ಸುದ್ದಿಲೈವ್/ಶಿವಮೊಗ್ಗ
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಆರಂಭಗೊಂಡಿದ್ದು, ನಿನ್ನೆ ಮತ್ತು ಇಂದು ಒಟ್ಟು 10 ಜನ ಆಕಾಂಕ್ಷಿಗಳಿಂದ 39 ನಾಮಪತ್ರಗಳು ಸಲ್ಲಿಕೆಯಾಗಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯು ಜೂ. 28 ರಂದು ನಡೆಯಲಿದೆ. ನಿನ್ನೆಯಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನಿನ್ನೆ ನಾಲ್ಕು ಜನ ನಾಮಪತ್ರ ಸಲ್ಲಿಸಿದ್ದರು. ಇಂದು 6 ಜನ ನಾಮಪತ್ರ ಸಲ್ಲಿಸಿದ್ದಾರೆ. ಜೂ. 20 ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
13 ಜನ ನಿರ್ದೇಶಕರಾಗಿ ಆಯ್ಕೆಯಾಗಲು ಅವಕಾಶವಿದ್ದು ಇದುವರೆಗೂ 10 ಜನಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಸಂಸ್ಕರಣ ಸಂಘಗಳಿಂದ ಇಬ್ಬರು, ಪಟ್ಟಣ ಸಹಕಾರ ಸಂಘ ಮತ್ತು ವ್ಯವಸಾಯೇತರ ಸಹಕಾರ ಸಂಘದ ವತಿಯಿಂದ ಇಬ್ಬರು ಮತ್ತು ಇತರ ಸಹಕಾರ ಸಂಘಗಳಿಂದ ಇಬ್ಬರು ಸದಸ್ಯರ ಆಯ್ಕೆ ಪ್ರಕ್ರಿಯೆ ಇದಾಗಲಿದೆ.
ಜಗದೀಶ್ವರ್, ದುಗ್ಗಪ್ಪ ಗೌಡ, ಆರ್ ಎಂ ಮಂಜುನಾಥ್ ಗೌಡ, ಅಗಡಿ ಲೋಕೇಶ್, ಎಸ್ಪಿ ದಿನೇಶ್, ರವೀಂದ್ರ, ಶ್ರೀಕಾಂತ್, ಎಸ್ ಕೆ ಮರಿಯಪ್ಪ, ಶಿವಶಂಕರ್, ಹನುಮಂತಪ್ಪ ನಾಮಪತ್ರ ಸಲ್ಲಿಸಿದವರಾಗಿದ್ದಾರೆ.
ಇದನ್ನೂ ಓದಿ-https://suddilive.in/archives/16837