ಸುದ್ದಿಲೈವ್/ಹಾವೇರಿ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿವಮೊಗ್ಗ ಜಿಲ್ಲೆಯ 13 ಮಂದಿ ಮೃತಪಟ್ಟಿದ್ದಾರೆ.
ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ. 17 ಜನರಿದ್ದ ಟಿಟಿಯಲ್ಲಿ 13 ಜನ ಸಾವನ್ಬಪ್ಪಿದ್ದಾರೆ.
ಬೆಳಗಾವಿ ಚಿಂಚೋಳ್ಳಿ ಮಾಯಮ್ಮ ದೇವಿ ದರ್ಶನ ಪಡೆದು ಶಿವಮೊಗ್ಗಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬ್ಯಾಡಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಆದರ್ಶ ಎಂಬ ಯುವಕ ಹೊಸದಾಗಿ ಟಿಟಿ ಖರೀದಿಸಿದ್ದನು. ಕಳೆದ ವಾರದಹಿಂದಷ್ಟೆ ಪಡೆದು ಬಾಡಿಗೆ ಹೋಗಿದ್ದ ಯುವಕ ಇಂದು ಕುಟುಂಬಸ್ಥರ ಜೊತೆ ದೇವಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುವಾಗ ಈ ಘಟನೆ ಸಂಭವಿಸಿದೆ.
17 ಜನರಿದ್ದ ಟಿಟಿಯಲ್ಲಿ ಸಧ್ಯಕ್ಕೆ ಅರ್ಪಿತಾ, 9 ವರ್ಷದ ಮಗು ಸೇರಿದಂತೆ ಇನ್ನಿಬ್ಬರಿಗೆ ತೀವ್ರ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. 13 ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲ ಶಿವಮೊಗ್ಗ ಮೂಲದವರಾಗಿದ್ದಾರೆ.
ಟಿಟಿ ವಾಹನದಲ್ಲಿದ್ದ 13 ಮಂದಿ ಮೃತಪಟ್ಟಿದ್ದಾರೆ. ಎಲ್ಲರು ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಎಮ್ಮೆಹಟ್ಟಿ ಗ್ರಾಮದವರು ಎನ್ನಲಾಗುತ್ತಿದೆ.
ಇದನ್ನೂ ಓದಿ-https://suddilive.in/archives/17953