ಗಾಂಜಾ ಡ್ರೈವ್-15 ದಿನಗಳಲ್ಲಿ 61 ಗಾಂಜಾ ಪ್ರಕರಣ ದಾಖಲು

ಸುದ್ದಿಲೈವ್/ಶಿವಮೊಗ್ಗ

ಮಾದಕ ವ್ಯಸನ ಮುಕ್ತ ದಿನದ ಅಂಗವಾಗಿ ಜೂ.26 ರಂದು ಅಂತರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಜೂ 8 ರಿಂದ ಇಲ್ಲಿಯವರೆಗೆ ಗಾಂಜಾ ತಡೆಯುವ ನಿಟ್ಟಿನಲ್ಲಿ 61 ಪ್ರಕರಣ ದಾಖಲಿಸಿ 5,56,560 ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಗಾಂಜಾ ಹಾವಳಿ ತಡೆಗೆ ಇಲಾಖೆ ಪಣತೊಟ್ಟಿದೆ. ಏರಿಯಾ ಡಾಮಿನೇಷನ್ ನಲ್ಲು ಗಾಂಜಾ ಪತ್ತೆಯಾಗಿದೆ. 450 ಪಿಟಿಕೇಸ್ ನಲ್ಲಿ 54 ಗಾಂಜಾ ಪಾಸಿಟಿವ್ ಬಂದಿದೆ ಎಂದರು.

ಸಾರ್ವಜನಿಕರು ತಮ್ಮ ಸುತ್ತಮುತ್ತ ಗಾಂಜಾ ಸೇವನೆ ಮಾರಾಟ ಕಂಡುಬಂದರೆ, ವ್ಯಕ್ತಿಗಳು ಅನುಮಾನಸ್ಪದವಾಗಿ ಕಂಡು ಬಂದರೆ ಪೊಲೀಸರಿಗೆ ತಿಳಿಸಬಕು ಎಂದು ಮನವಿ ಮಾಡಿದ ಎಸ್ಪಿ ಅವರು ಎಲ್ಲಾ ಪ್ರಕರಣಗಳಲ್ಲಿ ಗಾಂಜಾವನ್ನ ಬೆಂಗಳೂರಿನಿಂದ ತರಲಾಗುತ್ತಿರುವುದು ಪತ್ತೆಯಾಗಿದೆ ಎಂದರು.

ಕಾಲೇಜಿನ ಸರೌಂಡಿಂಗ್ಸ್ ನಲ್ಲಿ ಗಾಂಜಾ ಅವೇರ್ ನೆಸ್ ಮೂಡಿಸಲಾಗುತ್ತಿದೆ. ಬೀಟ್ ಮೀಟಿಂಗ್ ಸಹ ಮಾಡಲಾಗುತ್ತಿದೆ. ಪಿಯು ಕಾಲೇಜಿನ್ನ ಟಾರ್ಗೆಟ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. 20-25 ರ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಗಾಂಜಾ ಸೇವನೆಗೆ ತುತ್ತಾಗುತ್ತಿದ್ದಾರೆ. ಕೂಲಿ ಕೆಲಸ ಮಾಡಿದವರು ಹೆಚ್ಚು ಸೇವನೆ ಮಾಡುತ್ತಿರುವುದು ಪತ್ತೆಯಾಗಿದ ಎಂದರು.

ಹೊಸಮನೆಯಲ್ಲಿ ಗಾಂಜಾ ಪ್ರಕರಣದಲ್ಲಿ ಗಾಂಜಾ ಸೇವನೆ ಮಾಡಿದ ಮಗನ ವಿರುದ್ಧವೇ ಪೋಷಕರು ಬಂದು ಗಮನಕ್ಕೆ ತಂದಿದ್ದರು. ಆತನವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈ ರೀತಿ ಪೋಷಕರು ತಮ್ಮ ಮಗನ ಬಗ್ಗೆ ಕಾಳಜಿ ವಹಿಸಿ ಬಂದರೆ ಕ್ರಮ ವಹಿಸಲಾಗುವುದು.  ಎಂಡಿಎಂ ಸಹ ಸಾಗರದಲ್ಲಿ ಪತ್ತೆಯಾಗಿತ್ತು ಅದರ ಬಗ್ಗೆಯೂ ಜಾಗೃತಿ ಮೂಡಿಸಲಾಗಿದೆ ಎಂದರು.

15 ದಿನಗಳ ಗಾಂಜಾ ಡ್ರೈವ್ ನಲ್ಲಿ ಜಿಲ್ಲೆಯಲ್ಲಿ ಗಾಂಜಾ ಸೇವನೆ 54, ಗಾಂಜಾ ಮಾರಾಟ 6, ಹಸಿ ಗಾಂಜಾ 1 ಸೇರಿ ಒಟ್ಟು 61 ಪ್ರಕರಣಗಳು ಪತ್ತೆಯಾಗಿದೆ. ಇದರಲ್ಲಿ 79 ಜನ ಆರೋಪಿಗಳು ಪತ್ತೆಯಾಗಿದ್ದಾರೆ. ಒಟ್ಟು 15.363 ಗ್ರಾಂ ಗಾಂಜಾ ಪತ್ತೆಯಾಗಿದೆ 5,56,560 ರೂ. ಹಣ ಮೌಲ್ಯ ಕಟ್ಟಲಾಗಿದೆ ಎಂದರು.

ಇದನ್ನೂ ಓದಿ-https://suddilive.in/archives/17551

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close