Girl in a jacket

ತ್ರಿಬ್ಬಲ್ ಮರ್ಡರ್ ಪ್ರಕರಣ-ಮಾವನ ಮಗನನ್ನ ಕರೆತರುವಾಗ ನಡೆಯಿತಾ ಕಾಳಗ?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಮೂವರು ರೌಡಿಗಳ ತಲೆ ಉರುಳಿದೆ. ಈ ಮೂವರು ಹತ್ಯೆಗೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. 18 ಜನರನ್ನ ಬಂಧಿಸಲಾಗಿದೆ.

ಪ್ರಮುಖ ಆರೋಪಿ ಆದಿಲ್ ಎಂಬುವನನ್ನ ಬಂಧಿಸಲಾಗಿದೆ. ಆದಿಲ್ ಮತ್ತು ಯಾಸಿನ್ ನಡುವೆ ಗಲಾಟೆಯಾಗಿದ್ದು ಹಳೇದ್ವೇಷದಿಂದ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ. ಎರಡು ಎಫ್ಐಆರ್ ದಾಖಲಾಗಿದ್ದು  ಒಂದರಲ್ಲಿ  ಹಳೇಯ ದ್ವೇಷದಿಂದ ಶೋಯೆಬ್ ಮತ್ತು ಗೌಸ್ ನ ಹತ್ಯೆಯಾಗಿದೆ ಎಂದರೆ

ಮತ್ತೊಂದು ಎಫ್ಐಆರ್ ನಲ್ಲಿ ಭರ್ಮಪ್ಪ ಬೀದಿಗೆ ಗಾಂಜಾ ವ್ಯಸನಿ ಮಾವನ ಮಗನನ್ನ ಕರೆದುಕೊಂಡು ಬರುವ ವಿಷಯದಲ್ಲಿ ಆದಿಲ್ ಗ್ಯಾಂಗ್ ಜಗಳ ತೆಗೆದಿದೆ ಎಂದು ದಾಖಲಾಗಿದೆ.

ಲಷ್ಕರ್ ಮೊಹಲ್ಲಾದಲ್ಲಿ ಜನತಾ ಮಟನ್ ಸ್ಟಾಲ್ ನಡೆಸುತ್ತಿದ್ದ ಯಾಸಿನ್ ಖುರೇಶಿಯ ಮಾವನ ಮಗ ಬುರಾನ್ ಗಾಂಜಾ ವ್ಯಸನಿಯಾಗಿದ್ದು ಆತನಿಗೆ ವ್ಯಸನ ಮುಕ್ತರನ್ನಾಗಿ ಮಾಡಲು ಭರ್ಮಪ್ಪ ಬೀದಿಯ ಮನೆಯಿಂದ ಲಷ್ಕರ್ ಮೊಹಲ್ಲಾದ ತನ್ನ ಮನೆಗೆ ಕರೆದುಕೊಂಡು ಬಂದಿದ್ದನು.

ಯಾವಾಗ ಬುರಾನ್ ಮೇ.5 ರಂದು ವಾಪಾಸ್ ಭರ್ಮಪ್ಪ ಬೀದಿಗೆ ಹೋದಾಗ ಯಾಸಿನ್ ಆತನನ್ನ ಕರೆದುಕೊಂಡು ಬರಲು ಭರ್ಮಪ್ಪ ಬೀದಿಗೆ ತೆರಳಿದ್ದನು. ಅಲ್ಲಿ ಆದಿಲ್, ಇಬು, ಫರ್ವಿಜ್ ಮತ್ತು ಇತರೆ 50 ಜನ ಸೇರಿ ಬೀದಿ ದೀಪ ಆರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಾದ ನಂತರ ಗಾಂಜಾ ವ್ಯಸನಿಯನ್ನ ಬಿಡಿಸಲು ನಗರದ ಖ್ಯಾತ ನರ್ಸಿಂಗ್ ಹೋಮ್ ಗೆ ದಾಖಲಿಸಿದ್ದಾಗ ಮೇ.8 ರಂದು ಲಷ್ಜರ್ ಮೊಹಲ್ಲಾದ  ಮಟನ್ ಸ್ಟಾಲ್ ಮುಂದೆ ಆದಿಲ್ ಪರ್ವಿಜ್ ಹಾಗೂ ಫರಾನ್ ಮತ್ತು ಇತರೆ 50 ಜನ ಸೇರಿ ಆಯುಧಗಳಿಂದ ಯಾಸಿನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಮೃತ ಯಾಸಿನ್ ನ ತಂದೆ ದೂರು ದಾಖಲಿಸಿದ್ದಾರೆ.

ಗಾಂಜಾ ಬಿಡಿಸಲು ಮಾವನ ಮಗನನ್ನ ಕರೆದುಕೊಂಡು ಬರುವ ವಿಷಯದಲ್ಲಿ ಗಲಾಟೆ ಆಗಿದೆ, ಇದರಲ್ಲಿ ಆದಿಲ್, ಫರ್ವೇಜ್, ಫರಾನ್ ಮತ್ತು 50 ಜನರ ವಿರುದ್ಧ 307 ಪ್ರಕರಣ ದಾಖಲಾಗಿದೆ‌. ಈ ಎಫ್ಐಆರ್ ದಾಖಲಾಗುವಾಗ ಯಾಸಿನ್ ಬದುಕಿದ್ದರಿಂದ 307 ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು 8 ಜನರನ್ನ ಬಂಧಿಸಿದ್ದಾರೆ.

ಇದರ ಜೊತೆಗೆ ಶೋಯೇಬ್ ಯಾನೆ ಸೆಬು ಅವರ ತಾಯಿ ದೂರು ದಾಖಲಿಸಿದ್ದು ಆದಿಲ್ ಮತ್ತು ಯಾಸಿನ್ ನಡುವೆ ಯಾವುದೋ ಹಳೇಯ ದ್ವೇಷವಿದ್ದು ಹಳೆಯ ದ್ವೇಷದ ಪ್ರತೀಕರಾಕ್ಕಾಗಿ ಆದಿಲ್ ಶೋಯೆಬ್ ಮತ್ತು ಸಯ್ಯದ್ ಗೌಸ್ ಮತ್ತಿರನ್ನ ಕರೆದುಕೊಂಡು ಲಷ್ಕರ್ ಮೊಹಲ್ಲಾದ ಯಾಸಿನ್ ಖುರೇಶಿಗೆ ಕೇಳಲು ಹೋದಾಗ ಗಲಾಟೆಯಾಗಿದೆ.

ಗಲಾಟೆಯಲ್ಲಿ ಯಾಸಿನ್ ಖುರೇಶಿಯ ಹುಡುಗರಾದ ಆರ್ಯನ್ ಯಾನೆ ಅರಿಯನ್ ಯಾನೆ ನೂರುಲ್ಲಾ ಖಾನ್, ರಿಜ್ವಾನ್ ಯಾನೆ ರಿಜ್ವಾನ್ ಪಾಷ, ಶಹಬಾಜ್ ಯಾನೆ ಯಾನೆ ಹವಳ, ಅಜರ್ ಹಾಗೂ 15-20 ಜನ ಗೌಸ್ ಮತ್ತು ಸೆಬುವಿನ ಕೊಲೆಗೆ ಕಾರಣರೆಂದು ಮೃತನ ತಾಯಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ 10 ಜನರ ಬಂಧನವಾಗಿದೆ.

ಇದನ್ನೂ ಓದಿ-https://suddilive.in/archives/14536

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು