಬಂದಿರುತ್ತದೆ.

ಕರೆ ಬಂದಾಗ ಪದ್ಮನಾಭ್ ತಿರಸ್ಕರಿಸಿರುತ್ತಾರೆ. ದೇವಸ್ಥಾನದ ಹಣವಿದೆ ಕಡಿಮೆ ಬಡ್ಡಿಗೆ ಸಾಲ ಸಿಗುತ್ತೆ ಎಂದಾಗ‌ ಪದ್ಮನಾಭ್ ಒಪ್ಪಿಕೊಳ್ತಾರೆ. ಒಪ್ಪಿಕೊಂಡ ಪದ್ಮನಾಭ್ ಗೆ ಮಾನೇಜರ್ ನಂಬರ್ ಎಂದು ಒಂದು ನಂಬರ್‌ ಪಾಸಾಗಿರುತ್ತದೆ. ಆ‌ ನಂಬರ್ ಗೆ ಕರೆ ಮಾಡಿದಾಗ ಜಮಖಂಡಿಗೆ ಬನ್ನಿ ಎಂದು ಕರೆಯುತ್ತಾರೆ.

ಜಮಖಂಡಿಗೆ ಹೋದ ಪದ್ಮನಾಭ್ ಗೆ ಮ್ಯಾನೇಜರ್ ಒಬ್ಬ ಯುವಕ ಬರ್ತಾನೆ ಮಾತನಾಡಿಎನ್ನುತ್ತಾನೆ. ಯುವಕ ಇವತ್ತು ದೇವಸ್ಥಾನದ ಟ್ರಸ್ಟ್ ಮತ್ತು ಮ್ಯಾನೇಜರ್ ಅವರ ನಡುವೆ ಸಭೆ ನಡೆಯಬೇಕಿತ್ತು. ನಡೆದಿಲ್ಲ ಮುಂದಿನ ವಿಷಯ ಮ್ಯಾನೇಜರ್ ತಿಳಿಸುತ್ತಾರೆ ಎನ್ನುತ್ತಾನೆ.

ಪದ್ಮನಾಭ್ ಶಿವಮೊಗ್ಗಕ್ಕೆ ವಾಪಾಸಾದ ಮರುದಿನ ಮ್ಯಾನೇಜರ್ ಕರೆ ಮಾಡಿ 50% ಹಣ ತುಂಬಿ ಉಳಿದ ಹಣಕ್ಕೆ ಬಡ್ಡಿರಹಿತ ಸಾಲ ಕೊಡುವುದಾಗಿ ನಂಬಿಸುತ್ತಾನೆ. ಇದಾದ ಸ್ವಲ್ಪ ದಿನಗಳ ಬಳಿಕ ಸಹೋದರಿಯಿಂದ 17,80,000 ರೂ. ಹಣ ಪಡೆದು ಜಮಖಂಡಿಗೆ ಕಾರಿನಲ್ಲಿ ಹೋಗುತ್ತಾರೆ.

ಮ್ಯಾನೇಜರ್ ಇರುವ ಬಿಎಂ ಡಬ್ಲೂ ಕಾರಿನಲ್ಲಿ ಪದ್ಮನಾಭ್ ಬ್ಯಾಗ್ ಸಮೇತ ಕುಳಿತು ಮಾತನ್ನ‌ ಆರಂಭಿಸುತ್ತಿದ್ದಂತೆ ಆತನ ಬಳಿಯಿಂದ ಹಣ ಪಡೆದು ಹಿಂದಿನ ಕಾರಲ್ಲಿ ಟ್ರಸ್ಟಿಗಳಿದ್ದಾರೆ. ವಿಶ್ ಮಾಡಿಬನ್ನಿ ಎಂದು ಹೇಳುತ್ತಾರೆ. ಯಾವಾಗ ಪದ್ಮನಾಭ್ ಕಾರಿನಿಂದ ಇಳಿಯುತ್ತಾರೆ. ಎರಡೂ ಕಾರು ಮುಂದೆ ಸಾಗುತ್ತದೆ.

ಪದ್ಮನಾಭ್ ಕರೆ ಮಾಡಿದಾಗ ನಿನ್ನ ಜೀವ ಉಳಿದಿದ್ದೇ ಹೆಚ್ಚು, ಇನ್ನೂ ಹಣ ಕೇಳಲುಬರಬೇಡ. ಮತ್ತೊಮ್ಮೆ ಕರೆ ಮಾಡಿದರೆ ನಿನ್ನ ಜೀವ ಸಹಿತ ಉಳಿಸೊಲ್ಲ ಎಂದು ಬೆದರಿಕೆ ಹಾಕಲಾಗಿದೆ. ಪದ್ಮನಾಭ್ ಶಿವಮೊಗ್ಗಕ್ಕೆ ಬಂದು ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16729

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close