ಸುದ್ದಿಲೈವ್/ಶಿವಮೊಗ್ಗ
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮೃತರ ಸ್ವಂತ ಗ್ರಾಮವಾದ ಹೊಳೆಹೊನ್ನೂರು ಬಳಿಯ ಎಮ್ಮೆಹಟ್ಟಿಯಲ್ಲಿ ಭೀಕರ ಅಪಘಾತದಲ್ಲಿ 13 ಜನರ ಸಾವು ಕಂಡಿದ್ದಾರೆ. ನಾಲ್ವರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಸಂಬಂಧಿಕರನ್ನ ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಬಿಕ್ಕಿ ಬಿಕ್ಕಿ ಅಳುತ್ತಿರುವ ಸಂಬಂಧಿಕರು. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರ ಕ್ಕೆ ಸಿದ್ಧತೆ ಮಾಡಲಾಗಿದೆ.
ಟಿಟಿ ಚಾಲಕ ಆದರ್ಶ, ನೀರುಗಂಟಿ ಕೆಲಸ ಮಾಡುತ್ತಿದ್ದ ತಂದೆ ನಾಗೇಶ, ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಮ್ಮ, ಸಂಬಂಧಿಕರಾದ ಭಾಗ್ಯ, ಮಾನಸ, ಸುಭದ್ರತಾಯಿ
ಸೇರಿದಂತೆ ೧೩ ಜನರು ಅಪಘಾತದಲ್ಲಿ ಸಾವು ಕಂಡಿದ್ದಾರೆ.
ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿ ಪರಶುರಾಮ್, ರೂಪ ದಂಪತಿ ಸಹ ಮೃತ ಪಟ್ಟಿದ್ದಾರೆ. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನ ಸರ್ಕಲ್ ಮಂಜುಳಬಾಯಿ, ಮಂಜುಳ,ಕಡೂರು ತಾಲೂಕಿನ ಬೀರುರೂ ನಿವಾಸಿ ಅಂಜು, ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ ಪುಣ್ಯ ಬಾಯಿ ಸಾವನ್ನಪ್ಪಿದ್ದಾರೆ.
೧೫ ದಿನದ ಹಿಂದೆ ಅಷ್ಟೇ ಟಿಟಿಯನ್ನು ಖರೀದಿ ಮಾಡಿದ್ದ ಆದರ್ಶ್ ಈ ಹಿನ್ನಲೆಯಲ್ಲಿ ತಂದೆ- ತಾಯಿ ಹಾಗೂ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ಕರೆದುಕೊಂಡು ಹೋಗಿದ್ದನು. ನೋಡ್ರಿ ಏನಿಲ್ಲ ಸಂಪ್ರದಾಯದಂತೆ ಪ್ರತಿ ವರ್ಷವೂ ಮನೆದೇವರ ದರ್ಶನಕ್ಕೆ ಆದರ್ಶ ಮತ್ತು ಅವರ ಕುಟುಂಬದವರು ದರ್ಶನಕ್ಕೆ ತೆರಳಿದ್ದರು.
ಐ ಎ ಎಸ್ ಮಾಡಬೇಕು ಎಂದುಕೊಂಡಿದ್ದ ಅಂಧೆ ಮಾನಸ ಸೇರಿದ್ದು ಮಸಣಕ್ಕೆ.
ಅಂಧರ ಕ್ರೀಡಾ ಕೂಟಗಳಲ್ಲಿ ಸಾಧನೆ ಮಾಡಿದ ಮಾನಸ ಎಸ್ ಅಪಘಾತಕ್ಕೆ ಬಲಿಯಾಗಿದ್ದಾರೆ. ಹಾವೇರಿಯ ಬ್ಯಾಡಗಿ ಗುಂಡೇನಹಳ್ಳಿ ಕ್ರಾಸ್ ನ ಭೀಕರ ಅಪಘಾತಕ್ಕೆ ಬಲಿಯಾದ ಪ್ರತಿಭಾವಂತೆ. ಭಾರತದ ಅಂಧರ ಫುಟ್ಬಾಲ್ ತಂಡದ ನಾಯಕಿಯಾಗಿದ್ದರು.
ಹುಟ್ಟು ಕುರುಡಿಯಾಗಿದ್ದ ಮಾನಸ ಪಂಜಾಬ್ ಹಾಗೂ ದೆಹಲಿ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು ಮಾನಸ. ಕರ್ನಾಟಕದ ಅಂಧರ ಬಾಲಕಿಯರ ಕ್ರಿಕೆಟ್ ತಂಡವನ್ನು ಮಾನಸ ಪ್ರತಿನಿಧಿಸಿದ್ದರು.
ಹಾವೇರಿಯಲ್ಲಿ ಕುಟುಂಬಸ್ಥರು ಪ್ರತಿಭಟನೆ
ಬ್ಯಾಡಗಿ ತಾಲೂಕು ಗುಂಡೇನಹಳ್ಳಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಸಾವನ್ನಪ್ಪಿದ್ದು 13 ಜನರ ಮೃತ ದೇಹವನ್ನ ಹಾವೇರಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ಮರಣೋತ್ತರ ಪರೀಕ್ಷೆಯ ವೇಳೆ ಕುಟುಂಬಸ್ಥರು ಮೃತರಿಗೆ ತಲಾ 10 ಲಕ್ಷಪರಿಹಾರ ಘೋಷಿಸದ ವರೆಗೆ ಹೆಣ ತೆಗೆಯಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಸರ್ಕಾರ ಮೃತರಿಗೆ ಎರಡು ಲಕ್ಷ ಘೋಷಣೆ ಮಾಡಿದೆ.
ಇದನ್ನೂ ಓದಿ-https://suddilive.in/archives/17978