ಪೆಟ್ರೋಲ್ ಬಂಕ್ ನಲ್ಲಿ ನಡೆದಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಕಾಲೇಜು ಹುಡುಗರಿಂದ ಗನ್ ತೋರಿಸಿರುವ ಘಟನೆ ನಡೆದಿದ್ದು ಪೆಟ್ರೋಲ್ ಬಂಕ್ ನಲ್ಲಿ ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಶಿವಮೊಗ್ಗದ ಬಾಲರಾಜ್ಅರಸ್ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರು ಪೆಟ್ರೋಲ್ ತುಂಬಿಸಿಕೊಳ್ಳಲು ಬಂದಿದ್ದಾರೆ.

ಅದೇ ವೇಳೆ ಆಟೋವೊಂದು ಗ್ಯಾಸ್ ತುಂಬಿಸಿಕೊಳ್ಳಲು ಅದೇ ಬಂಕ್ ಗೆ ಬಂದಿದ್ದಾನೆ. ಆಟೋಗೆ ದ್ವಿಚಕ್ರ ವಾಹನ ಸವಾರರು ಚಮಕಾಯಿಸಿದ್ದಾರೆ.

ಚಮಕಾಯಿಸಿದ ಯವಕರಿಗೆ ಆಟೋದವನು ಬೈದಿದ್ದಾನೆ. ಈ ವೇಳೆ ಬೈಕ್ ನಲ್ಲಿದ್ದ ಯುವಕರು ಗನ್ ತೋರಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಯುವಕರಿಗೆ ಬೈದು ಜಯನಗರ ಪೊಲೀಸರನ್ನ ಸ್ಥಳಕ್ಕೆ ಕರೆಸಿ ಹಸ್ತಾಂತರಿಸಿದ್ದಾರೆ.

ಈ ಕುರಿತು ಎಸ್ಪಿಮಿಥುನ್ ಕುಮಾರ್ ಘಟನೆ ಕುರಿತು ಪೊಲೀಸರು ತನಿಖೆನಡೆಸುತ್ತಿದ್ದಾರೆ. ಅವರು ತೋರಿಸಿರುವ ಗನ್ ಯಾವುದು ಮತ್ತು ಕಾಲೇಜು ಹುಡುಗರ ವಯಸ್ಸುಗಳನ್ನ ವಿಚಾರಿಸಲಾಗುತ್ತಿದೆ. ವಿಷಯವನ್ನ ನಂತರ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ-https://suddilive.in/archives/15391

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close