Girl in a jacket

KSRTC ಬಸ್ ಗೆ ಮಹಿಳೆ ಬಲಿ

ಸುದ್ದಿಲೈವ್/ಸಾಗರ

ಬಸ್ ಚಕ್ರಕ್ಕೆ ಸಿಲುಕಿ 38 ವರ್ಷದ ಮಹಿಳೆ ಸಾವುಕಂಡಿದ್ದಾರೆ. ಪ್ರವಾಸಕ್ಕೆ ಬಂದ ಮಹಿಳೆ ಕೆಎಸ್ ಆರ್ ಟಿಸಿ ಬಸ್ ಗೆ ಬಲಿಯಾಗಿದ್ದಾರೆ.

ತಾಲ್ಲೂಕಿನ ಸಿಗಂದೂರು ಬಳಿಯ ಹೊಳೆ ಬಾಗಿಲಿನಲ್ಲಿ ಸರ್ಕಾರಿ ಬಸ್ ಬಂತು ಅಂತ ಮುನ್ನುಗ್ಗಿದ ಮಹಿಳೆ ಅಚಾನಕ್ಕಾಗಿ ಬಸ್ ನ ಚಕ್ರಕ್ಕೆ ಸಿಲುಕಿ ಸಾವುಕಂಡಿದ್ದಾರೆ. ಈ ಬಸ್ ಸಾಗರದಿಂದ ಹೊಳೆಬಾಗಿಲಿಗೆ ಸಂಚರಿಸುವ ಬಸ್ ಆಗಿದೆ.

ಬಸ್ ಇನ್ನೂ ನಿಲ್ದಾಣದ ಬಳಿ ಬಂದು ನಿಲ್ಲುವುದಕ್ಕೂ ಮೊದಲು ನೂಕುನುಗ್ಗಲಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಾವುಕಂಡ ಮಹಿಞಲೆಯನ್ನ ಧಾರವಾಡ ಜಿಲ್ಲೆಯ ಕಲಘಟಕಿಯ ನಿವಾಸಿ ಮಂಜುಳ (38) ಎಂದು ಗುರುತಿಸಲಾಗಿದೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಈ ಘಟನೆ ನಡೆದಿದೆ. ಕೆಎಸ್ ಆರ್ ಟಿಸಿ ಶಿವಮೊಗ್ಗ ವಿಭಾಗದ ಸಂಚಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಸ್ ಸಧ್ಯಕ್ಕೆ ಠಾಣೆಯಲ್ಲಿ ನಿಲ್ಲಿಸಾಗಿದೆ.

ಇದನ್ನೂ ಓದಿ-https://suddilive.in/archives/14932

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close