ಈ ಬಾರಿ ಚುನಾವಣೆ ಕಾಂಗ್ರೆಸ್ ಗ್ಯಾರೆಂಟಿ Vs ಮೋದಿ ಗ್ಯಾರೆಂಟಿ ನಡುವೆ ನಡೆಯುತ್ತಿದೆ-ಮಂಜುನಾಥ್ ಭಂಡಾರಿ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಮತ್ತು‌ಮೋದಿ ಗ್ಯಾರೆಂಟಿಯ ಮೇಲೆ ಚುನಾವಣೆ ನಡೆಯುತ್ತಿದೆ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ತಿಳಿಸಿದರು.

ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸಿದರು. ರಾಜ್ಯಕ್ಕೆ ಬಂದ ಅವರ ಪಾದಯಾತ್ರೆಯಲ್ಲಿ  2000 ಸಲಹೆಗಳನ್ನ ಜನರಿಂದ ಪಡೆಯಲಾಗಿತ್ತು. ಈ ಸಲಹೆಗಳಲ್ಲಿ ಐದು ಗ್ಯಾರೆಂಟಿಯನ್ನ ರಚಿಸಿ ಜನರಿಗೆ ಹಂಚಿದ್ದೇವೆ.

ಈಗ ಮತ್ತೆ ಪಾದಯಾತ್ರೆ ನಡೆಸಿ ಸಲಹೆ ಪಡೆದು ಐದು ಗ್ಯಾರೆಂಟಿಯನ್ನ ಕಾಂಗ್ರೆಸ್ ಪಕ್ಷ ನೀಡಲು ಮುಂದಾಗಿದೆ. ಆದರೆ ಬಿಜೆಪಿ ಏಕಮೇವ ನಾಯಕನ ಸುತ್ತ ಗ್ಯಾರೆಂಟಿ ನೀಡಲಾಗುತ್ತಿದೆ.‌ ಪಕ್ಷವನ್ನ ಹೊರಗಿಟ್ಟು ಮೋದಿ ಗ್ಯಾರೆಂಟಿ ನೀಡಲಾಗಿದೆ ಎಂದರು.

ವಿದೇಶದಲ್ಲಿರುವ 6 ಟ್ರಲಿಯನ್ ಡಾಲರ್ ಕಪ್ಪುಹಣವನ್ನ ತರಲಾಗುವುದು ಎಂದು ಮೋದಿ ಅವರು ಭಾಷಣ ಮಾಡಿದ್ದರು. ಬಿಜೆಪಿ ಅಧಿಕಾರ ಕ್ಕೆ ಬಂದರೆ 60 ತಿಂಗಳಲ್ಲ 60 ದಿನಗಳ‌ಲ್ಲಿ ಕಪ್ಪುಹಣ ತರುವುದಾಗಿ ಹೇಳಿದ ಪರಿಣಾಮ 2014 ರಲ್ಲಿ  ಅಧಿಕಾರಕ್ಕೆ ಬಂತು. ಇವತ್ತಿಗೆ 10 ವರ್ಷ ಕಳೆದಿದೆ ಯಾವ ಕಪ್ಪುಹಣ ಬರಲಿಲ್ಲ. 2019 ರಲ್ಲಿ ಪುಲ್ವಾಮಾ ದಾಳಿ ನಡೆಸಲಾಯಿತು. ಆದರೆ ಪುಲ್ವಾಮಾ ದಾಳಿ ನಡೆದಿದ್ದು ಮತ್ತು ಭದ್ರತಾ ವೈಫಲ್ಯದ ಬಗ್ಗೆ ಯಾವ ಸ್ಪಷ್ಟನೆ ಇಲ್ಲ ಎಂದರು.

ಆಗಿನ ರಾಜ್ಯಪಾಲ ಸತ್ಯಪಾಲ್ ಪುಲ್ವಾಮಾ ದಾಳಿಗೂ ಮುಂಚೆ 11 ಬಾರಿ ಗುಪ್ತಚರ ವರದಿಯ ಆಧಾರ ಮೇಲೆ ದಾಳಿ ನಡೆಯುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಸಲಾಗಿತ್ತು.‌ ಈ ಬಗ್ಗೆ ಸ್ಪಷ್ಟನೆ ನೀಡಲಾಗಲಿಲ್ಲ.  400 ರೂ. ಇದ್ದ ಸಿಲಿಂಡರ್ ನ್ನ 900 ರೂ. ಎರಿಕೆಯಾಯಿತು ಬಿಜೆಪಿ ಮಾತನಾಡಲಿಲ್ಲ. ಈಗ 400 ಸ್ಥಾನ ಪಡೆಯುವುದಾಗಿ ಘೋಷಿಸಿದ್ದ ಮೋದಿ ದೇಶದ ಮೊದಲನೇ ಹಂತದ ಚುನಾವಣೆ ನಡೆದ ನಂತರ ಅಬ್ ಕೀ ಬಾರ್ ಚಾರ್ ಸೌ ಪಾರ್ ಅಭಿಯಾನದ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಈಗ ಮುಸ್ಲೀಂ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕಾರಣದ ಭ್ರಷ್ಠರ ಬಗ್ಗೆ, ಚೈನಾ ದೇಶದ ಭೂಮಿಯ ಅತಿಕ್ರಮಣದ ಬಗ್ಗೆ  ಬಿಜೆಪಿ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು. ಸಬ್ ಕ ಸಾತ್ ಸಬ್ ಕ ವಿಶ್ವಾಸ್ ಅಭಿಯಾನ ಈಗ ಸಬ್ ಕಾ ದೋಖಾ ಎಂಬುದು ಸಾಭೀತಾಗುತ್ತಿದೆ ಎಂದರು.

ಕಳೆದ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಗೆ 43% ಮತಬಿದ್ದಿದೆ. ಅಂದರೆ 18 ಲೊಕಸಭೆ ಕ್ಷೇತ್ರದಲ್ಲಿ ಪಕ್ಷ ಸ್ಪಷ್ಟ ಗೆಲುವಿನ ಸೂಚನೆಯಾಗಿದೆ. 1 ಕೋಟಿ 43 ಸಾವಿರ ಕುಟುಂಬಕ್ಕೆ ಗ್ಯಾರೆಂಟಿ ನೀಡಲಾಗುತ್ತಿದೆ. ಅಂದರೆ 5 ಕೋಟಿ ಕುಟುಂಬ ಅನುಕೂಲವಾಗುತ್ತಿದೆ ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣವಿದೆ ಎಂದರು.

ಇದನ್ನೂ ಓದಿ-https://suddilive.in/archives/13941

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close