ಒಂದು ಮೊಬೈಲ್ ಕಳವು ಪ್ರಕರಣ, 15 ಮೊಬೈಲ್ ಕಳವು ಪತ್ತೆಗೆ ದಾರಿ!

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಸಿಎನ್ ರಸ್ತೆಯಲ್ಲಿ ಮೊಬೈಲ್ ನಲ್ಲಿ ಮಾತನಾಡಿ ಕೊಂಡು ಹೋಗುತ್ತಿದ್ದ ದಾವಣಗೆರೆ‌ ಜಿಲ್ಲೆಯ ಹೊನ್ನಾಳಿ ನಿವಾಸಿಯ ಮೊಬೈಲ್ ಕಸಿದುಕೊಂಡು ಹೋಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿ 15 ಮೊಬೈಲ್ ಕಳವು ಪ್ರಕರಣವನ್ನ ಪತ್ತೆಹಚ್ಚಲಾಗಿದೆ.

ಜೂ.8 ರಂದು ಮದ್ಯಾಹ್ನ 2.00 ಗಂಟೆಗೆ ಹೊನ್ನಾಳಿಯ ಹಿರೇಕಲ್ಮಠ ರಸ್ತೆಯ ನಿವಾಸಿ ಕಿರಣ ಕೆ.ಎನ್.ಬಿನ್ ನಾಗರಾಜಪ್ಪ, 24 ವರ್ಷ, ಭದ್ರಾವತಿ ನಗರದ ಸಿ.ಎನ್. ರಸ್ತೆ ಡಬಲ್ ಟಾಕೀಸ್ ಎದುರುಗಡೆ ಫೋನ್ ನಲ್ಲಿ ಮಾತನಾಡುತ್ತಾ ಹೋಗುತ್ತಿರುವಾಗ ಯಾರೋ ಇಬ್ಬರು ವ್ಯಕ್ತಿಗಳು ಹಿರೋ ಸ್ಪೆಂಡರ್ ಬೈಕಿನಲ್ಲಿ ಬಂದು ಅದರಲ್ಲಿ ಒಬ್ಬ ಒತ್ತಾಯ ಪೂರ್ವಕವಾಗಿ ಕೈಯಿಂದ 28,999/- ರೂ ಬೆಲೆಬಾಳುವ ವಿವೊವಿ29 ಇ ಮೊಬೈಲ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದನು.

ಆದ್ದರಿಂದ ಸದರಿ ಮೊಬೈಲ್ & ಆರೋಪಿ ಯನ್ನು ಪತ್ತೆ ಮಾಡಿಕೊಡಬೇಕೆಂದು ಹಳೇನಗರ ಪೊಲೀಸ್ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮೊಬೈಲ್ ಮತ್ತು ಆರೋಪಿಗಳ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ನೇತೃತ್ವದಲ್ಲಿ,

ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಮತ್ತು ಶ್ರೀ ಕಾರಿಯಪ್ಪ ಎ.ಜಿ. ರವರ ಮಾರ್ಗದರ್ಶನದಲ್ಲಿ ಭದ್ರಾವತಿಯ ಪ್ರಭಾರ ಡಿವೈಎಸ್ಪಿ ಗಜಾನನ ವಾಮನ ಸುತಾರ್ ರವರ ಮೇಲ್ವಿಚಾರಣೆಯಲ್ಲಿ ಸಿಪಿಐ ಶೈಲಕುಮಾರ್, ಮಾರ್ಗದರ್ಶನದಲ್ಲಿ ಹಳೇನಗರ ಠಾಣೆಯ ಪಿಎಸ್ಐ ಶರಣಪ್ಪ ಹಂಡ್ರಗಲ್ ಮತ್ತು ಹೆಚ್ ಸಿ ಹಾಲಪ್ಪ, ಸಿಪಿಸಿ ನಾರಾಯಣಸ್ವಾಮಿ, ಪಿಸಿ ಮೌನೇಶ್ ಶೀಕಲ್ ಮತ್ತು ಸಿಪಿಸಿ ಚಿಕ್ಕಪ್ಪ ಸಣ್ಣತಂಗೇರ, ಸಿಪಿಸಿ ಪ್ರವೀಣ್ ಜಿ.ಎ. ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಜೂ.26 ರಂದು ಇಂದು ಸದರಿ ತನಿಖಾ ತಂಡವು ಪ್ರಕರಣದ ಆರೋಪಿತನಾದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಿಲ್ಲೇಹಳ್ಳಿ ಮುಜಾಮಿಲ್ @ ಮುಜ್ಜು ಬಿನ್ ರಜಾಕ್, (19) ಎಳನೀರು ವ್ಯಾಪಾರ ಮಾಡಿಕೊಂಡಿದ್ದವನನ್ನ ಬಂಧಿಸಲಾಗಿದೆ. ಅರೋಪಿತನಿಂದ ಸುಮಾರು 29,000/- ರೂ ಬೆಲೆಬಾಲುವ ಮೊಬೈಲ್ & ಕೃತ್ಯಕ್ಕೆ ಬಳಸಿದ ಹೀರೋ ಹೊಂಡಾ ಸ್ಟೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹಾಗೂ ಸಿ-ಪೋರ್ಟಲ್ ನಲ್ಲಿ ವರದಿಯಾದ ಮೊಬೈಲ್ ಕಾಣೆ ಪ್ರಕರಣಗಳಲ್ಲಿ ಸುಮಾರು 2,50,000/- ರೂ ಬೆಲೆಬಾಳುವ 15 ವಿವಿಧ ಕಂಪನಿಯ ಮೊಬೈಲ್ ಗಳನ್ನು ಸಹ ವಶಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಕುಮಾರ್ ರವರು ಅಭಿನಂದಿಸಿದ್ದಾರೆ.

ಇದನ್ನೂ ಓದಿ-https://suddilive.in/archives/17846

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close