ಬಿ.ವೈಆರ್ ಗೆ1 ಲಕ್ಷ ಮತಗಳ ಅಂತರದ ಮುನ್ನಡೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ 11 ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ರಾಘವೇಂದ್ರ ಲಕ್ಷದ ಅಂತರದ ಮುನ್ನಡೆ ಕಾದುಕೊಂಡಿದ್ದಾರೆ.

ಕಳೆದ ಭಾರಿ 2.23ಲಕ್ಷ ಮತಗಳ ಅಂತರದಿಂದ ಮಧು ಬಂಗಾರಪ್ಪನವರರಿಂದ ಗೆದ್ದಿದ್ದ ಬಿ.ವೈ.ರಾಘವೇಂದ್ರ ಈ ಬಾರಿ 11 ನೇ ಸುತ್ತು ಮುಗಿಯುವ ವೇಳೆಗೆ 99,568 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿ.ವೈಆರ್, 3,54,207 ಮತಗಳನ್ನ‌ಪಡೆದರೆ, ಗೀತ ಶಿವರಾಜ್ ಕುಮಾರ್, 2,48,280 ಮತಗಳನ್ನ ಪಡೆದಿದ್ದಾರೆ. ಈಶ್ವರಪ್ಪನವರಿಗೆ 14,144 ಮತಗಳನ್ನ ಪಡೆದಿದ್ದಾರೆ. ಇದರಿಂದ ಈಶ್ವರಪ್ಪನವರು ಮೂರನೇ ಸ್ಥಾನದಲ್ಲಿದ್ದಾರೆ. 18 ಸುತ್ತಿನ ಮತ ಎಣಿಕೆಯೊಂದಿಗೆ ಲೋಕಸಭಾ ಚುನಾವಣೆ ಎಣಿಕೆ ಮುಕ್ತಾಯಗೊಳ್ಳಲಿದೆ.

ಇದರೊಂದಿಗೆ ಬಿವೈ ರಾಘವೇಂದ್ರ ಅವರ‌ ಅಭಿಮಾನಿಗಳು ಸಂಸದರನ್ನ‌ ಹೆಗಲ ಮೇಲೆ ಏರಿಸಿಕೊಂಡು ಸಂಭ್ರಮಾಚರಿಸಿರುವ ದೃಶ್ಯ ಕಂಡು ಬರುತ್ತಿದೆ.‌ 12 ನೇ ಸುತ್ತಿನ ಮತ ಎಣಿಕೆ ಆರಂಭದಲ್ಲಿ ಬಿವೈ ಆರ್ 123986 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಿಂದ ಅಧಿಕ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ-https://suddilive.in/archives/16214

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close