ಸುದ್ದಿಲೈವ್/ಶಿವಮೊಗ್ಗ
ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆಯಾಗಿವೆ. ಎಮ್ಮೆಗಳನ್ನ ಕದ್ದುಕೊಂಡು ಹೋಗಿದ್ದು ಇವುಗಳನ್ನ ಹುಡುಕಿಕೊಡಿ ಎಂದು ಮಾಲೀಕರು ತುಂಗ ನಗರ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.
ವಡ್ಡಿನಕೊಪ್ಪದ ಶಿವರಾಜ್ ಎಂಬುವರು ತಮ್ಮ ಎಮ್ಮೆಗಳನ್ನ ಹೊಡೆದುಕೊಂಡು ಸೂಳೆಬೈಲಿನ ಸಂತೋಷ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ 22 ಎಮ್ಮೆಗಳನ್ನ ಮೇಯಿಸಲು ಬಿಟ್ಟು ಚಹ ಕುಡಿಯಲು ಅಂಗಡಿಗೆ ಹೋಗಿದ್ದಾರೆ.
ಚಹ ಕುಡಿಯಲು ಹೋದ ವೇಳೆಯೂ ಸಂಜೆಯಾದ ಕಾರಣ ಚಹಕುಡಿದು ವಾಪಾಸ್ ಬಂದಾಗ 22 ಎಮ್ಮೆಗಳು ಮೇಯುತ್ತಿದ್ದ ಜಾಗದಲ್ಲಿ ಇರಲಿಲ್ಲ. ಎಮ್ಮೆಗಳು ಮನೆಗೆಹೋಗಿರಬೇಕೆಂದು ಶಿವರಾಜ್ ಮನೆಗೆ ಹೋಗಿದ್ದಾರೆ. ಮನೆಗೂ ಬಾರದಿದ್ದಾಗ ಶಿವರಾಜ್ ಗಾಬರಿಗೊಂಡಿದ್ದಾರೆ.
ಎಮ್ಮೆಗಳಾಗಲಿ ಹಸುಗಳಾಗಲಿ ತಾವಿದ್ದ ಹಟ್ಟಿಗೆ ಬಂದೇ ಬರುತ್ತವೆ ಎಂಬುದು ಶಿವರಾಜ್ ಗೆ ಗೊತ್ತಿದ್ದರೂ. ಯಾರಾದರು ಕದ್ದುಕೊಂಡು ಹೋದರೆ ಅವುಗಳು ಬರುವುದು ಹೇಗೆ ಎಂಬ ಚಿಂತೆಗೆ ಜಾರಿದ್ದಾರೆ. ಆದರೆ ಮಧ್ಯರಾತ್ರಿಯ 12 ವೇಳೆಗೆ ನಿಗೂಢವಾಗಿ 12 ಎಮ್ಮೆಗಳು ಹಟ್ಟಿಗೆ ವಾಪಾಸಾಗಿವೆ.
ಉಳಿದ 10 ಎಮ್ಮೆಗಳು ಮಿಸ್ಸಿಂಗ್ ಆಗಿವೆ. ಈ ನಿಗೂಡತೆಯ ಬಗ್ಗೆ ಎಫ್ಐಆರ್ ನಲ್ಲಿ ಎಲ್ಲೂ ವಿವರಣೆಗಳಿಲ್ಲ. ವಾಪಾಸ್ ಬಾರದ 10 ಎಮ್ಮೆಗಳನ್ನ ಹುಡುಕಿಕೊಡಿ ಎಂದು ಶಿವರಾಜ್ ತುಂಗನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದಿದ್ದು ಜೂ.15 ರಂದು ದೂರು ದಾಖಲಾಗಿದ್ದು ನಿನ್ನೆ. ಎಲ್ಲಡೆ ಹುಡುಕಿದರೂ ಎಮ್ಮೆಗಳು ಪತ್ತೆಯಾಗದ ಕಾರಣ ನಿನ್ನೆ ಶಿವರಾಜ್ ತಡವಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/17726