ಈ ಚುನಾವಣೆ ಮತದಾರ ಮತ್ತು ರಾಜಕಾರಣಿಗಳ ನಡುವಿನ ವಿಶ್ವಾಸ ಬೆರೆಸುವ ಚುನಾವಣೆಯಾಗಿದೆ-ಮಧು ಬಂಗಾರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಣ್ಣ,ನಿಗೆ ಹೆಲ್ತ್ ಇಶ್ಯುಸ್ ಇದೆ ಐದು ದಿನ‌ಬಿಟ್ಟು ಬರಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು, ಹಾಗಂತ ನಟರಿಗೆ ದೊಡ್ಡಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿಲ್ಲ. ಐದು ದಿನ ಬಿಟ್ಟು ಮತ್ತೆ ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದರು.

ವಿಶ್ವಾಸದ ಮೇಲೆ ಜನ ಮತಹಾಕಿದ್ದಾರೆ. ಜನ ಮಾತುಕೊಟ್ಟ ಪ್ರಕಾರ ನಾವು ನಡೆದುಕೊಂಡ ಪರಿಣಾಮ ಈ ಚುನಾವಣೆಯನ್ನ ಎದುರಿಸಲು ಸಾಧ್ಯವಾಯಿತು. ಗ್ಯಾರೆಂಟಿ ರಚನೆ, ಅನುಷ್ಠಾನದಲ್ಲಿ ನಾನು ಇದ್ದೆ. ಹಾಗಾಗಿ ಗ್ಯಾರೆಂಟಿ ರಚಿಸಲಾಯಿತು. ಗ್ಯಾರೆಂಟಿ  ಜಾರಿಗೊಳಿಸದಿದ್ದರೆ ಸಮಸ್ಯೆಯಾಗುತ್ತಿತ್ತು ಎಂದರು.

ಗ್ಯಾರೆಂಟಿ ಜಾರಿಯಾದ ಕಾರಣ ಮತದಾನ ಹೆಚ್ಚಿಗೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಷಾಗಿರುವುದು ರಾಜ್ಯ ಸರ್ಕಾರದ ಗ್ಯಾರೆಂಟಿಯಿಂದ ಮಾತ್ರ. ಕೇಂದ್ರದಿಂದ ಅಲ್ಲ. ಮತದರರಲ್ಲಿ ಆಸಕ್ತಿ ಹೆಚ್ಚಾಗಿರುವುದು ಕಾಂಗ್ರೆಸ್ ನಿಂದ ಸಿಕ್ಕಿದೆ ಎಂದರು.

ನಾಯಕನ ಮುಖನೋಡಿ ಮತಹಾಕಿ ಎನ್ನಲಿಲ್ಲ. ಸಹಕಾರ ಯಾರು ಮಡಿದ್ದಾರೆ ಅವರಿಗೆ ಮತ ಹಾಕಿ ಎಂದಿರುವೆ. ಬಹಳ ದೊಡ್ಡ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಗೆದ್ದೇ ಗೆಲ್ತಾರೆ ಎಂದರು.

ಲೋಕಸಭಾ ಚುನಾವಣೆ ಕೇವಲ ಒಂದೇ ಚುನಾವಣಗೆ ಸೀಮಿತವಲ್ಲ ಮುಂದಿನ ಜಿಪಂ ತಾಪಂ ಮತ್ತು ಪಾಲಿಕೆ ಚುನಾವಣೆಗೆ ಸುಲಭವಾಗಲಿದೆ. ಮತದಾರರು ಮತ್ತು ರಾಜಕಾರಣಿಗಳ ನಡುವೆ ವಿಶ್ವಾಸವನ್ನ ಈ ಚುನಾವಣೆ ನಡೆದಿದೆ ಎಂದರು.

ಮತದಾನದ ಶೇರ್ ವೋಟಿಂಗ್ ಎಷ್ಟಾಗಲಿದೆ ಎಂಬ ಮಾಧ್ಯಮಗಳ ಪ್ರಶ್ಬೆಗೆ ಉತ್ತರಿಸಿದ ಅವರು ಭವಿಷ್ಯ ನುಡಿಯಲ್ಲ. ಜನ ದೊಡ್ಡಮಟ್ಟದಲಗಲಿ ಬೆಂವಲಿಸುವ ನಿರೀಕ್ಷೆ ಇದೆ. ಬಸ್ ಸ್ಟ್ಯಾಂಡ್ ನಲ್ಲಿ ಕುಳಿತು ಭವಿಷ್ಯ ಹೇಳಲಾಗದು ಎಂದರು.

ಬರಗಾಲದ ಬಗ್ಗೆ ಮತ್ತೆ ದೊಡ್ಡಪ್ರಮಾಣದ ಹೋರಾಟ ನಡೆಯಬೇಕಿದೆ. ಚುನಾವಣೆ ಮುಗಿದಿದೆ. ಮಮೆರಡು ಮಳೆ ಕೈಕೊಟ್ಟಿದೆ.‌ ಮಳೆ ಬಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಬರಲಿಲ್ಲ. ಜಿಕ್ಲಾಧಿಕಾರಿಗಳಿ ಸೂಕ್ತ ಸೂಚನೆ ನೀಡಲಾಗಿದೆ. ಕಾಡಾನೆ ದಾಳಿಗೆ ಓರ್ವ ಸಾವುಕಂಡಿದ್ದಾರೆ. ಪರಿಹಾರ ನೀಡಲಾಗುತ್ತದೆ. ಇಂತಹ ಅನಾಹುತಗಳು ನತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದು ತಿಳಿಸಿದರು.

ರೇವಣ್ಣ ಪ್ತಕರಣದಲ್ಲಿ ಮೈತ್ರಿ ಪಕ್ಷಗಳು ಸಿಬಿಐ ತನಿಖೆ ನಡೆಸಲು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾತನಾಡೊಲ್ಲ. ಕಾನೂನು ಏನು ಮಾಡಲಿದೆ ಕಾದು ನೋಡಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/14447

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close